Kodagu Latest News: ಸುಡಾನ್ ಸಂಘರ್ಷದ ಕುರಿತು ಕೊಡಗು ಜಿಲ್ಲೆಯ ಜನತೆಗೆ ಮುಖ್ಯ ಮಾಹಿತಿ ಪ್ರಕಟ!

Kodagu Latest News: ಸಂಘರ್ಷಪೀಡಿತ ಸೂಡಾನ್‌ನಲ್ಲಿ (Sudan)ಸತತವಾಗಿ ಕಳೆದ ಏಳು ದಿನಗಳಿಂದ ಸೇನಾ ಪಡೆಗಳ ನಡುವಿನ ಭೀಕರ ಕಾಳಗ ಮುಂದುವರೆದಿರುವ ಹಿನ್ನೆಲೆ ಸೂಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಅತಂತ್ರವಾಗಿದ್ದು, ಅಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಭಾರತ(India)ನೆರೆ ರಾಷ್ಟ್ರಗಳ ನೆರವು ಕೋರಿದೆ.

 

ಸೂಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿ ಸಾವಿರಾರು ಭಾರತೀಯರು ಜೀವವನ್ನು ಪಣಕ್ಕಿಟ್ಟಿರುವ ಬಿಕ್ಕಟ್ಟಿನ ವೇಳೆ ಪ್ರಧಾನಿ ನರೇಂದ್ರ ಮೋದಿ (Pm Modi)ಅವರು ಗುರುವಾರ ಮಹತ್ವದ ಸಭೆಯ ನೇತೃತ್ವ ವಹಿಸಿ ಕೂಡಲೇ ಭಾರತೀಯರ ಸ್ಥಳಾಂತರಕ್ಕೆ ಯೋಜನೆಗಳನ್ನು ರೂಪಿಸಲು ಸೂಚಿಸಿದ್ದಾರೆ. ಬಿಕ್ಕಟ್ಟು ಪೀಡಿತ ಪ್ರದೇಶದಲ್ಲಿ ಪ್ರಸ್ತುತ 4,000 ಭಾರತೀಯರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, 200ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದು ಭಾರತೀಯರ ರಕ್ಷಣೆಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಈ ನಡುವೆ, ಸೂಡಾನ್ ದೇಶದಲ್ಲಿ ಸೇನೆ ಹಾಗೂ ಅರೆ ಸೇನಾಪಡೆಗಳ ನಡುವಿನ ಕಾಳಗದಿಂದ ಅನೇಕ ಮಂದಿ ಸಾವನ್ನಪ್ಪಿದ್ದು, ಕರ್ನಾಟಕದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ, ಕೊಡಗು (Kodagu)ಜಿಲ್ಲೆಯವರು ಯಾರಾದರೂ ಸೂಡಾನ್ ದೇಶದಲ್ಲಿ ಸಿಲುಕಿದ್ದರೆ,ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಲು ಸೂಚಿಸಿದೆ.

ಹೀಗಾಗಿ, ಕೊಡಗಿನವರು ಯಾರಾದರೂ ಸುಡಾನ್ ದೇಶದಲ್ಲಿ ಅಪಾಯದ ಸುಳಿಯಲ್ಲಿ ಸಿಲುಕಿದ್ದರೆ ಈ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಈ ಕುರಿತು ಪ್ರಕಟಣೆಯಲ್ಲಿ( Kodagu Latest News)ಮಾಹಿತಿ ನೀಡಲಾಗಿದೆ.ದೂ.ಸಂ. 08272-221077, 08272-221099, ವಾಟ್ಸಾಪ್ ಸಂಖ್ಯೆ:- 8550001077 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ಇದನ್ನೂ ಓದಿ :  ಕೈತುಂಬಾ ಸಾಲ, ಮೈ ತುಂಬಾ ಕಾಯಿಲೆ ಇರೋ ನಿನ್ನ ಜತೆ ಯಾರ್ ಸಂಸಾರ ಮಾಡ್ತಾರೆ: ಪವಿತ್ರಾ ಲೋಕೇಶ್ ನಿಜ ಬಣ್ಣ ಬಯಲಾಗುತ್ತಾ?!

Leave A Reply

Your email address will not be published.