Interesting Fact: ಭಾರತದಲ್ಲಿ ಕಾರಿನ ಸ್ಟೇರಿಂಗ್​ ಬಲ ಭಾಗದಲ್ಲಿರುತ್ತದೆ ಆದರೆ, ವಿದೇಶದಲ್ಲಿ ಎಡಭಾಗದಲ್ಲಿರುತ್ತದೆ ; ಯಾಕೆ?!

Which country car has a steering wheel on which side

Share the Article

Car steering: ಭಾರತದಲ್ಲಿ (india) ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿವೆ. ಜನರೂ ಹೆಚ್ಚು ಕಾರುಗಳನ್ನೇ ಬಳಸುತ್ತಾರೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಭಾರತದಲ್ಲಿ, ಕಾರುಗಳಲ್ಲಿ ಸ್ಟೀರಿಂಗ್ ಬಲಭಾಗದಲ್ಲಿದೆ. ಇಲ್ಲಿ ಚಾಲಕರು ಬಲಗಡೆ ಕೂತು ರಸ್ತೆಯ ಎಡಭಾಗದಲ್ಲಿ ಡ್ರೈವ್ ಮಾಡುತ್ತಾರೆ. ವಿದೇಶಗಳಲ್ಲಿ ವಾಹನಗಳ ಸ್ಟೀರಿಂಗ್ ಎಡಭಾಗದಲ್ಲಿದೆ. ಹಾಗೂ ಅವರು ವಾಹನಗಳನ್ನು ರಸ್ತೆಯ ಎಡಭಾಗದಲ್ಲಿ ಓಡಿಸುತ್ತಾರೆ. ಇದು ಯಾಕೆ‌ ಹೀಗೆ? ಇದರ ಹಿಂದಿದೆ ರಹಸ್ಯ!! (Car steering) ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಭಾರತವು ಐತಿಹಾಸಿಕ ದೇಶ ಮೊದಲು ಬಲಗೈಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಏನೇ ಕಾರ್ಯ ಮಾಡಿದರು ಎಡಗೈ ಅನ್ನು ಬಳಸುತ್ತಿರಲಿಲ್ಲ. ಈಗಲೂ ಹಣ (money) ನೀಡಬೇಕಾದರೆ ಎಡಗೈ ಬಳಸುವುದಿಲ್ಲ. ಇದನ್ನು ನೀವು ಗಮನಿಸಿರಬಹುದು!!. ಹಿಂದೆ ತಾವು ಬಳಸುವ ಕುದುರೆ, ಎತ್ತಿನ ಗಾಡಿ, ಇನ್ನಿತರ ಗಾಡಿಗಳನ್ನು ಸವಾರಿ ಮಾಡಿದರೆ ಎಡಭಾಗದಲ್ಲಿ ಚಲಿಸುತ್ತಾ, ಬಲಗೈನಲ್ಲಿ ಆಯುಧವಿಡಿದು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದರು. ಇದು ನಂತರದಲ್ಲಿ ಬಳಕೆಗೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ, ಬ್ರಿಟಿಷರು ಸ್ವತಃ ಎಡಭಾಗದಲ್ಲಿ ವಾಹನಗಳನ್ನು (vehicle) ಓಡಿಸುತ್ತಿದ್ದರು ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

ಮೊದಲಿಗೆ 19 ನೇ ಶತಮಾನದ ಅಂತ್ಯದಲ್ಲಿ ಕಾರುಗಳನ್ನು (car) ಪರಿಚಯಿಸಿದಾಗ, ಹಿಂದಿನಂತೆ ಜನರು ಕಾರುಗಳನ್ನು ರಸ್ತೆಯ ಎಡಭಾಗದಲ್ಲಿ ಓಡಿಸುವುದನ್ನು ಮುಂದುವರೆಸಿದರು. ಆದರೆ ಕಾಲಾನಂತರದಲ್ಲಿ ವೇಗವಾದ ಮತ್ತು ಹೆಚ್ಚು ಅಪಾಯಕಾರಿ ಗ್ಯಾಸೋಲಿನ್ ಚಾಲಿತ ಕಾರುಗಳ ಆಗಮನದೊಂದಿಗೆ, ಹಲವು ದೇಶಗಳು ಎಡಗೈ ಸ್ಟೀರಿಂಗ್ ಹಾಗೂ ಬಲಭಾಗದಲ್ಲಿ ವಾಹನಗಳನ್ನು ಚಾಲನೆ ಮಾಡಲು ಪ್ರಾರಂಭಿಸಿದವು.

ರಸ್ತೆಯ ಬಲಭಾಗದಲ್ಲಿ ವಾಹನ ಚಲಾಯಿಸುವುದು ಸುರಕ್ಷಿತ ಎಂಬ ಕಲ್ಪನೆಯಿಂದ ಈ ಭಾಗದಲ್ಲೇ ಚಾಲನೆ ಮಾಡುತ್ತಾರೆ. ಅಲ್ಲದೆ, ಜನರಿಗೆ ಬಲಭಾಗದಲ್ಲಿ ವಾಹನವನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಬಲಬದಿಯಲ್ಲಿ ಚಾಲನೆ ಮಾಡುವುದರಿಂದ ಚಾಲಕರು ಎದುರಿಗೆ ಬರುವ ವಾಹನಗಳನ್ನು ಚೆನ್ನಾಗಿ ನೋಡುತ್ತಾರೆ, ಹೀಗಾಗಿ ಮುಖಾಮುಖಿ ಡಿಕ್ಕಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ.

 

ಇದನ್ನು ಓದಿ: Marriage: ಅಬ್ಬಬ್ಬಾ, ಮಗ ತೀರಿ ಹೋದನೆಂದು ಸೊಸೆಯನ್ನೇ ಮದುವೆಯಾದ ಮಾವ! ಇಲ್ಲಿದೆ ವೀಡಿಯೋ! 

Leave A Reply