UPI Payment: UPI ಮೂಲಕ ಹಣ ಕಳುಹಿಸಲು ಹೊಸ ಮಿತಿ ನಿಗದಿ! ಯಾವ ಬ್ಯಾಂಕ್ ಗ್ರಾಹಕರಿಗೆ ಎಷ್ಟು ಮಿತಿ ಇದೆ?

UPI Payment: ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಆದರೆ, ಈ UPI ಪಾವತಿಯ ಮಿತಿ ಏನು? UPI ಮೂಲಕ ಹಣ ಕಳುಹಿಸಲು (UPI Payment) ಹೊಸ ಮಿತಿ ನಿಗದಿಯಾಗಿದೆ. ಈ ಮಿತಿ HDFC, SBI ಮತ್ತು ICICI ಸೇರಿ ಎಲ್ಲ ಬ್ಯಾಂಕ್‌ಗಳಿಗೆ ಅನ್ವಯವಾಗಲಿದೆ.

 

NPCI ಪ್ರಕಾರ, UPI ಮೂಲಕ ಖಾತೆಯಿಂದ ದಿನದಲ್ಲಿ ಗರಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಕಳುಹಿಸಬಹುದು. ಆದರೆ ಈ ಮಿತಿ ಎಲ್ಲಾ ಬ್ಯಾಂಕ್ ಗಳಲ್ಲೂ ಸಮನಾಗಿರಲ್ಲ, ಬ್ಯಾಂಕಿನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಸದ್ಯ Google Pay ಪ್ರಮುಖ ಬ್ಯಾಂಕ್‌ಗಳ UPI ಮಿತಿಗಳ ವಿವರ ತಿಳಿಸಿದೆ.

ಬ್ಯಾಂಕ್ ಗಳ UPI ಪೇಮೆಂಟ್ ಲಿಮಿಟ್ ಎಷ್ಟಿದೆ ಎಂಬುದು ತಿಳಿಯೋಣ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಬಳಕೆದಾರರು UPI ಮೂಲಕ 1 ಲಕ್ಷ ರೂಗಳ ವರೆಗೆ ಕಳುಹಿಸಬಹುದು. ಎಚ್‌ಡಿಎಫ್‌ಸಿ (HDFC bank) ಬಳಕೆದಾರರಿಗೂ 1 ಲಕ್ಷ ರೂಗಳ ಮಿತಿಯಿದ್ದು, ಹೊಸ ಗ್ರಾಹಕರಿಗೆ ಈ ಮಿತಿ 5000 ಮಿತಿ ಇದೆ. ICICI ಬ್ಯಾಂಕ್ ಗ್ರಾಹಕರು 10,000 ರೂ.ವರೆಗೆ UPI ಮೂಲಕ ಹಣ ಕಳುಹಿಸಬಹುದು. Google Pay ಬಳಕೆದಾರರಿಗೆ ಈ ಮಿತಿಯನ್ನು 25,000 ರೂ.ಗೆ ನಿಗದಿಪಡಿಸಲಾಗಿದೆ. ಆಕ್ಸಿಸ್ ಬ್ಯಾಂಕ್ 1 ಲಕ್ಷಕ್ಕೆ ಮಿತಿಗೊಳಿಸಿದೆ. ಬ್ಯಾಂಕ್ ಆಫ್ ಬರೋಡಾ (bank of baroda) ಗ್ರಾಹಕರು 25,000 ರೂ.ವರೆಗೆ ಯುಪಿಐ ಮೂಲಕ ಮೊತ್ತ ಕಳುಹಿಸಬಹುದು.

 

ಇದನ್ನು ಓದಿ: DB Inamdar: ಬೆಳಗಾವಿಯ ಹಿರಿಯ ಕಾಂಗ್ರೆಸ್‌ ನಾಯಕ ಡಿಬಿ ಇನಾಮದಾರ್ ಅನಾರೋಗ್ಯದಿಂದ ನಿಧನ!!

Leave A Reply

Your email address will not be published.