Home latest Vijayapriya Nityananda: ವೈರಲ್ ಆಯ್ತು ನಿತ್ಯಾನಂದ ಶಿಷ್ಯೆಯ ಹಾಟ್ ಫೋಟೋಸ್! ಕೋಟಿ ಕೋಟಿ ಬಿಟ್ಟ ಈಕೆ...

Vijayapriya Nityananda: ವೈರಲ್ ಆಯ್ತು ನಿತ್ಯಾನಂದ ಶಿಷ್ಯೆಯ ಹಾಟ್ ಫೋಟೋಸ್! ಕೋಟಿ ಕೋಟಿ ಬಿಟ್ಟ ಈಕೆ ನಿತ್ಯಾನಂದನ ಹಿಂದೆ ಯಾಕೆ ಬಂದ್ಲು?

Vijayapriya Nityananda
Image source - Social media

Hindu neighbor gifts plot of land

Hindu neighbour gifts land to Muslim journalist

Vijayapriya Nityananda : ಆಗಿದ್ದಾಂಗೆ ಏನಾದರೂ ಒಂದು ಕಿತಾಪತಿಗಳನ್ನು ಮಾಡುತ್ತಾ, ಅವಾಂತರಗಳನ್ನು ಸೃಷ್ಟಿಸುತ್ತ ಸ್ವಘೋಷಿತ ಹಾಗೂ ವಿವಾದಿತ ದೇವಮಾನವ ನಿತ್ಯಾನಂದ ಸಾಕಷ್ಟು ಸುದ್ಧಿಯಲ್ಲಿರುತ್ತಾನೆ. ಅಂತೆಯೇ ಈತ ಕಳೆದ ತಿಂಗಳು ವಿಶ್ವಸಂಸ್ಥೆಯ ಸಭೆಯೊಂದನ್ನು ಪ್ರಮುಖ ಸಭೆ ಎಂದು ನಂಬಿಸಿ ಸಭೆಯಲ್ಲಿ ತನ್ನ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎಂದು ಫೋಟೋಗಳನ್ನು ಶೇರ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿ ಕೊನೆಗೆ ಮುಖಭಂಗ ಅನುಭವಿಸಿದ್ದ. ಸದ್ಯ ಆ ಸಭೆಯಲ್ಲಿ ಭಾಗವಹಿಸಿದ್ದ, ಮೊದಲು ಕೋಟ್ಯಾದೀಶ್ವರೆಯಾಗಿ ನಂತರ ಆತನ ಶಿಷ್ಯೆಯಾದವಳ ಹಾಟ್ ಫೋಟೋಸ್ ಗಳು ವೈರಲ್ ಆಗಿವೆ.

ಹೌದು, ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸ ದೇಶದ ತಮ್ಮ ಪ್ರತಿನಿಧಿಗಳು ಭಾಗವಹಿಸಿರುವ ಕುರಿತು ಸ್ವತಹ ನಿತ್ಯಾನಂದರೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಆ ಪ್ರತಿನಿಧಿ ಹಾಗೂ ತನ್ನ ಶಿಷ್ಯೆಯನ್ನು ವಿಜಯಪ್ರಿಯಾ ನಿತ್ಯಾನಂದ (Vijayapriya Nityananda) ಎಂದು ಉಲ್ಲೇಖಿಸಲಾಗಿತ್ತು. ಆ ವೇಳೆ ಆಕೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮಾಹಿತಿ ಹರಿದಾಡಿತ್ತು. ಆದರೆ ಜನರಿಗೆ ಯಾರಿವಳು ಚೆಲುವೆ? ಇವನಿಗೆ ಹೇಗೆ ತಗಲಾಕಿಕೊಂಡಳು ಎಂಬ ವಿಚಾರ ಕಾಡಿತ್ತು. ಆದರೀಗ ಆಕೆಯ ಬಗ್ಗೆ ಕೆಲವೊಂದಿಷ್ಟು ಮಾಹಾತಿಗಳು ಲಭ್ಯವಾಗಿದೆ.

ಅಂದಹಾಗೆ ಫೆಬ್ರವರಿ 24 ರಂದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (CESCR) ಆಯೋಜಿಸಿದ್ದ ಚರ್ಚೆಯಲ್ಲಿ ಸೀರೆಯುಟ್ಟು, ಪೇಟವನ್ನು ಧರಿಸಿ ಮತ್ತು ಭಾರೀ ಆಭರಣವನ್ನು ಧರಿಸಿದ್ದ ಮಹಿಳೆಯು ತನ್ನನ್ನು ತಾನು “ಕೈಲಾಶ್ ಯುನೈಟೆಡ್ ಸ್ಟೇಟ್ಸ್‌ನ ಖಾಯಂ ರಾಯಭಾರಿ” ಎಂದು ಪರಿಚಯಿಸಿಕೊಂಡಳು. ಅವರೇ ಈ ವಿಜಯಪ್ರಿಯಾ ನಿತ್ಯಾನಂದ. ಅಂದು ಮಾತನಾಡಿದ ವಿಜಯಪ್ರಿಯಾ, ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ ರಕ್ಷಣೆ ಕೋರಿದ್ದರು.

ವಿಜಯಪ್ರಿಯಾ ಅವರ ಫೇಸ್‌ಬುಕ್ ಪುಟದ ಪ್ರಕಾರ, ಅವರು ವಾಷಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ವಿಜಯಪ್ರಿಯಾ ಅವರು ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಬಿಎಸ್‌ಸಿ ಗೌರವವನ್ನು ಹೊಂದಿದ್ದಾರೆ. ಜೂನ್ 2014 ರಲ್ಲಿ, ಅವರನ್ನು ವಿಶ್ವವಿದ್ಯಾಲಯದ ಡೀನ್ ಗೌರವ ಪಟ್ಟಿಯಲ್ಲಿ ಹೆಸರಿಸಲಾಯಿತು. ಆದರೆ ಈಕೆ ಸದ್ಯ ನಿತ್ಯಾನಂದನ ಬಂಟಿಯಾಗಿದ್ದಾಳೆ.

ಇದಲ್ಲದೆ ಫೇಸ್‌ ಬುಕ್‌ ಖಾತೆಯಲ್ಲಿ ಈಕೆ ಕೈಲಾಸದ ಖಾಯಂ ರಾಯಭಾರಿ ಎಂದು ಬರೆದುಕೊಂಡಿದ್ದಾರೆ. ಫೇಸ್‌ ಬುಕ್‌ ನಲ್ಲಿ ಭಾರತೀಯ ಹೆಣ್ಣಿನಂತೆ ಸೀರೆಯುಟ್ಟ ಫೋಟೋದೊಂದಿಗೆ ವೆಸ್ಟರ್ನ್‌ ಮಾದರಿಯ ಫೋಟೋ ಈಕೆ ಹಂಚಿಕೊಂಡಿದ್ದು. ಕೈಯಲ್ಲಿ ನಿತ್ಯಾನಂದನ ಟ್ಯಾಟೋ ಹಾಕಿಕೊಂಡಿದ್ದಾರೆ. ನಿತ್ಯಾನಂದನ ಪ್ರತಿಯೊಂದು ಧಾರ್ಮಿಕ ಸೆಷನ್ಸ್‌ ಗಳನ್ನು ಹಂಚಿಕೊಂಡಿದ್ದಾರೆ. ವಿಜಯಪ್ರಿಯಾ ನಿತ್ಯಾನಂದ ಅವರು ಈ “ಯುನೈಟೆಡ್‌ ಸ್ಟೇಟ್ಸ್‌ ಆಫ್ ಕೈಲಾಸ” ಪರವಾಗಿ ಹಲವಾರು ಸಂಸ್ಥೆಗಳೊಂದಿಗೆ ಮಾಡುವ ಒಪ್ಪಂದಗಳನ್ನು ನೋಡಿಕೊಳ್ಳುತ್ತಾರೆ ಎಂದು ʼಕೈಲಾಸʼದ ವೆಬ್‌ ಸೈಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral video  : ಮೋದಿಯೇ ನಮ್ಮ ದೇವರೆಂದು ಮಳೆಯಲ್ಲಿ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ! ವಿಡಿಯೋ ವೈರಲ್