Home Karnataka State Politics Updates Viral video: ಮೋದಿಯೇ ನಮ್ಮ ದೇವರೆಂದು ಮಳೆಯಲ್ಲಿ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ! ವಿಡಿಯೋ...

Viral video: ಮೋದಿಯೇ ನಮ್ಮ ದೇವರೆಂದು ಮಳೆಯಲ್ಲಿ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ! ವಿಡಿಯೋ ವೈರಲ್

Viral video
Image source - Social media

Hindu neighbor gifts plot of land

Hindu neighbour gifts land to Muslim journalist

Modi Cutout :ನಮ್ಮ ಪ್ರಧಾನಿ ನರೇಂದ್ರ ಮೋದಿ(PM Modi) ಅಂದರೆ ಸಣ್ಣ ವಯಸ್ಸಿನ ಆಡೋ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರಲ್ಲಿ ಹೆಚ್ಚಿನವರಿಗೆ ಬಲು ಪ್ರೀತಿ, ಗೌರವ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ(Bangalore) ದೇವನಹಳ್ಳಿಯಲ್ಲಿ(Devanahalli) ನಡೆದ ಬಿಜೆಪಿ(BJP) ರೋಡ್​ ಶೋ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ ಸ್ವಚ್ಛಗೊಳಿಸಿ ಪ್ರೀತಿ ವ್ಯಕ್ತಪಡಿಸಿದ್ದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಬೆಂಗಳೂರಿನ ದೇವನಹಳ್ಳಿ ಬಳಿ ಆಯೋಜಿಸಲಾಗಿದ್ದ ಕೇಂದ್ರ ಸಚಿವ ಅಮಿತ್‌ ಶಾ(Amith sha) ಅವರ ರೋಡ್‌ ಶೋ ಮಳೆಯಿಂದ ರದ್ದಾಗಿದ್ದು, ಈ ವೇಳೆ ರಸ್ತೆ ಬದಿ ಇರಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌಟ್‌ (Modi Cutout) ಮೇಲಿದ್ದ ನೀರನ್ನು ಗ್ರಾಮಸ್ಥನೊಬ್ಬ ಒರೆಸಿ, ಸ್ವಚ್ಛಮಾಡಿದ ವಿಡಿಯೋ ಸದ್ಯ ಎಲ್ಲೆಡೆ ವೈರಲ್‌ ಆಗಿದೆ.

ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಶುಕ್ರವಾರ (ಏ.21) ಮಧ್ಯಾಹ್ನ ಕೇಂದ್ರ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಕಟೌಟ್‌ಗಳನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಮಳೆಯಿಂದಾಗಿ ರೋಡ್‌ ಶೋ ರದ್ದುಗೊಳಿಸಲಾಯಿತು. ಆಗ ಮಳೆಯಲ್ಲಿಯೇ ಒದ್ದೆಯಾಗುತ್ತಿದ್ದ ಕಟೌಟ್‌ ಅನ್ನು ಸ್ಥಳೀಯ ಅಭಿಮಾನಿಯೊಬ್ಬ ತನ್ನ ಟವೆಲ್‌ನಿಂದ ಒರೆಸಿ ಸ್ವಚ್ಛಗೊಳಿಸಿದನು. ಈ ನಿಷ್ಕಲ್ಮಶ ಅಭಿಮಾನವನ್ನು ನೋಡಿದವರ ಎಂಥವರ ಮನಸ್ಸೂ ಕೂಡ ಮರುಗೇ ಮರುಗುತ್ತದೆ.

ಇನ್ನು ಈ ಕಾರ್ಯಕ್ಕಾಗಿ ನೀವು ಹಣ ಪಡೆದಿದ್ದೀರಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಕ್ಕೆ ನನಗೆ ಯಾರೂ ಹಣ ಕೊಟ್ಟಿಲ್ಲ. ಹಣ ಪಡೆಯುವುದೂ ಇಲ್ಲ. ಪ್ರಧಾನಿ ಮೋದಿಯವರ ಮೇಲಿನ ಪ್ರೀತಿ, ವಿಶ್ವಾಸದಿಂದ ಹೀಗೆ ಮಾಡುತ್ತಿದ್ದೇನೆ ಎಂದಿದ್ದಾರೆ. ಜತೆಗೆ, ಪ್ರಧಾನಿ ಮೋದಿ ದೇಶಕ್ಕಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ, ಅವರು ದೇವರಿದ್ದಂತೆ ಎಂದು ಆತ ನುಡಿಯುವುದು ವಿಡಿಯೊದಲ್ಲಿ ಕಾಣಬಹುದು.

https://fb.watch/k2wLvuzrtN/?mibextid=6aamW6

 

ಇದನ್ನೂ ಓದಿ: Apple store theft: ಅಬ್ಬಾಬ್ಬಾ! ಬಾತ್‌ರೂಮ್‌ಗೆ ಸುರಂಗ ಕೊರೆದ ಖದೀಮರು, 4.16 ಕೋಟಿ ಮೌಲ್ಯದ 436 ಐಫೋನ್‌ ಎಗರಿಸಿ ಬಿಟ್ಟರು!