HD Kumaraswamy: ಜ್ವರದಿಂದ ಬಳಲುತ್ತಿದ್ದ ಮಾಜಿ ಸಿಎಂ ಹೆಚ್‌ಡಿಕೆ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

HD Kumaraswamy: ಚುನಾವನಾ ಹೊಸ್ತಿಲಿನಲ್ಲೇ ಜ್ವರದಿಂದ ಬಳಲುತ್ತಿದ್ದ ಮಾಜಿ ಸಿಎಂ H.D ಕುಮಾರಸ್ವಾಮಿ (HD Kumaraswamy) ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

 

ವಿಧಾನ ಸಭೆ ಚುನಾವಣೆ ಹಿನ್ನೆಲೆ ನಿರಂತರ ಪ್ರವಾಸ, ಕಾರ್ಯಕ್ರಮಗಳ ಒತ್ತಡದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಜ್ವರ ಬಳಲುತ್ತಿದ್ದು ಮಣಿಪಾಲ್ ಆಸ್ಪತ್ರೆ ದಾಖಲಾಗಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದ್ದು, ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಸ್ಪತ್ರೆಯಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದರು ಇದೀಗ ಕೊಂಚ ಚೇತರಿಸಿಕೊಂಡ ಕಾರಣದಿಂದಾಗಿ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆ ಪ್ರಚಾರ ಮಾಡುವುದಕ್ಕಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಯಿಂದಲೇ ರೂಟ್ ಮ್ಯಾಪ್ ಸಿದ್ದಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಾಳೆ ಅಥವಾ ನಾಡಿದ್ದು ಹೆಚ್ಡಿಕೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: Intimidation Viral news : ಅಪ್ಪʼಎಣ್ಣೆʼ ಗೆ ಹಣ ನೀಡಿಲ್ಲವೆಂದು ಸಿಟ್ಟುಗೊಂಡ ಮಗರಾಯ! ಕೊನೆಗೆ ಹೈಟೆನ್ಶನ್‌ ವಿದ್ಯುತ್‌ ಕಂಬವೇರಿದ! ಮುಂದೆ…

Leave A Reply

Your email address will not be published.