Inverter Bulb: ಕರೆಂಟ್ ಹೋದರೆ ಚಿಂತೆ ಪಡಬೇಕಿಲ್ಲ, ಈ ಬಲ್ಬ್ ಕರೆಂಟ್ ಇಲ್ಲದೆಯೇ ಉತ್ತಮ ಬೆಳಕಿನ ಜೊತೆಗೆ 6 ಗಂಟೆ ಉರಿಯುತ್ತೇ!!

Inverter Bulb: ಇಂದಿನ ದಿನದಲ್ಲಿ ಕರೆಂಟ್ (current) ಅಥವಾ ಪವರ್ ಇಲ್ಲದೆ ಮನೆಯಲ್ಲಿನ ಜನರು ಅಲ್ಲಾಡೋದಿಲ್ಲ. ಹಿಂದೆ ಕರೆಂಟ್ ಹೋದರೆ ಚಿಮಣಿ ದೀಪಗಳಿದ್ದವು ಅದರಲ್ಲೇ ಎಲ್ಲಾ ಕೆಲಸಗಳೂ ಮುಗಿದು ಹೋಗುತ್ತಿದ್ದವು. ಆದರೆ, ಇಂದು ಹಾಗಲ್ಲ. ಕರೆಂಟ್ ಹೋದರೆ ಕೆಲ ಮನೆಗಳಲ್ಲಿ ಇನ್ವಟರ್ ಗಳಿವೆ (inverter). ಇಲ್ಲದಿರುವ ಮನೆಯವರು ಮನೆಯ ಒಂದೊಂದು ಮೂಲೆಯಲ್ಲಿ ಕುಳಿತುಬಿಡುತ್ತಾರೆ.

ಯಾಕೆಂದರೆ, ಅಷ್ಟು ಕರೆಂಟ್ ಗೆ ಅಡಿಕ್ಟ್ ಆಗಿದ್ದಾರೆ ಇಂದಿನ ಜನ. ಓದುವ ಮಕ್ಕಳು ಕರೆಂಟ್ ಇಲ್ಲದೆ ಓದೋದಿಲ್ಲ. ಯಾವುದೇ ಕಾರ್ಯ ಮುಂದೆ ಸಾಗಲ್ಲ. ಆದರೆ, ಕರೆಂಟ್ ಹೋಯಿತೆಂದು ಚಿಂತೆ ಪಡುವ ಅಗತ್ಯವಿಲ್ಲ. ಈ ಬಲ್ಬ್ (Inverter Bulb) ಕರೆಂಟ್ ಇಲ್ಲದೆಯೇ ಉತ್ತಮ ಬೆಳಕಿನ ಜೊತೆಗೆ 6 ಗಂಟೆ ಉರಿಯುತ್ತೇ. ಯಾವುದಿದು? ವಿಶೇಷತೆ ಏನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಈ ಬಲ್ಬ್‌ನ ಹೆಸರು DP 7812 (ರೀಚಾರ್ಜಿಬಲ್ LED ಎಮರ್ಜೆನ್ಸಿ ಬಲ್ಬ್) ಎಂದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಬಲ್ಬ್ ಲಭ್ಯವಾಗುತ್ತದೆ. ಇದರ ಬೆಲೆ ಕೇವಲ 549 ರೂ ಆಗಿದೆ‌‌. ಇದು 18W LED, 2000mAh ಬ್ಯಾಟರಿ ಮೂಲಕ 6 ಗಂಟೆಗಳ ಕಾಲ ಉತ್ತಮ ಬೆಳಕು ನೀಡುತ್ತದೆ.

ಈ ಬಲ್ಬ್ ಬಳಸಿದರೆ ಕರೆಂಟ್ ಹೋದಾಗ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಉಳಿದ ಬಲ್ಬ್ ಗಿಂತ ಹೆಚ್ಚು ಪಟ್ಟು ಬೆಳಕು ನೀಡುತ್ತದೆ. ಅಲ್ಲದೆ, ಈ ಬಲ್ಬ್ ಅನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ. ಕರೆಂಟ್ ಇರುವಾಗ ಅವುಗಳು ತಾನಾಗೇ ಚಾರ್ಜ್ ಆಗುತ್ತವೆ. ಚಾರ್ಜ್ ಆಗಲು ಇವು 8-10 ಗಂಟೆಗಳ ಸಮಯವಕಾಶ ತೆಗೆದುಕೊಳ್ಳುತ್ತವೆ.

ಕರೆಂಟ್ ಇಲ್ಲದಿರುವಾಗ ಈ ಬಲ್ಬ್ ಸುಮಾರು 6 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ನೀಡುತ್ತದೆ. 2000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ. ಈ 18W ಇನ್ವರ್ಟರ್ ತುರ್ತು LED ಬಲ್ಬ್ ಆನ್ ಮಾಡಿದಾಗ ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಅಷ್ಟೇ ಅಲ್ಲ, ಈ ಬಲ್ಬ್’ಗೆ 6 ತಿಂಗಳ ವಾರಂಟಿ ಇರುತ್ತದೆ.

Leave A Reply

Your email address will not be published.