Mangaluru Airport: ಮಂಗಳೂರಿಗರಿಗೆ ಸಿಹಿ ಸುದ್ದಿ! ಮಂಗಳೂರು ಏರ್ ಪೋರ್ಟ್ ನಲ್ಲಿ ನಿಮಗಾಗಿ ಲಭ್ಯವಿದೆ ಈ ಸೌಲಭ್ಯ!!!

These facility is available at Mangaluru Airport

Mangaluru Airport: ಸರಕು ಸಾಗಾಟಗಳಿಗೆ ಸಂಬಂಧ ಪಟ್ಟಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೊಸ ಸೇವೆ ಆರಂಭವಾಗಲಿದೆ. ಹೌದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru Airport) ಸರಕು ಸೇವೆಗಳಿಗೆ ತನ್ನನ್ನು ತಾನು ತೆರೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳು ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳು ಈಗ ಇನ್ನಷ್ಟು ಹತ್ತಿರವಾಗಲಿದೆ. ಮೇ 1 ರಿಂದ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ ಕಟ್ಟಡವು ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದು, ಜನರು ಇದರಿಂದ ಹಲವು ಲಾಭಗಳನ್ನು ಗಳಿಸಬಹುದಾಗಿದೆ.

ಸದ್ಯ ಟರ್ಮಿನಲ್​ನಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಅದರಲ್ಲಿ ಒಂದು ದೇಶೀಯ ಸರಕು ಹಾಗೂ ಇನ್ನೊಂದು ಅಂತರಾಷ್ಟ್ರೀಯ ಸರಕು ಸಾಗಾಟ ಸೇವೆಗಳಿಗಾಗಿ ಮೀಸಲಿರಿಸಲಾಗಿದೆ.

ಅಂತರಾಷ್ಟ್ರೀಯ ಕಾರ್ಗೋ ಮೂಲಕ ಹಣ್ಣು, ತರಕಾರಿಗಳು, ಆಹಾರ ಪದಾರ್ಥ, ಶೀತಲೀಕರಿಸಿದ ಮೀನುಗಳು, ಬಿಡಿಭಾಗಗಳು ಮತ್ತು ಜವಳಿಗಳ ಸಾಗಾಟ ನಿರ್ವಹಿಸಿದರೆ, ದೇಶೀಯ ಕಾರ್ಗೋದಲ್ಲಿ ಕೋರಿಯರ್‌, ಅಂಚೆ ಕಚೇರಿ, ಆಭರಣಗಳು, ಮೆಡಿಕಲ್‌ ಉದ್ದೇಶಿತ ರಕ್ತದ ಮಾದರಿ, ದಾಖಲೆ ಮತ್ತು ಇ ಕಾಮರ್ಸ್‌ ವಸ್ತುಗಳನ್ನು ನಿರ್ವಹಿಸಲಿದೆ.

ಅದಲ್ಲದೆ ಕಾರ್ಗೋ ಟರ್ಮಿನಲ್‌ ಹೊರಗಡೆ ವಿಶಾಲ ಪಾರ್ಕಿಂಗ್‌, 10 ಟ್ರಕ್‌ ಬೇಗಳು, ಎರಡು ಡಾಕ್‌ ಲೆವೆಲರ್​ಗಳು, ಲಿಫ್ಟ್‌, ಸಿಸಿಟಿವಿ, ಕೋಲ್ಡ್‌ ಸ್ಟೋರೇಜ್‌, ಎರಡು ಡಾಕ್‌ ಲೆವೆಲರ್‌, ಸ್ಟೋರೇಜ್‌ ರೂಂ, ಕೋಲ್ಡ್‌ ರೂಂ ಮುಂತಾದವುಗಳನ್ನು ಹೊಂದಿರುತ್ತವೆ.

ಒಟ್ಟು 1891 ಚದರ ಮೀಟರ್​ನಷ್ಟು ವಿಸ್ತೀರ್ಣದ ಕಾರ್ಗೋ ಸಂಗ್ರಹಾಗಾರ ಕಟ್ಟಡದಲ್ಲಿ 9 ಸಾವಿರ ದೇಶೀಯ ಮತ್ತು ಅಂತರಾಷ್ಟ್ರೀಯ ಸರಕುಗಳಿಗೆ ಅಗತ್ಯವಿರುವ ವ್ಯವಸ್ಥೆಯಿದೆ. ಆರಂಭದಲ್ಲಿ ದೇಶೀಯ ಒಳಬರುವ ಹಾಗೂ ಹೊರಹೋಗುವ ಸರಕುಗಳನ್ನು ಈ ಕಾರ್ಗೋ ಟರ್ಮಿನಲ್‌ ನಿರ್ವಹಿಸಲಿದೆ.

ಮುಖ್ಯವಾಗಿ ಕಾರ್ಗೋ ಟರ್ಮಿನಲ್‌ ನೇರವಾಗಿ ಸರಕು ಸಾಗಾಟ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತವೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ .

 

ಇದನ್ನು ಓದಿ: Refrigerator sound in summer: ಬೇಸಿಗೆ ಬಂದಾಗ ನಿಮ್ಮ ಫ್ರಿಡ್ಜ್‌ನಲ್ಲಿ ಈ ಶಬ್ದ ಕೇಳುತ್ತದೆಯೇ? ಇದೇ ಸಮಸ್ಯೆ ಆಗಿರಬಹುದು! 

Leave A Reply

Your email address will not be published.