Vistara- Air India: ವಿಸ್ತಾರ-ಏರ್ ಇಂಡಿಯಾ ಮಧ್ಯೆ ಒಪ್ಪಂದ! ಯಾತ್ರಿಕರಿಗೇನು ಲಾಭ?

Agreement between Vistara-Air India

Vistara- Air India: ಇದೀಗ ವಿಸ್ತಾರ ಮತ್ತು ಏರ್ ಇಂಡಿಯಾ (Vistara- Air India) ಮಧ್ಯೆ ಒಪ್ಪಂದ ನಡೆದಿದೆ. ಇದರಿಂದ ಯಾತ್ರಿಕರಿಗೇನು ಲಾಭ? ಎಂಬುದರ ಮಾಹಿತಿ ಇಲ್ಲಿದೆ. ಒಪ್ಪಂದದ ನಂತರ, ಪ್ರಯಾಣಿಕರು ಎರಡು ಏರ್‌ಲೈನ್‌ಗಳ ನೆಟ್‌ವರ್ಕ್‌ಗಳ ಮಧ್ಯೆ ಪ್ರಯಾಣಿಸುವ ಸೌಲಭ್ಯ ಪಡೆಯಲಿದ್ದಾರೆ. ಏರ್ ಇಂಡಿಯಾ ಗ್ರಾಹಕರು ವಿಸ್ತಾರಾದ ದೇಶೀಯ ನೆಟ್‌ವರ್ಕ್‌ನ ಸೌಲಭ್ಯ ಪಡೆಯಬಹುದು. ವಿಮಾನ ಪ್ರಯಾಣಿಕರಿಗೆ ಇದು ಸಂತಸದ ಸುದ್ದಿಯೇ ಸರಿ!.

ಏರ್ ಇಂಡಿಯಾ ಮತ್ತು ವಿಸ್ತಾರಾ ದೇಶದ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಒಂದೇ ಟರ್ಮಿನಲ್‌ಗಳಿಂದ ಕಾರ್ಯನಿರ್ವಹಿಸುತ್ತವೆ. ಇಂಟರ್‌ಲೈನ್ ಪ್ರಯಾಣದ ಗ್ರಾಹಕರಿಗೆ ತಡೆರಹಿತ ಆನ್-ಗ್ರೌಂಡ್ ಪ್ರಯಾಣದ ಅನುಭವವನ್ನು ನೀಡುತ್ತದೆ.

ಈ ಪಾಲುದಾರಿಕೆಯಿಂದ ಪ್ರಯಾಣಿಕರು ಒಂದೇ ಬೋರ್ಡಿಂಗ್ ಪಾಸ್‌ನಲ್ಲಿ ಎರಡೂ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಪ್ರಯಾಣಿಸಬಹುದು. ಲಗೇಜ್ ಇತ್ಯಾದಿಗಳನ್ನು ಚೆಕ್-ಇನ್ ಮಾಡಬಹುದು. ಎರಡು ಏರ್‌ಲೈನ್‌ಗಳ ನಡುವಿನ ಒಪ್ಪಂದದ ವ್ಯಾಪ್ತಿಯು ಇಂಟರ್ ಏರ್‌ಲೈನ್ ಥ್ರೂ ಚೆಕ್-ಇನ್ (IATCI) ಅನುಷ್ಠಾನವನ್ನು ಒಳಗೊಂಡಿದೆ.

ಇವುಗಳು ಪಾಲುದಾರಿಕೆಯಲ್ಲಿ ಇರುವುದರಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯಾವುದೇ ಏರ್‌ಲೈನ್‌ನಲ್ಲಿ ಬುಕ್ (Airline booking) ಮಾಡಬಹುದಾಗಿದೆ. ವಿಸ್ತಾರಾ ಪ್ರಯಾಣಿಕರು ಏರ್ ಇಂಡಿಯಾ ನಿರ್ವಹಿಸುವ ಹಲವಾರು ಅಂತರರಾಷ್ಟ್ರೀಯ ವಿಮಾನಗಳ ಮೂಲಕ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಏರ್ ಇಂಡಿಯಾ ಪ್ರಯಾಣಿಕರು ದೇಶದ ಹಲವು ನಗರಗಳಿಗೆ ಪ್ರಯಾಣಿಸಬಹುದು.

 

ಇದನ್ನು ಓದಿ: Divyaprabha Chiltadka: ಬೆಳ್ಳಾರೆ: ಮೋಸ,ವಂಚನೆ ಪ್ರಕರಣದಲ್ಲಿ ಮತ್ತೆ ಬೀದಿಗೆ ಬಂದ ಕಾಮಧೇನು ಕುಟುಂಬ| ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು

Leave A Reply

Your email address will not be published.