Chandigarh: ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಕ್ಲಾಸ್‍ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕ ; ಈತನ ಅಸಭ್ಯ ವರ್ತನೆಯಿಂದ ಮುಂದೆ ಆದದ್ದೇನು?

Chandigarh: ಇತ್ತೀಚೆಗೆ ವಿದ್ಯಾರ್ಥಿಗಳ (students) ಜೊತೆಗೆ ಅಸಭ್ಯವಾಗಿ ವರ್ತಿಸುವ ಶಿಕ್ಷಕರ (teachers) ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಎಷ್ಟೋ ಶಿಕ್ಷಕರು ಲೈಂಗಿಕ ಕಿರುಕುಳ (Sexual harassment) ನೀಡಿ ಮಾನಸಿಕ ಹಿಂಸೆ ನೀಡುತ್ತಾರೆ. ಇಂತಹ ಪ್ರಕರಣ ಸಾಕಷ್ಟು ಬೆಳಕಿಗೆ ಬಂದಿದೆ. ಇದೀಗ ಇಲ್ಲಿನ ಗೋಬಿಂದಪುರ ಮೊಹಲ್ಲಾದ (Chandigarh) (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯ ಶಿಕ್ಷಕನಾದ ರಾಜೀವ್ ಶರ್ಮಾ ಎಂಬಾತ ವಿದ್ಯಾರ್ಥಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

 

ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿ, ಸರಿಯಾದ ದಾರಿಯಲ್ಲಿ ನಡೆಸುವಾತ ಮಕ್ಕಳ ಜೊತೆಗೇ ಭಕ್ಷಕನಂತೆ ವರ್ತಿಸುತ್ತಿದ್ದಾರೆ. ಅಂತೆಯೇ ಈ ಶಿಕ್ಷಕ ಕೂಡ ಭಕ್ಷಕನಂತೆ ವರ್ತಿಸಿದ್ದು, ರಾಜೀವ್ ಶರ್ಮಾ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸುತ್ತಿದ್ದ ಎನ್ನಲಾಗಿದೆ.

ಈತ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸುವ ಜೊತೆಗೆ ಅಸಭ್ಯವಾಗಿ ಸನ್ನೆಯೂ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸದ್ಯ ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪಂಜಾಬ್ (Punjab) ಪೋಲಿಸರು ಬಂಧಿಸಿದ್ದಾರೆ. ಆರೋಪಿಯ ವಿರುಧ್ಧ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rajinikanth: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !

Leave A Reply

Your email address will not be published.