Vehicle Rules: ವಾಹನ ಮಾಲೀಕರಿಗೆ ಸಿಹಿಸುದ್ದಿ ; ಮೇ 1ರಿಂದ ವಾಹನ ಪರವಾನಗಿ, ನವೀಕರಣ ಶುಲ್ಕ ರದ್ದು !

Vehicle Rules: ವಾಹನ ಮಾಲೀಕರಿಗೆ (vehicle owner) ಭರ್ಜರಿ ಗುಡ್ ನ್ಯೂಸ್ (Good news) ಇಲ್ಲಿದೆ. ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಈ ಹಿನ್ನೆಲೆ ಚಾಲಕರ ಪರವಾನಗಿ (license) ಹಾಗೂ ನವೀಕರಣ ಶುಲ್ಕ ರದ್ದಾಗಲಿದೆ. ಎಲೆಕ್ನಿಕ್, ಎಥೆನಾಲ್ ಮತ್ತು ಮಿಥನಾಲ್ ಇಂಧನದ ಮೂಲಕ ಸಂಚರಿಸುವ ಪ್ರವಾಸಿ ವಾಹನಗಳು ಶುಲ್ಕ ಪಾವತಿಸಬೇಕಿಲ್ಲ (Vehicle Rules).

ಪ್ರವಾಸಿ ವಾಹನಗಳಿಗೆ ಪರವಾನಿಗೆ ವಿತರಣೆಯನ್ನು ಸುಲಭೀಕರಿಸುವ ನಿಟ್ಟಿನಿಂದ ಹಾಗೂ ಪ್ರವಾಸಿ ವಾಹನ ನಿರ್ವಾಹಕರ ತೊಂದರೆ ಕಡಿಮೆ ಮಾಡುವ ಉದ್ದೇಶದಿಂದ ಮೇ 1 ರಿಂದ ಬ್ಯಾಟರಿ, ಎಥೆನಾಲ್, ಇಥನಾಲ್ ಇಂಧನ ಮೂಲಕ ಚಲಿಸುವ ಪ್ರವಾಸಿ ವಾಹನಗಳಿಗೆ ಲೈಸೆನ್ಸ್ ಹಾಗೂ ನವೀಕರಣ ಶುಲ್ಕ ರದ್ದುಪಡಿಸಲಾಗಿದೆ.

ರಾಜ್ಯ ಸಾರಿಗೆ ಪ್ರಾಧಿಕಾರಗಳು ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ನೀಡಬೇಕಿದ್ದು, 7 ದಿನಗಳೊಳಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ಪರ್ಮಿಟ್ ಒದಗಿಸಲಾಗಿದೆ, ಪರವಾನಿಗೆಯನ್ನು ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಆಲ್ ಇಂಡಿಯಾ ಪರ್ಮಿಟ್ ಗಾಗಿ ಟ್ಯಾಕ್ಸಿಗಳಿಗೆ (Taxi) ವಾರ್ಷಿಕ 20,000 ರೂ. ಅಥವಾ ತ್ರೈಮಾಸಿಕವಾಗಿ 6,000 ರೂ. ಶುಲ್ಕ ಕಟ್ಟಬೇಕಿತ್ತು. ಪ್ರವಾಸಿ ವಾಹನಗಳಿಗೆ (tourist vehicle), 23 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಬಸ್ ಗಳು ಶುಲ್ಕ ಪಾವತಿಸಬೇಕಿತ್ತು. ಆದರೆ, ಮೇ 1 ರಿಂದ ಪರ್ಮಿಟ್ ಗಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎನ್ನಲಾಗಿದೆ. ಈ ನಿರ್ಧಾರದಿಂದ ವಾಹನ ಮಾಲೀಕರಿಗೆ‌ ಸಿಹಿಸುದ್ಧಿ ಸಿಕ್ಕಂತಾಗಿದ್ದು, ಬಹಳ ಸಹಾಯಕವಾಗಿದೆ.

 

ಇದನ್ನು ಓದಿ: Railway station: ರೈಲ್ವೆ ನಿಲ್ದಾಣದ ಎಲ್ಲಾ ಕರ್ತವ್ಯಗಳನ್ನು ಗ್ರಾಮಸ್ಥರೇ ನೋಡಿಕೊಳ್ತಾರಂತೆ!

Leave A Reply

Your email address will not be published.