Walking Benefits: ಊಟದ ನಂತರ ವಾಕಿಂಗ್ ಮಾಡುವುದರಿಂದ ಈ ಪ್ರಯೋಜನ ಪಡೆಯುವಿರಿ!
Benefits of walking after meals
Walking Benefits: ಬದಲಾಗುತ್ತಿರುವ ಜೀವನ ಶೈಲಿ ವಿವಿಧ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೆ ಊಟ ಆದ ನಂತರ ವಾಕಿಂಗ್ ಮಾಡುವುದರಿಂದ (Walking Benefits) ದೇಹಕ್ಕೆ ಯಾವುದೇ ದೊಡ್ಡ ಕಾಯಿಲೆಗಳು ಬರುವುದಿಲ್ಲ ಎನ್ನುತ್ತಾರೆ ವೈದ್ಯರು. ಹೌದು, ಆಹಾರ ಸೇವನೆ ನಂತರ ನಡೆಯುವುದರಿಂದ ಜೀರ್ಣಾಂಗವು ಉತ್ತಮಗೊಳ್ಳುತ್ತದೆ. ವಿಶೇಷವಾಗಿ ಜೀರ್ಣಾಂಗದಲ್ಲಿ, ತಿಂದ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ವಿವಿಧ ಅನಿಲಗಳನ್ನು ಹೊಂದಿರುವ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇದು ಹೊಟ್ಟೆಯ ಆಮ್ಲ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ತಡೆಯುತ್ತದೆ.
ಆದ್ದರಿಂದ ಪ್ರತಿದಿನ ದಿನಕ್ಕೆ ಸುಮಾರು 10-15 ನಿಮಿಷಗಳ ಕಾಲ ನಡೆಯುವುದರಿಂದ ಹೃದಯಾಘಾತ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೇಗೆಂದು ಸಂಪೂರ್ಣ ವಿವರ ಇಲ್ಲಿದೆ.
ವಿಶೇಷವಾಗಿ ಊಟದ ನಂತರ ಮಲಗಬಾರದು. ಊಟವು ಕೆಲವೊಮ್ಮೆ ನಮ್ಮನ್ನು ಸೋಮಾರಿ ಮತ್ತು ನಿಧಾನಗೊಳಿಸಿ ಬಿಡುತ್ತದೆ. ಹಾಗಾಗಿ, ಕೆಲವು ನಿಮಿಷಗಳ ನಡಿಗೆಯು ನಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು. ಊಟದ ನಂತರ ಎರಡು ನಿಮಿಷಗಳ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಊಟದ ನಂತರದ ನಡಿಗೆಯ ಪ್ರಯೋಜನಗಳು ಈ ಕೆಳಗಿನಂತಿವೆ :
ಆರೋಗ್ಯಕರ ನಿದ್ರೆ ಪಡೆಯಲು ರಾತ್ರಿ ಊಟದ ನಂತರ ವಾಕ್ ಮಾಡಿ. ಇದು ನಿಮ್ಮ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ.
ಪ್ರತಿದಿನ ಸಣ್ಣ ನಡಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ವಾಕಿಂಗ್ ಕೀಲು ನೋವನ್ನು ಕಡಿಮೆ ಮಾಡಲು ಸಹಕಾರಿ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಸ್ನಾಯುಗಳು, ಮೂಳೆಗಳು ಇತ್ಯಾದಿಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಡೋಪಮೈನ್, ಆಕ್ಸಿಟೋಸಿನ್, ಸೆರೊಟೋನಿನ್ ಮತ್ತು ಎಂಡಾರ್ಫಿನ್ಗಳು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಕರುಳಿನ ಆರೋಗ್ಯಕ್ಕೂ ಒಳ್ಳೆಯದು.
“ಊಟದ ನಂತರ ಗ್ಲುಕೋಸ್ ಬಿಡುಗಡೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಣ್ಣ ಏರಿಕೆಗೆ ಕಾರಣವಾಗುತ್ತದೆ. ಸಣ್ಣ ಸಕ್ಕರೆ ಸ್ಪೈಕ್ಗಳು ಅಸಹಜವಲ್ಲವಾದರೂ, ಮಧುಮೇಹವನ್ನು ನಿರ್ವಹಿಸುವಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಈ ಮೇಲಿನಂತೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ನಡಿಗೆಯೂ ದೀರ್ಘಕಾಲದ ಆರೋಗ್ಯಕರ ಜೀವನಶೈಲಿಗೆ ಪ್ರಯೋಜನಕಾರಿಯಾಗಿದೆ.
ಇದನ್ನು ಓದಿ: ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವಧನ! ಯಾರಿಗೆ ಎಷ್ಟು? ಸಂಪೂರ್ಣ ವಿವರ ಇಲ್ಲಿದೆ