7th Pay Commission: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ!

7th Pay Commission: ರಾಜ್ಯ ಸರ್ಕಾರಿ ನೌಕರರಿಗೆ (government employees) ಭರ್ಜರಿ ಸಿಹಿಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸಲಾಗಿದೆ. ಹೌದು, ಡಿಎ ಶೇ.3ರಷ್ಟು ಏರಿಕೆಯಾಗಿದೆ (7th Pay Commission).

ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ 76ನೇ ಹಿಮಾಚಲ ದಿನದ ಆಚರಣೆ ಮಾಡಲಾಗಿದ್ದು, ಈ ವೇಳೆ ಅಲ್ಲಿನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhwinder Singh Sukhu) ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದರು. ಏನಪ್ಪಾ ಅಂದ್ರೆ, ಶೇಕಡ 3ರಷ್ಟು ಡಿಎ ಏರಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು.

ಅಂತೆಯೇ ಇದೀಗ ರಾಜ್ಯದ ಸರ್ಕಾರಿ ನೌಕರರ ತುಟ್ಟಿಭತ್ಯೆ (DA hike) ಹೆಚ್ಚಳವಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು (ಡಿಎ) ಶೇ.3ರಷ್ಟು ಏರಿಕೆ ಮಾಡಿದೆ. ಈ ಹಿಂದೆ ಶೇ.31 ರಷ್ಟು ಡಿಎ ಇದ್ದು, ಸದ್ಯ ಇದು ಶೇ.34ಕ್ಕೆ ಏರಿಕೆಯಾಗಿದೆ.

ಇದು ಸುಮಾರು 2.15 ಲಕ್ಷ ಉದ್ಯೋಗಿಗಳಿಗೆ ಮತ್ತು 1.90 ಲಕ್ಷ ನಿವೃತ್ತಿದಾರರಿಗೆ ಪ್ರಯೋಜನವಾಗಿದೆ. ಈ ಡಿಎ ಹೆಚ್ಚಳದಿಂದ ಹಿಮಾಚಲ ಪ್ರದೇಶದ (Himachala Pradesha) ಸರ್ಕಾರದ ಮೇಲೆ ಸುಮಾರು 500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರೆನ್ಸ್ ರಿಲೀಫ್ (ಡಿಆರ್- ತುಟ್ಟಿಭತ್ಯೆ ಪರಿಹಾರ) ಶೇಕಡ 4ರಷ್ಟು ಏರಿಕೆ ಮಾಡಿದೆ. ಇದೀಗ ರಾಜ್ಯದ ಸರ್ಕಾರಿ ನೌಕರರ ತುಟ್ಟಿಭತ್ಯೆಯೂ ಹೆಚ್ಚಳವಾಯಿತು.

 

ಇದನ್ನು ಓದಿ: Vinayaka Chaturthi: ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ವಿನಾಯಕ ಚತುರ್ಥಿಯಂದು ಈ ಮಂತ್ರಗಳನ್ನು ಪಠಿಸಿ! 

Leave A Reply

Your email address will not be published.