Yellow Fever Alert: ಬೆಂಗಳೂರಿನಲ್ಲಿ ಯಲ್ಲೋ ಫೀವರ್, ಸೂಡಾನ್’ನಿಂದ ಬಂದವರು ತಂದ್ರಾ ?!

Share the Article

Yellow Fever Alert: ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಹೊಸ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಸೃಷ್ಟಿಯಾಗಿದೆ. ಹೌದು, ಸುಡಾನ್ ನಿಂದ ಕರ್ನಾಟಕಕ್ಕೆ ಬಂದವರಿಗೆ ʼಎಲ್ಲೋ ಫೀವರ್ʼ ಸೋಂಕು (Yellow Fever Alert) ಇದೆ ಎಂಬ ಶಂಕೆ ವ್ಯಕ್ತವಾಗಿದೆ.

362 ಮಂದಿ ಯುದ್ದ ಪೀಡಿತ ಸೂಡನ್ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದು, ಅವರಲ್ಲಿ 45 ಜನರು ಹಳದಿ ಜ್ವರದ ಲಸಿಕೆ ಪಡೆಯದಿದ್ದಾರೆ ಎಂಬ ಮಾಹಿತಿ ಆರೋಗ್ಯ ತಪಾಸಣೆ ವೇಳೆಗೆ ಲಭ್ಯವಾಗಿದೆ. ಈಗಾಗಲೇ 45 ಶಂಕಿತರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗಾಗಿ ಹಳದಿ ಜ್ವರ (Yellow Fever) ಬೆಂಗಳೂರಿಗೆ ಬಂದಿದೆ ಎನ್ನಲಾಗುತ್ತಿದೆ.

ಹಳದಿ ಜ್ವರ ಲಕ್ಷಣಗಳೇನು?
ಹಳದಿ ಜ್ವರ ಕಾಣಿಸಿಕೊಂಡಾಗ, ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸ್ನಾಯು ನೋವು, ತಲೆನೋವು, ವಾಕರಿಕೆ ಮತ್ತು ವಾಂತಿ ಉಂಟಾಗುತ್ತದೆ. ಈ ಜ್ವರ ಬಂದರೆ ಅದರ ಪರಿಣಾಮ 15 ಪ್ರತಿಶತದಷ್ಟು ಜನರು ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ. ಇನ್ನು ಜ್ವರ ಹೆಚ್ಚಾಗಿ ತಾರಕ್ಕೇರಿದರೆ
ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇದನ್ನೂ ಓದಿ:2nd Puc AnswerSheet: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಡೌನ್ ಲೋಡ್ ಮಾಡ್ಕೋಬೇಕಾ, ಇಲ್ಲಿದೆ ಲಿಂಕ್ !

Leave A Reply

Your email address will not be published.