The doctor attached the foot to the leg backwards: ಹಿಮ್ಮುಖವಾಗಿ ಪಾದವನ್ನು ಕಾಲಿಗೆ ಜೋಡಿಸಿದ ವೈದ್ಯರು! ಸಂತಸದಿಂದ ಕುಣಿದಾಡಿದ ವ್ಯಕ್ತಿ ಹೇಳಿದ್ದೇನು?
The doctor attached the foot to the leg backwards
Leg Surgery: ಮೂಳೆ ಕ್ಯಾನ್ಸರ್(Bone cancer) ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಕಾಲನ್ನು ತುಂಡರಿಸಿ, ಅವರಿಗೆ ಮತ್ತೆ ನಡೆಯಲು ಸಹಾಯ ಆಗುವಂತೆ ಅವರ ಪಾದವನ್ನೇ ಹಿಮ್ಮುಖವಾಗಿಟ್ಠು ಕಾಲಿಗೆ ( Leg Surgery) ಜೋಡಿಸಲಾಯಿತು.
ಹೌದು, ಬರ್ಮಿಂಗ್ಹ್ಯಾಮ್‌ನ(Birmingham) ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ (Royal Orthopaedic Hospital) ವೈದರು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇಬ್ರಾಹಿಂ ಅಬ್ದುಲ್ರೌಫ್(Ibrahim Abdulrauf) ಎಂಬ ವ್ಯಕ್ತಿಯ ಪಾದವನ್ನು ಹಿಮ್ಮುಖವಾಗಿ ಜೋಡಿಸಿದ್ದಾರೆ. ಅಲ್ಲದೆ ಇಬ್ರಾಹಿಂ ಅವರು ಇದು ತನ್ನ ಜೀವವನ್ನು ಉಳಿಸಿದೆ ಎಂದು ಹೇಳಿ ವೈದ್ಯನನ್ನು ಕೊಂಡಾಡಿದ್ದಾಥೆ. ಅಂದಹಾಗೆ ಈ ಇಬ್ರಾಹಿಂ ಅಬ್ದುಲ್ರೌಫ್ ಅವರಿಗೆ ಈ ಸ್ಥಿತಿ ಬರಲು ಕಾರಣ ಏನೆಂದು ತಿಳಿದರೆ ಎಂತವರೂ ಕೂಡ ಮರುಗುತ್ತಾರೆ.
ಅದು 2015 ರ ಸಮಯ. ಆಗ 14 ವರ್ಷದ ಇಬ್ರಾಹಿಂ ಅಬ್ದುಲ್ರೌಫ್ ತನ್ನ ಸಹೋದರನೊಂದಿಗೆ ಫುಟ್ಬಾಲ್ (Football) ಆಡುತ್ತಾ ತನ್ನ ಕಾಲಿಗೆ ಗಾಯ ಮಾಡಿಕೊಳ್ಳುತ್ತಾರೆ. ಅವರು ಆರಂಭದಲ್ಲಿ ಸಣ್ಣ ಗಯಾವೆಂದು ಸುಮ್ಮನಾಗುತ್ತಾರೆ. ಆದರೆ ಮರುದಿನ ನಡೆಯಲು ಸಾಧ್ಯವಾಗದಿದ್ದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಮೂಳೆಯ ಸೋಂಕು ಇದೆ ಎಂದು ತಿಳಿಸಲಾಯಿತು ಮತ್ತು ಬರ್ಮಿಂಗ್ಹ್ಯಾಮ್‌ನ ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಗೆ ಕಳುಹಿಸಲಾಯಿತು. ವೈದ್ಯರು ಅಂತಿಮವಾಗಿ ಇಬ್ರಾಹಿಂ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಅವರ ಕಾಲನ್ನು ತೆಗೆಯಬೇಕು ಎಂದು ಹೇಳಿದರು.
ಬಳಿಕ ಇಬ್ರಾಹಿಂ ಆರು ತಿಂಗಳು ಕೀಮೋಥೆರಪಿ( Chemotherapy) ಪಡೆದರು ಕೂಡ ಕ್ಯಾನ್ಸರ್ ವಾಸಿ ಆಗೋದಿಲ್ದ. ಶಸ್ತ್ರಚಿಕಿತ್ಸೆ ಇಲ್ಲದೆ ಅವರ ಕ್ಯಾನ್ಸರ್ ಎಲ್ಲೆಡೆ ಹರಡುವ ಅಪಾಯ ಹೆಚ್ಚಿತ್ತು. ಈ ಸಮಯದಲ್ಲಿ ವೈದ್ಯರು ಇಬ್ರಾಹಿಂಗೆ ರೊಟೇಶನ್ ಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಾರೆ. ಅಂದರೆ ಅವರ ಕಾಲಿನ ಮಧ್ಯ ಭಾಗವನ್ನು ತೆಗೆದು ಅವರ ಪಾದವನ್ನು ಹಿಮ್ಮುಖವಾಗಿ ಹೊಲಿಯಲಾಗುತ್ತದೆ. ಇದು ಪಾದವು ಮೊಣಕಾಲಿನ ಜಂಟಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿಕೊಡುತ್ತದೆ ಮತ್ತು ಪ್ರಾಸ್ಥೆಟಿಕ್ಸ್‌ನೊಂದಿಗೆ ನಡೆಯಲು ಇಬ್ರಾಹಿಂ ಅವರಿಗೆ ಸುಲಭವಾಗುತ್ತದೆ. ಈ ಸಲಹೆಯನ್ನೇ ವೈದ್ಯರು ಇಬ್ರಾಹಿಂಗೆ ನೀಡುತ್ತಾರೆ. ಅಂತೆಯೇ ಕಾಲನ್ನು ತುಂಡರಿಸಿ ಮತ್ತೆ ನಡೆಯಲು ಸಹಾಯ ಆಗಲು ಅವರ ಪಾದವನ್ನು ಹಿಂದಕ್ಕೆ ಹೊಲಿಯಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ “ಹಿಮ್ಮುಖವಾದ ಪಾದದಲ್ಲಿ ನನ್ನನು ನಾನು ಊಹಿಸಿಕೊಳ್ಳುವಾಗಲೇ ತುಂಬಾ ಕಷ್ಟವಾಗಿತ್ತು. ಹೀಗಾಗಿ ನಾನು ಫ್ರಾಂಕೆನ್‌ಸ್ಟೈನ್‌ನಂತೆಯೇ ಎಂದು ಯೋಚಿಸುತ್ತಿದ್ದೆ. ಆದರೆ ಶಸ್ತ್ರಚಿಕಿತ್ಸೆಯ ನಂತರ, ನಾನು ಸಂಪೂರ್ಣವಾಗಿ ಚೇತರಿಸಿಕೊಂಡೆ. ಗಳಿಗೆಯನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿರಲಿಲ್ಲ. ಬೆಡ್ಶೀಟ್ ಕೆಳಗಿನಿಂದ ನಾನು ನನ್ನ ಕಾಲನ್ನು ಎತ್ತಿ ನೋಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ನಾನು ಮಲಗಲು ಹೋದಾಗ ನನಗೆ ಕಾಲು ಇತ್ತು ಮತ್ತು ನಾನು ಎಚ್ಚರಗೊಂಡೆ ನನ್ನ ಕಾಲು ಹಿಂದಕ್ಕೆ ತಿರುಗಿತ್ತು. ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು ಆದರೆ ಕೆಳಭಾಗದಲ್ಲಿ ಕಾಲು ಕಾಣುತಿತ್ತು. ಇದು ನನ್ನ ಜೀವವನ್ನೇ ಉಳಿಸಿದೆ” ಎಂದು ಹೇಳಿದ್ದಾರೆ.
ಅಲ್ಲದೆ ನನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ, ಯಾರ ಸಹಾಯವಿಲ್ಲದೆ ನಾನು ಈಗ ನನ್ನನ್ನು ನೋಡಿಕೊಳ್ಳಬಹುದು. ರೋಟೇಶನ್ ಪ್ಲಾಸ್ಟಿ ಹೆಚ್ಚಿನ ಕಾರ್ಯ ಮತ್ತು ಚಲನೆಯನ್ನು ನೀಡುತ್ತದೆ. ಈಗ ನನ್ನ ಕಾಲನ್ನು ನಾನೇ ನಿಯಂತ್ರಿಸಬಹುದು ಎಂದಿದ್ದಾರೆ.