No-Fault Divorce: ನೋ-ಫಾಲ್ಟ್ ವಿಚ್ಛೇದನ ಎಂದರೇನು? ಅಮೆರಿಕದಲ್ಲಿ ಏಕೆ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ?
What is a no-fault divorce
No Fault Divorce: ಅಮೆರಿಕದಲ್ಲಿ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ನಂತರ, ವಿಚ್ಛೇದನದ ಬಗ್ಗೆ ಚರ್ಚೆ ನಡೆದಿದೆ. ಅಮೆರಿಕದಲ್ಲಿ ಯಾವುದೇ ತಪ್ಪಿಲ್ಲದ ವಿಚ್ಛೇದನ (No Fault Divorce) ಚರ್ಚೆಯಲ್ಲಿದೆ. ಇದನ್ನು ಮಹಿಳಾ ಹಕ್ಕುಗಳೊಂದಿಗೆ ಜೋಡಿಸಲಾಗಿದೆ. ಅಮೆರಿಕದ ಇತ್ತೀಚಿನ ಕೆಲವು ಪ್ರಕರಣಗಳು ಮುನ್ನೆಲೆಗೆ ಬಂದ ನಂತರ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಈ ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಬೇಕು ಎಂದು ಅಮೆರಿಕದ ಒಂದು ಗುಂಪಿನ ವಾದ. ಅನೇಕ ಬಲಪಂಥೀಯರು ಯಾವುದೇ ತಪ್ಪಿಲ್ಲದ ವಿಚ್ಛೇದನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅದೇ ಸಮಯದಲ್ಲಿ, ಮತ್ತೊಂದು ಗುಂಪು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹೇಳುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ತಪ್ಪಿಲ್ಲದ ವಿಚ್ಛೇದನ (No Fault Divorce) ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಕೆಲವು ಅಮೇರಿಕನ್ ಗುಂಪುಗಳು ಅದನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲು ಏಕೆ ಬಯಸುತ್ತವೆ ಎಂಬುದು ಪ್ರಶ್ನೆಯಾಗಿದೆ. ಕಾರ್ನೆಲ್ ಲಾ ಸ್ಕೂಲ್ ವೆಬ್‌ಸೈಟ್ ಪ್ರಕಾರ, ಇದು ಒಂದು ರೀತಿಯ ವಿಚ್ಛೇದನವಾಗಿದೆ. ಸಾಮಾನ್ಯವಾಗಿ ವಿಚ್ಛೇದನದಲ್ಲಿ, ಎಲ್ಲರಿಗೂ ಗೊತ್ತಿರುವ ಹಾಗೆ, ಒಬ್ಬ ಅಥವಾ ಇನ್ನೊಬ್ಬ ವ್ಯಕ್ತಿ ಮದುವೆ ಎಂಡ್ ಮಾಡಲು ಕಾರಣವೆಂದು ಹೇಳಲಾಗುತ್ತದೆ. ಇಲ್ಲಿ ಹಲವು ರೀತಿಯ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ, ಹಲ್ಲೆ, ಮಾನಸಿಕ ಕಿರುಕುಳ. ಆದರೆ ತಪ್ಪಿಲ್ಲದ ವಿಚ್ಛೇದನಗಳಲ್ಲಿ(No Fault Divorce) ನಲ್ಲಿ ಇದು ಸಂಭವಿಸುವುದಿಲ್ಲ. ಇದರಲ್ಲಿ ನಿಮ್ಮನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಯಾವುದೇ ರೀತಿಯ ಸಾಕ್ಷ್ಯವನ್ನು ಪ್ರಸ್ತುತಪಡಿಸುವ ಅಗತ್ಯವಿಲ್ಲ.
ಯಾವುದೇ ತಪ್ಪಿಲ್ಲದ ವಿಚ್ಛೇದನದಲ್ಲಿ (No fault Divorce) ಪ್ರಕರಣವನ್ನು ದಾಖಲಿಸುವಾಗ ದಂಪತಿಗಳು ಬೇರ್ಪಡುತ್ತಿದ್ದಾರೆ ಎಂದು ಸರಳವಾಗಿ ಹೇಳಬೇಕಾಗುತ್ತದೆ. ಈ ರೀತಿಯ ವಿಚ್ಛೇದನವು ಅಮೆರಿಕಾದಲ್ಲಿ ಕಾನೂನುಬದ್ಧವಾಗಿದೆ. 2010 ರಲ್ಲಿ, ಇದು ಅಮೆರಿಕದ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬಂದಿತು. ಈ ವಿಚ್ಛೇದನವು ಮಹಿಳೆಯರಿಗೆ ಆಯ್ಕೆಯನ್ನು ನೀಡುತ್ತದೆ ಎಂದು ಈ ಕಾನೂನಿನ ಬೆಂಬಲಿಗರು ಹೇಳುತ್ತಾರೆ. ಈ ಕಾನೂನು ಜಾರಿಗೆ ಬಂದಾಗಿನಿಂದ ಕೌಟುಂಬಿಕ ದೌರ್ಜನ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಈಗ ಮಹಿಳೆಯರು ದೌರ್ಜನ್ಯ ಮಾಡುವ ಪುರುಷರಿಂದ ವಿಚ್ಛೇದನ ಸುಲಭವಾಗಿ ದೊರಕುತ್ತದೆ ಎಂಬುವುದಕ್ಕಿಂತಲೂ, ದೌರ್ಜನ್ಯ ಮಾಡುವ ಗಂಡಸರನ್ನು ಸುಲಭವಾಗಿ ಬಿಡುತ್ತಾರೆ, ಇದೊಂದು ಅವರಿಗೆ ಪಾಠವಾಗುತ್ತದೆ ಎಂದು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಹೇಳುತ್ತಾರೆ.
ಈ ರೀತಿಯಾಗಿ ವಿಚ್ಛೇದನ ಪ್ರಕರಣಗಳು ಹೆಚ್ಚಾದರೆ ಮದುವೆಯ ಪ್ರಾಮುಖ್ಯತೆ ಕೊನೆಗೊಳ್ಳುತ್ತದೆ ಎಂದು ಅಮೆರಿಕದ ಬಲಪಂಥೀಯರ ಗುಂಪು ಹೇಳುತ್ತದೆ. ಅದೇ ಸಮಯದಲ್ಲಿ, ಮದುವೆಯಾಗುವ ಮತ್ತು ನಂತರ ಯಾವುದೇ ತಪ್ಪಿಲ್ಲದ ವಿಚ್ಛೇದನವನ್ನು ತೆಗೆದುಕೊಳ್ಳುವ ವಿಧಾನವು ಮಹಿಳೆಯರನ್ನು ಅಗೌರವಿಸುವ ವಿಧಾನವಾಗಿ ಪರಿಣಮಿಸುತ್ತದೆ ಎಂದು ಒಂದು ಗುಂಪಿನ ಬಲವಾದ ನಂಬಿಕೆ.
ಇದನ್ನು ಓದಿ: Lips Care Tips: ತುಟಿಗಳು ಕಪ್ಪಾಗಿದ್ದರೆ ಈ ಟಿಪ್ಸ್ ಟ್ರೈ ಮಾಡಿ!