Donald Trump: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ದೋಷಿ!!

US former President Donald Trump Found liable for Abuse in civil trial

Donald Trump: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಇಲ್ಲಿನ ನ್ಯಾಯಾಲಯವು ನಿಯತಕಾಲಿಕೆಯ ಮಾಜಿ ಅಂಕಣಕಾರರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಮಾನಹಾನಿ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಭಾರೀ ದಂಡ ವಿಧಿಸಿದೆ. 5 ಮಿಲಿಯನ್ ಡಾಲರ್ ಅಂದ್ರೆ ಸುಮಾರು 410 ಕೋಟಿ ದಂಡ ವಿಧಿಸಿದೆ.

ಅಮೆರಿಕದ (America) ಪತ್ರಕರ್ತೆ, ಬರಹಗಾರ್ತಿ ಮತ್ತು ಅಂಕಣಕಾರ್ತಿ ಇ ಜೀನ್ ಕ್ಯಾರೊಲ್ (79) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಷಾರಾಮಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಕಳೆದ ವರ್ಷ ಟ್ರಂಪ್
ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಕ್ಯಾರೊಲ್ ಹೇಳಿಕೆ ನೀಡಿದ್ದು, 1996 ರಲ್ಲಿ ಗುರುವಾರ ಸಂಜೆ ಬರ್ಗ್‌ಡಾರ್ಫ್ ಗುಡ್‌ಮ್ಯಾನ್‌ನಲ್ಲಿ ಟ್ರಂಪ್ ತನ್ನನ್ನು ಭೇಟಿಯಾದರು. ಅಲ್ಲಿ ಟ್ರಂಪ್ ಮಹಿಳೆಯರ ಒಳಉಡುಪುಗಳನ್ನು ಖರೀದಿಸಲು ನನ್ನ ಬಳಿ ಸಹಾಯ ಕೇಳಿದರು ಮತ್ತು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಆರೋಪಿಸಿದ್ದಾರೆ.

ಆದರೆ, ತಮ್ಮ ವಿರುದ್ಧ ಬರಹಗಾರರೊಬ್ಬರು ಮಾಡಿದ ಅತ್ಯಾಚಾರದ ಆರೋಪಗಳನ್ನು ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, ಮೆ.3ರಂದು ನ್ಯೂಯಾರ್ಕ್‌ನಲ್ಲಿ ವೀಡಿಯೋ ಮೂಲಕ ನ್ಯಾಯಪೀಠದ ಮುಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ಆರೋಪಗಳು ಕೇವಲ ಕಟ್ಟುಕಥೆ, ಸುಳ್ಳು ಹೇಳಿಕೆಗಳಿವು, ‘ಅತ್ಯಂತ ಹಾಸ್ಯಾಸ್ಪದ ಮತ್ತು ಅಸಹ್ಯಕರ ಕಥೆ’ ಎಂದು ಬಣ್ಣಿಸಿದ್ದರು. ತಾನು ಮ್ಯಾನ್‌ಹ್ಯಾಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಲೇಖಕಿ ಇ. ಜೀನ್ ಕ್ಯಾರೊಲ್ ಅವರನ್ನು ಎಂದಿಗೂ ಲೈಂಗಿಕವಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ್ದರು.

ನಂತರ ಇ ಜೀನ್ ಕ್ಯಾರೊಲ್ ಅವರ ಮೇಲಿನ ಅತ್ಯಾಚಾರದ ಆರೋಪವನ್ನು ವಜಾಗೊಳಿಸಲಾಗಿತ್ತು. ಆದರೆ ನಂತರದಲ್ಲಿ ಚರ್ಚೆಸಿ ಈ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನ್ಯಾಯಾಧೀಶರು ನಾಗರಿಕ ವಿಚಾರಣೆಯಲ್ಲಿ ಅವರ ಇತರ ದೂರುಗಳನ್ನು ಎತ್ತಿಹಿಡಿದರು. ಕ್ಯಾರೊಲ್ ಈ ಪ್ರಕರಣದಲ್ಲಿ ನಷ್ಟವನ್ನು ಕೋರಿ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಟ್ರಂಪ್ ಗೆ‌ 5 ಮಿಲಿಯನ್ ಡಾಲರ್ ದಂಡ ವಿಧಿಸಿದೆ.

ಇದನ್ನೂ ಓದಿ:Actress Alia Bhatt: ‘ರಣಬೀರ್ ಸನ್ಯಾಸಿ ಸ್ವಭಾವಿ, ನನ್ನ ಮಾತು ಅವರಿಗೆ ಇಷ್ಟವಾಗಲ್ಲ’ ; ಆಲಿಯಾ ಪತಿಯ ಬಗ್ಗೆ ಹಿಗ್ಯಾಕೆ ಹೇಳಿದ್ರು?

 

Leave A Reply

Your email address will not be published.