Russian- Ukraine War: ಡ್ರೋನ್ ಬಳಸಿ ಪುಟಿನ್ ಹತ್ಯೆಗೆ ಉಕ್ರೇನ್ ಸ್ಕೆಚ್! ಕೂದಲೆಳೆ ಅಂತರದಲ್ಲಿ ಪಾರಾದ ರಷ್ಯಾ ಅಧ್ಯಕ್ಷ! ವಿಡಿಯೋ ವೈರಲ್

The war between Russia and Ukraine The President of Russia escaped

Russian- Ukraine War: ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಉಕ್ರೇನ್ ಪ್ರಯತ್ನಿಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದ್ದು, ಉಕ್ರೇನ್ ಉಡಾಯಿಸಿದ್ದ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ರಷ್ಯಾ ಹೇಳಿದೆ.

 

ಹೌದು, ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ (Russian-Ukraine War) ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ. ಆದರೀಗ ಈ ನಡುವೆ ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಯತ್ನಿಸಿದ್ದು, ಪುಟಿನ್‌ ನಿವಾಸದ ಮೇಲೆ ಎರಡು ಡ್ರೋನ್‌ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ. ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಂದಹಾಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಕೊಲ್ಲುವ ಉದ್ದೇಶದಿಂದ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಗೆ(drone strike) ಉಕ್ರೇನ್ (Ukraine) ಪ್ರಯತ್ನಿಸಿದೆ ಎಂದು ರಷ್ಯಾ ಆರೋಪಿಸಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ದಾಳಿಯನ್ನು ಯೋಜಿತ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸುವುದಾಗಿ ಕ್ರೆಮ್ಲಿನ್ ಹೇಳಿದೆ. ಅದೇ ವೇಳೆ ದಾಳಿಗಾಗಿ ಬಳಸಿದ ಎರಡು ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೂಡ ರಷ್ಯಾ ಹೇಳಿದೆ.

ಎರಡು ಮಾನವರಹಿತ ವೈಮಾನಿಕ ವಾಹನಗಳನ್ನು ಕ್ರೆಮ್ಲಿನ್‌ಗೆ ಗುರಿಯಾಗಿಸಿ ಬಿಡಲಾಗಿತ್ತು. ಮಿಲಿಟರಿ ಮತ್ತು ವಿಶೇಷ ಸೇವೆಗಳು ರಾಡಾರ್ ಯುದ್ಧ ವ್ಯವಸ್ಥೆಗಳ ಬಳಕೆಯೊಂದಿಗೆ ಸಮಯೋಚಿತ ಕ್ರಮಗಳ ಪರಿಣಾಮವಾಗಿ ಅವುಗಳನ್ನು ಹೊಡೆದುರುಳಿಸಲಾಯಿತು. ರಷ್ಯಾವು ಯಾವಾಗ ಮತ್ತು ಎಲ್ಲಿ ಸೂಕ್ತ ಎನಿಸುತ್ತದೆಯೋ ಆಗ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕುಗಳನ್ನು ಹೊಂದಿದೆ” ಎಂದು ಅದು ತಿಳಿಸಿದೆ. “ಎರಡು ಮಾನವರಹಿತ ವಾಹನಗಳು ಕ್ರೆಮ್ಲಿನ್ ಕಡೆ ಧಾವಿಸುತ್ತಿದ್ದವು. ಈ ಉಪಕರಣಗಳನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ” ಎಂದು ಕ್ರೆಮ್ಲಿನ್ ಹೇಳಿಕೆ ನೀಡಿದೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 5 ಮಕ್ಕಳು ಸೇರಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿಯಾಗಿ ಉಕ್ರೇನ್‌ ಸಾಳಿ ನಡೆಸಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಅಲ್ಲದೆ ಮೇ 9 ರಂದು ರಷ್ಯಾ ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ್‌ ಹಾಕಲು ಈ ದಾಳಿ ನಡೆದಿದೆ. ಖಂಡಿತವಾಗಿಯೂ ಇದಕ್ಕೆ ಪ್ರತಿದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ.

ಇದನ್ನೂ ಓದಿ: ಮೇ 10 ತಪ್ಪದೇ ವೋಟ್‌ ಮಾಡಿದ್ರೆ ಈ ಕ್ಷೇತ್ರದ ಜನರಿಗೆ ಸಿಗುತ್ತೆ ಬಂಪರ್ ಗಿಫ್ಟ್‌..! ಮತ ಚಲಾಯಿಸಿ, ಬಹುಮಾನ ಪಡೆದು ಆನಂದಿಸಿ

Leave A Reply

Your email address will not be published.