Vijayapura: ಮತಯಂತ್ರಗಳನ್ನು ಒಡೆದು, ಪುಡಿಗಟ್ಟಿದ ಗ್ರಾಮಸ್ಥರು! ಚುನಾವಣಾಧಿಕಾರಿ ಕಾರು ಉರುಳಿಸಿ, ಸಿಬ್ಬಂದಿಗೂ ಥಳಿಸಿದರು!

Vijayapura villagers broke voting machines and beat up staff

Vijayapura: ಕರ್ನಾಟಕದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲಾ ಮತದಾರ ಪ್ರಭುಗಳು ಬಂದು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಆದರೆ, ಅಲ್ಲೆಲ್ಲಿ ಅಹಿತಕರ ಘಟನೆಗಳು ನಡೆದಿದ್ದು, ವಿಜಯಪುರ(Vijayapura) ದಲ್ಲಿ ಮತಯಂತ್ರಗಳನ್ನು ಪುಡಿ ಪುಡಿ ಮಾಡಿದ ಘಟನೆ ನಡೆದಿದೆ.

 

ಹೌದು, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ(Basavanabagevadi) ತಾಲೂಕಿನ ಮಸಬಿನಾಳ(Masabinala) ಗ್ರಾಮದಲ್ಲಿ ಘಟನೆ ನಡೆದಿದ್ದು, ಮೀಸಲಿಟ್ಟಿದ್ದ ಮತಯಂತ್ರಗಳನ್ನು ಪುಡಿಪುಡಿ ಮಾಡಲಾಗಿದೆ. ಇವಿಎಂ(EVM) ಹಾಗೂ ವಿವಿ ಪ್ಯಾಟ್(VV Pad) ಯಂತ್ರಗಳನ್ನು ಪುಡಿ ಪುಡಿ ಮಾಡಿದ್ದಾರೆ. ಸಿಬ್ಬಂದಿ ಬಳಕೆ ಮಾಡಿದ ಕಾರನ್ನು ಪಲ್ಟಿ ಮಾಡಿ ಹಾನಿ ಮಾಡಿದ್ದಾರೆ. ಗ್ರಾಮಸ್ಥರ ತಪ್ಪು ತಿಳುವಳಿಕೆಯಿಂದ ಘಟನೆ ನಡೆದಿದ್ದು, ಸಿಬ್ಬಂದಿಗೂ ಥಳಿಸಿದ್ದಾರೆ.

ಮತಯಂತ್ರ ಕೆಟ್ಟಲ್ಲಿ ಬಳಕೆ ಮಾಡಲು ಇವಿಎಂ, ವಿವಿಪ್ಯಾಟ್ ‌ಮಷಿನ್‌ಗಳನ್ನು ರಿಸರ್ವ್ ಇಡಲಾಗಿತ್ತು. ಆದ್ರೆ ವಾಪಸ್ ತರೋದನ್ನ ಗಮನಿಸಿ ಜನರು ಸಿಬ್ಬಂದಿಗಳನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸಿಲ್ಲ. ಇದರಿಂದ ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಲಾಗಿದೆ. ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಡಿಸಿ(DC) ವಿಜಯಕುಮಾರ ದಾನಮ್ಮನವರ(Vijayakumara Danammanavar) ಹಾಗೂ ಎಸ್ಪಿ ಆನಂದಕುಮಾರ(SP Anandakumar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಕಾರಣವಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಕೆಲವರನ್ನು ಬಂಧಿಸಿಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಇದು ಕಾನೂನು ಬಾಹೀರ ಕೆಲಸ. ಯಾರೇ ಆಗಲಿ ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಲಾಟೆಯಲ್ಲಿ ಭಾಗಿಯಾಗಿರೋ 20 ರಿಂದ 25 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂಥ ಘಟನೆಗಳಲ್ಲಿ ಯಾರಾದರೂ ಭಾಗಿಯಾದರೆ ಅವರ ಮೇಲೂ ಆ್ಯಕ್ಸನ್ ಫಿಕ್ಸ್ ಎಂದು ಎಸ್ಪಿ ಆನಂದ ಕುಮಾರ ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿ(Gangavati)ಯಲ್ಲೂ ಗಲಾಟೆ!
ಇನ್ನೂ, ಗಂಗಾವತಿಯಲ್ಲಿಯೂ ಕೆಲವೊಂದು ಕಡೆ ಅಹಿತಕರ ಘಟನೆ ನಡೆದಿದೆ. ಇಲ್ಲಿನ ಎಪಿಎಂಸಿ(APMC) ಬಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯ 159, 160 ಚುನಾವಣೆ ಮತಗಟ್ಟೆ ಬಳಿ ಬುಧವಾರ ಕೆಆರ್‌ಪಿಪಿ(KRPP), ಬಿಜೆಪಿ(BJP) ಪಕ್ಷದ ಕಾರ್ಯಕರ್ತರು ನಡುವೆ ಮಾತಿನ ಚಕಮಕಿ, ವಾಗ್ವಾದಗಳು ನಡೆದವು. ಮತಗಟ್ಟೆಯಲ್ಲಿ ಕೆಆರ್‌ಪಿಪಿ ಪಕ್ಷದ ಏಜೆಂಟ್ ಒಬ್ಬರು ಅಂಗಿಯ ಜೇಬಿಗೆ ತಮ್ಮ ಹೆಸರಿರುವ ಅಂಗಿ ಧರಿಸಲಾಗಿದೆ ಎಂದು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಅಧಿಕಾರಿಗಳನ್ನ ಪ್ರಶ್ನಿಸಿದ್ದು, ಪರವಾನಗಿ ಪಡೆದು ಧರಿಸಲಾಗಿದೆ ಎಂದು ಏಜೆಂಟ್ ತಿಳಿಸಿದ್ದಾರೆ.

 

 

Leave A Reply

Your email address will not be published.