Chicken-Fish curry tips: ಮೀನು, ಮಾಂಸ ಸಾಂಬಾರು ರುಚಿ ರುಚಿಯಾಗಿ ಘಂ ಎನ್ನಬೇಕೆ? ಈ ವಿಧಾನ ಅನುಸರಿಸಿ

Chicken-Fish curry tips: ಆಹಾ!! ಮೀನು (Fish), ಕೋಳಿ (chicken) ಅಂದ್ರೆ ಸಾಕು ತಿನ್ನೋದಿಕ್ಕೆ ಆಸೆಯಾಗುತ್ತೇ ಅಲ್ವಾ?? ಅದೆಷ್ಟೋ ಜನರಿಗೆ ಈ ಮೀನು, ಕೋಳಿ ಇಲ್ಲದೆ ದಿನ ಸಾಗೋದೇ ಇಲ್ಲ. ದಿನದ ಮೂರು ಹೊತ್ತು ಕೋಳಿ ಬೇಕೇ ಬೇಕು. ಇಲ್ಲ ಅಂದ್ರೆ ಅನ್ನ ಗಂಟಲಲ್ಲಿ ಇಳಿಯೋದೇ ಇಲ್ಲ. ಇನ್ನು ಈ ಕೋಳಿ, ಮೀನು ಸಾರು ಮಾಡೋ ಹೆಂಗಸರ ಗೋಳು ಕೇಳಬೇಕಾ? ಎಷ್ಟೇ ಚೆನ್ನಾಗಿ ಸಾಂಬಾರು ಮಾಡಿದರೂ ರುಚಿ ಬರೋದೇ ಇಲ್ಲ. ಹಾಗಿದ್ದರೆ,
ಮೀನು ಅಥವಾ ಮಾಂಸದ ಸಾರು ರುಚಿ ಬರಲು ಈ ಸಿಂಪಲ್ ಟಿಪ್ಸ್ (Chicken-Fish curry tips) ಫಾಲೋ ಮಾಡಿ, ಆಮೇಲೆ ನೋಡಿ ಸಾಂಬಾರು ರುಚಿ ನೋಡಿದ ತಕ್ಷಣ ಫಿದಾ ಆಗ್ತೀರಾ!!.

ಹೆಚ್ಚಾಗಿ ಕೋಳಿ ಸಾಂಬಾರು (chicken sambar) ತಯಾರು ಮಾಡುವಾಗ ಅಂಗಡಿಯಿಂದ ತಂದ ಮಸಾಲೆ ಹಾಕಲಾಗುತ್ತದೆ. ಮಸಾಲೆ ಹಾಕಿದರೆ ಸಾಂಬಾರು ಒಳ್ಳೆ ರುಚಿ ಬರುತ್ತದೆ. ಆದರೂ ಕೆಲವೊಂದು ಬಾರಿ ಮಾಂಸದ ಸಾಂಬಾರು ರುಚಿಸೊಲ್ಲ. ಆಗ ಗೃಹಿಣಿಯರು ಚಿಂತಾಕ್ರಾಂತರಾಗುತ್ತಾರೆ. ಆದರೆ, ಚಿಂತಿಸಬೇಕಿಲ್ಲ. ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಮೀನು ಅಥವಾ ಮಾಂಸದ ಸಾರನ್ನು ಒಲೆಯಿಂದ ಇಳಿಸುವುದಕ್ಕಿಂತ ಸ್ವಲ್ಪ ಸಮಯದ ಮುಂಚೆ ಹುಣಸೆಹಣ್ಣಿನ ರಸವನ್ನು ಅದಕ್ಕೆ ಹಾಕಿರಿ. ಆಗ ಸಾಂಬಾರಿನ ರುಚಿ ದುಪ್ಪಟ್ಟಾಗುತ್ತದೆ. ಸಾಂಬಾರು ಉತ್ತಮ ಟೇಸ್ಟ್ ಬರುತ್ತದೆ. ನಂತರ ರುಚಿಯಾದ ಊಟ ಸವಿಯಬಹುದು.

ಇನ್ನು ತೆಂಗಿನ ಕಾಯಿ ಚಟ್ನಿ ಮಾಡುವಾಗ ರುಚಿ ಬರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ. ತೆಂಗಿನಕಾಯಿ ಚಟ್ನಿ ಮಾಡುವಾಗ ಅದಕ್ಕೆ ಹಾಕುವ ಪದಾರ್ಥಗಳೊಂದಿಗೆ ಸ್ವಲ್ಪ ಧನಿಯಾವನ್ನು ಸೇರಿಸಿ. ಆಗ ರುಚಿ ಇನ್ನಷ್ಟು ಹೆಚ್ಚುತ್ತದೆ. ಅದರ ರುಚಿ ಎರಡು ಪೆಟ್ಟಾಗಿರುತ್ತದೆ.

ಇದನ್ನೂ ಓದಿ: Silk Saree: ಸಿಲ್ಕ್ ಸೀರೆ ವರ್ಷಾನುಗಟ್ಟಲೆ ತನ್ನ ಹೊಳಪು ಕಳೆದುಕೊಳ್ಳದಂತೆ ಮಾಡಲು ಇಲ್ಲಿದೆ ಸುಲಭ ಟ್ರಿಕ್ಸ್!

Leave A Reply

Your email address will not be published.