Home latest Marriage Rituals: ವಧು ಗಂಡನ ಮನೆಗೆ ತೆರಳುವಾಗ ತವರಿನಿಂದ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು...

Marriage Rituals: ವಧು ಗಂಡನ ಮನೆಗೆ ತೆರಳುವಾಗ ತವರಿನಿಂದ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಕೊಡಬೇಡಿ!

Marriage Rituals
Image source: femina.in

Hindu neighbor gifts plot of land

Hindu neighbour gifts land to Muslim journalist

Marriage Rituals: ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯ ಘಟ್ಟ. ಪ್ರತಿ ಹೆಣ್ಣು ಹೆತ್ತವರು ಕೂಡ ತಮ್ಮ ಮನೆಯ ಮಗಳು ಹೋದ ಮನೆಯಲ್ಲಿ ಖುಷಿಯಿಂದ ನೆಮ್ಮದಿ ಯಿಂದ ಜೀವಿಸಬೇಕೆಂದು ಬಯಸುವುದು ಸಹಜ. ಹೀಗಾಗಿ ಅದೆಷ್ಟೇ ಕಷ್ಟವಾದರೂ ಮಗಳ ಮದುವೆಗಾಗಿ ತಮ್ಮ ಜೀವಿತಾವಧಿಯ ಎಲ್ಲ ಉಳಿತಾಯವನ್ನು ಕೂಡಿಟ್ಟು, ಚಿನ್ನ ಒಡವೆ ಎಲ್ಲ ಮಾಡಿಸಿ ಮನೆಯಳಿಯನಿಗೆ ವರದಕ್ಷಿಣೆ ಕೂಡ ನೀಡಿ ತಮ್ಮ ಮಗಳ ಭವಿಷ್ಯ ಸುಲಲಿತವಾಗಿ ಸಾಗಬೇಕು ಎಂದು ಬಯಸುವುದು ವಾಡಿಕೆ. ಆದರೆ, ಹೆಣ್ಣು ಮದುವೆಯಾದ ಬಳಿಕ ತವರಿನಿಂದ ವಧು (Bride)ಗಂಡನ ಮನೆಗೆ ಹೋಗುವಾಗ ಕೆಲ ವಸ್ತುಗಳನ್ನು ನೀಡುವುದು ಒಳ್ಳೆಯದಲ್ಲ(Things Not to Give to Bride) ಎಂಬುದು ನಿಮಗೆ ಗೊತ್ತಾ?

ಮದುವೆ ಎಂದರೆ ಸಾಕು! ಗೌಜಿ ಗದ್ದಲ ಮಾಮೂಲಿ!ಮದುವೆ (Marraige) ಎನ್ನುವ ಸಂಪ್ರದಾಯಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವವಿದೆ. ಮದುವೆ ಎಂಬುದು ಒಂದು ಸುಮಧುರ ಭಾವ ಅಷ್ಟೆ ಅಲ್ಲದೆ, ಎರಡು ಮನಸುಗಳ ಬೆಸೆಯುವ ಕೊಂಡಿ. ಎರಡು ಕುಟುಂಬಗಳನ್ನು ಒಂದುಗೂಡಿಸುವ ಶುಭ ಕಾರ್ಯ. ಆದರೆ, ಇಂದು ಬದಲಾವಣೆಯ ಗಾಳಿ ಜೋರಾಗಿ ಬೀಸಿ ಎಲ್ಲದರಲ್ಲಿಯೂ ಬದಲಾವಣೆ ಕಂಡು ಬರುತ್ತಿದ್ದು ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ.

ಮದುವೆ ಎಂಬುದು ಪ್ರತಿಯೊಬ್ಬರ ಬಾಳಿನ ವಿಶೇಷ ದಿನ. ಅದೇ ರೀತಿ ಮದುವೆಯ ದಿನ(Marriage Rituals)ಮನೆಯ ಮಗಳು ತವರಿಂದ ಗಂಡನ ಮನೆಗೆ ತೆರಳುವ ಸಂದರ್ಭ ಕೆಲ ವಸ್ತುಗಳನ್ನು ನೀಡುವುದು ಕೆಡುಕು ಉಂಟು ಮಾಡಬಹುದು. ಹಾಗಿದ್ರೆ, ಯಾವ ವಸ್ತುಗಳನ್ನು ಒಯ್ಯುವುದು ಕೆಟ್ಟದ್ದು ಎಂಬ ಮಾಹಿತಿ ನಿಮಗಾಗಿ.

ಮದುವೆಯಾಗಿ ಗಂಡನ ಮನೆಯನ್ನು ಬೆಳಗುವ ವಧುವಿಗೆ ತವರಿನವರು ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಕೊಟ್ಟು ಕಳಿಸಬಾರದು. ನಿಮ್ಮ ಮಗಳನ್ನು ತವರಿಂದ ಕಳುಹಿಸುವ ಸಂದರ್ಭ ಯಾವುದೇ ಕಾರಣಕ್ಕೂ ಉಪ್ಪಿನಕಾಯಿಯನ್ನು ನೀಡಬೇಡಿ. ಇದರಿಂದಾಗಿ ಹೊಸ ಸಂಬಂಧಗಳಲ್ಲಿ ಹುಳುಕು ಉಂಟುಮಾಡುತ್ತದೆ ಎಂಬ ನಂಬಿಕೆಯಿದೆ.

ಅದೇ ರೀತಿ, ವಧುವಿಗೆ ಉಪ್ಪನ್ನು ಕೊಡುವುದು ಕೂಡ ಒಳ್ಳೆಯದಲ್ಲ. ಉಪ್ಪನ್ನು ಕೊಟ್ಟು ಕಳುಹಿಸುವ ಬದಲಿಗೆ ಸಿಹಿಯನ್ನು ನೀಡಿದರೆ ಆ ಸಂಬಂಧ ಸಿಹಿಯಂತೆ ಬಾಂಧವ್ಯ ಗಟ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ಕಸವನ್ನು ಸ್ವಚ್ಚ ಮಾಡಲು ಬಳಸುವ ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ, ಪೊರಕೆಯನ್ನು ನೀಡುವುದು ಕೂಡ ಶ್ರೇಯಸ್ಕರವಲ್ಲ.

ಮನೆಯನ್ನು ಒಡೆಯುವುದನ್ನು ಸೂಚಿಸುವ, ಚೂಪಾದ ವಸ್ತುಗಳಾಗಿರಲಿ, ಹಿಟ್ಟಿನ ಜರಡಿ ಅಥವಾ ಅಡುಗೆ ಒಲೆಯನ್ನು ಅಪ್ಪಿ ತಪ್ಪಿಯೂ ನಿಮ್ಮ ಮಗಳಿಗೆ ತವರಿನಿಂದ ಗಂಡನ ಮನೆಗೆ ಕೊಡಬೇಡಿ. ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂಬ ನಂಬಿಕೆಯಿದ್ದು, ಈ ವಸ್ತುಗಳು ಖುಶಿಗೆ ಅಡ್ಡಿಪಡಿಸಿ ದಾಂಪತ್ಯದಲ್ಲಿ ವಿರಸ ಮೂಡಲು ಕಾರಣವಾಗಬಹುದು.

 

ಇದನ್ನು ಓದಿ: Pension Payment Order: ‘PPO’ ಸಂಖ್ಯೆ ಎಂದರೇನು? ಪರಿಶೀಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ