Indian Railway: ಈ ಸಮಯದಲ್ಲಿ ಮಹಿಳೆಯರು ಪ್ರಯಾಣಿಸಿದರೆ ಟಿಕೆಟ್ ಫ್ರೀ!!

Indian railway station women got free tickets

Indian Railway : ಪ್ರತಿನಿತ್ಯ ಕೋಟ್ಯಾಂತರ ಜನರು ತಮ್ಮ ದಿನನಿತ್ಯ ಸಾರಿಗೆಯಾಗಿ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಇದನ್ನು ಭಾರತದ ಜೀವನ ರೇಖೆ ಎಂದೂ ಕರೆಯುತ್ತಾರೆ. ಸದ್ಯ ಭಾರತೀಯ ರೈಲ್ವೆ (Indian Railway ) ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಹಲವಾರು ಹೊಸ ಯೋಜನೆ ಜಾರಿ ತಂದಿದೆ.

ಮುಖ್ಯವಾಗಿ, ಹಿರಿಯ ನಾಗರಿಕರಿಂದ ಹಿಡಿದು ಮಹಿಳೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಮಹಿಳೆಯರು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹುದೇ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಭಾರತೀಯ ರೈಲ್ವೆ ನಿಯಮದ ಪ್ರಕಾರ, ಮಹಿಳೆ ಅಥವಾ ಮಗು ಒಬ್ಬಂಟಿಯಾಗಿ ರಾತ್ರಿಯಲ್ಲಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಕೂಡಲೇ TTE ಮಹಿಳೆಯನ್ನು ರೈಲಿನಿಂದ ಕೆಳಗೆ ಇಳಿಸುವಂತಿಲ್ಲ. ಒಂದು ವೇಳೆ ರೈಲಿನಿಂದ ಮಹಿಳೆಯನ್ನು ಕೆಳಗೆ ಇಳಿಸಿದರೆ ಮಹಿಳೆಯು ರೈಲ್ವೆ ಪ್ರಾಧಿಕಾರಕ್ಕೆ ಸಂಬಂಧಿಸಿದ ಟಿಟಿಇ ವಿರುದ್ಧ ದೂರು ಸಲ್ಲಿಸಬಹುದು.

ಇನ್ನು ಪ್ರಯಾಣಿಕರ ಪರವಾಗಿ ಮತ್ತೊಂದು ನಿಯಮವೆಂದರೆ, ಟಿಟಿಇ ರಾತ್ರಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರನ್ನು ಎಚ್ಚರಗೊಳಿಸುವ ಮೂಲಕ ಟಿಕೆಟ್ ಅನ್ನು ಪರಿಶೀಲಿಸಬಾರದು.

ನಿಯಮಗಳ ಪ್ರಕಾರ, ಪ್ರಯಾಣಿಕರು ರಾತ್ರಿ 10:00 ರಿಂದ ಬೆಳಿಗ್ಗೆ 6:00 ರವರೆಗೆ ಶಾಂತಿಯುತವಾಗಿ ಮಲಗಬಹುದು. ಆ ಸಮಯದಲ್ಲಿ ಟಿಟಿಇ ಎಚ್ಚರಗೊಳಿಸಬಾರದು. ಆದರೆ ಈ ನಿಯಮವು ರಾತ್ರಿಯಲ್ಲಿ ರೈಲು ಹತ್ತುವ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ: ಇಂದು ಈ ರಾಶಿಯವರ ಯೋಜಿತ ಕೆಲಸ ಕಾರ್ಯ ಪೂರ್ಣಗೊಳ್ಳುತ್ತದೆ!

Leave A Reply

Your email address will not be published.