Ileana d’cruz: ಬೇಬಿ ಬಂಪ್ ವಿಡಿಯೋ ಶೇರ್ ಮಾಡಿ ತಾಯಿ ಆಗೋದನ್ನು ಕನ್ಫರ್ಮ್ ಮಾಡಿದ ನಟಿ ಇಲಿಯಾನ! ತಂದೆ ಯಾರಂತೆ ಗೊತ್ತಾ?

Ileana d'cruz baby bump photo viral

Ileana d’cruz: ಗೋವಾ ಬ್ಯೂಟಿ, ಬೋಲ್ಡ್ ಅಂಡ್ ಬ್ಯೂಟಿಫುಲ್ ಎನಿಸಿರೋ ಇಲಿಯಾನಾ ಡಿಕ್ರೂಸ್ (Ileana d’cruz) ಇತ್ತೀಚಿಗೆ ತಾಯಿಯಾಗುತ್ತಿರುವ ಸುದ್ದಿ ಅನೌನ್ಸ್ ಮಾಡಿ ಫ್ಯಾನ್ಸ್‌ಗೆ ಶಾಕ್ ನೀಡಿದ್ದರು. ಆದರೀಗ ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನ ಹಂಚಿಕೊಂಡು ತಾಯಿತನವನ್ನು ಕನ್ಫರ್ಮ್ ಮಾಡಿದ್ದಾರೆ.

 

Image Source: Public TV

 

ಹೌದು, ಗೋವಾ ಬ್ಯೂಟಿ ಇಲಿಯಾನ, ಕೆಲವೇ ದಿನಗಳ ಹಿಂದಷ್ಟೇ ತಾಯಿಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಈ ಮೂಲಕ ದಿಢೀರನೇ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈಗ ಒಂದು ವಾರಗಳ ಬಳಿಕ ಬೇಬಿ ಬಂಪ್ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂದಹಾಗೆ ಅಂದು, ಇಲಿಯಾನಾ ತಾನು ಗರ್ಭಿಣಿ ಅನ್ನೋದನ್ನು ಸಾಂಕೇತಿಕವಾಗಿ ಬಹಿರಂಗ ಪಡಿಸಿದ್ದರು. ಆ ವೇಳೆ ಇದು ನಿಜವೋ? ಅಥವಾ ಹೊಸ ಸಿನಿಮಾದ ಪ್ರಚಾರವೋ? ಅನ್ನೋ ಗೊಂದಲದಲ್ಲಿ ಇದ್ದರು. ಅಷ್ಟೆಲ್ಲ ಚರ್ಚೆಯಾಗುತ್ತಿದ್ದರೂ ಇಲಿಯಾನಾ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಹೆಚ್ಚು ಕಡಿಮೆ ಒಂದು ವಾರಗಳ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ತಾನು ಗರ್ಭಿಣಿ ಅನ್ನೋದನ್ನು ಮತ್ತೊಮ್ಮೆ ಬಹಿರಂಗ ಪಡಿಸಿದ್ದಾರೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಇಲಿಯಾನ ಅವರು ಲಾಂಗ್ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗೇ ಬೇಬಿ ಬಂಪ್ ತೋರಿಸಿ ಕಾಫಿ ಕಪ್ ಹಿಡಿದಿದ್ದಾರೆ. ಈ ವೀಡಿಯೋದಲ್ಲಿ ಮುದ್ದಿನ ನಾಯಿ ಕೂಡ ಸೆರೆಯಾಗಿದೆ. ಒಟ್ನಲ್ಲಿ ವೀಡಿಯೋ ಕ್ಲಿಪ್ ನೋಡಿ ಫ್ಯಾನ್ಸ್ ವಿಶ್ ಮಾಡಿದ್ದಾರೆ.

ಗೋವಾ ಬ್ಯೂಟಿ ಇಲಿಯಾನಾ ಗರ್ಭಿಣಿ ಅಂತ ಹೇಳಿದ್ದೇನೋ ನಿಜ. ಆದರೆ, ಇದೂವರೆಗೂ ಮಗುವಿನ ತಂದೆ ಯಾರೋ ಅನ್ನೋ ರಹಸ್ಯವನ್ನು ಬಿಟ್ಟು ಕೊಟ್ಟಿಲ್ಲ. ಮೊದಲ ಬಾರಿಗೆ ಗರ್ಭಿಣಿ ಎಂದು ಘೋಷಣೆ ಮಾಡಿದಾಗಲೇ ನೆಟ್ಟಿಗರು ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದರು. ಮತ್ತೆ ಕೆಲವರು ಅದು ಅವರ ವೈಯಕ್ತಿಕ ವಿಚಾರ ಎಂದು ಬೆಂಬಲ ನೀಡಿದ್ದರು.

ಇದಲ್ಲದೆ ಸೌತ್- ಬಾಲಿವುಡ್‌ನಲ್ಲಿ ಗಮನ ಸೆಳೆದ ನಟಿ ಇಲಿಯಾನಾ ಅವರು 2019ರಲ್ಲಿ ಆಂಡ್ರ್ಯೂ ನಿಬೋನ್ ಜೊತೆಗಿನ ಬ್ರೇಕಪ್ ಬಳಿಕ ಕತ್ರಿನಾ ಸಹೋದರನ ಜೊತೆ ಒಡನಾಡ ಜಾಸ್ತಿಯಾಗಿತ್ತು. ಪ್ರಸ್ತುತ ಕತ್ರಿನಾ ಕೈಫ್ (Katrina Kaif) ಸಹೋದರ ಸಬಾಸ್ಟಿಯನ್ ಲಾರೆಂಟ್ ಮೈಕಲ್ ಜೊತೆ ಇಲಿಯಾನಾ ಡೇಟ್ ಮಾಡಿದ್ದಾರೆ ಎಂಬುದು ಗಮಪಿಸಬೇಕಾದ ವಿಚಾರ!

ಇದನ್ನೂ ಓದಿ: ದರ್ಶನ್ ಎದೆಯ ಮೇಲಿರೋ ‘ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಟ್ಯಾಟೂ ಹಾಕಿದ್ದಕ್ಕೆ ನಟ ಕೊಟ್ಟ ಮೊತ್ತವೆಷ್ಟು?

Leave A Reply

Your email address will not be published.