Indian Railways: ಈ ರೈಲು ನಿಲ್ದಾಣ ನಿಮ್ಮನ್ನು ಡೈರೆಕ್ಟಾಗಿ ವಿದೇಶಕ್ಕೆ ಕೊಂಡೊಯ್ಯುತ್ತೆ!

International train route: ನಿಮಗೆ ಗೊತ್ತಾ! ನಮ್ಮ ದೇಶ ಬಿಟ್ಟು ಕೆಲವು ದೇಶಕ್ಕೆ ತೆರಳಲು ಏರ್ ಟಿಕೆಟ್ ಚಿಂತೆ ಬೇಕಾಗಿಲ್ಲ, ಯಾಕೆಂದರೆ ಕೆಲವು ದೇಶಗಳಿಗೆ ಭಾರತೀಯ ರೈಲುಗಳ (Indian Railways) ಮುಖಾಂತರವೂ ಹೋಗಬಹುದು. ಯಾಕೆಂದರೆ ಭಾರತವು ಏಳು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ದೇಶಗಳಿಗೆ ರೈಲಿನಲ್ಲೂ (International train route) ಪ್ರಯಾಣಿಸಬಹುದಾಗಿದೆ. ಆ ದೇಶಗಳು ಯಾವುವು? ಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹಲ್ದಿಬರಿ ರೈಲು ನಿಲ್ದಾಣ :
ಇದು ಭಾರತದ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಹಲ್ದಿಬರಿ ಪಟ್ಟಣಕ್ಕೆ ಸೇವೆ ಸಲ್ಲಿಸುತ್ತದೆ . ಇದು ಬಾಂಗ್ಲಾದೇಶ-ಭಾರತದ ಗಡಿಯಲ್ಲಿ ಸಕ್ರಿಯವಾದ ರೈಲ್ವೆ ಸಾರಿಗೆ ಕೇಂದ್ರವಾಗಿದೆ . ಬಾಂಗ್ಲಾದೇಶದ ಗಡಿಯಿಂದ ಸುಮಾರು 4.5 ಕಿಮೀ ದೂರದಲ್ಲಿ ಹಲ್ದಿಬರಿ ರೈಲು ನಿಲ್ದಾಣವು ಭಾರತದ ಗಡಿ ಭಾಗದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಚಿಲ್ಹಾಟಿ ರೈಲು ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ. ಆದ್ದರಿಂದ ಭಾರತದಿಂದ ಢಾಕಾಗೆ ಪ್ರಯಾಣಿಸಲು ಇಚ್ಚಿಸುವವರು ಮಿಥಾಲಿ ಎಕ್ಸ್‌ಪ್ರೆಸ್ ಮೂಲಕ ನ್ಯೂ ಜಲ್ಪೈಗುರಿ ಜಂಕ್ಷನ್‌ನಿಂದ ಮೂಲಕ ಪ್ರಯಾಣ ಮಾಡಬಹುದು.

ರಾಧಿಕಾಪುರ ರೈಲು ನಿಲ್ದಾಣ :
ರಾಧಿಕಾಪುರ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿದೆ, ಇದು ಕತಿಹಾರ್ ವಿಭಾಗದ ಅಡಿಯಲ್ಲಿ ಬರುತ್ತದೆ. ಇದು ಬಾಂಗ್ಲಾದೇಶ-ಭಾರತ ಗಡಿಯಲ್ಲಿ ಸಕ್ರಿಯವಾದ ರೈಲು ಸಾರಿಗೆ ವ್ಯವಸ್ಥೆಯಾಗಿದೆ . ರಾಧಿಕಾಪುರ ರೈಲು ನಿಲ್ದಾಣವು ಶೂನ್ಯ-ಪಾಯಿಂಟ್ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಬಾಂಗ್ಲಾದೇಶದಲ್ಲಿ, ಬಿರಾಲ್ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ.

ಪೆಟ್ರಾಪೋಲ್ ರೈಲು ನಿಲ್ದಾಣ:
ಇದು ಇಂಡೋ-ಬಾಂಗ್ಲಾದೇಶದ ಗಡಿಯ ಸಮೀಪದಲ್ಲಿದೆ ಮತ್ತು ಬಾಂಗ್ಲಾದೇಶಕ್ಕೆ ಸರಕು ರೈಲುಗಳಿಗೆ ಪ್ರಮುಖ ಗಡಿ ದಾಟುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕೋಲ್ಕತ್ತಾ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ತೆರಳುವ ಬಂಧನ್ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಪೆಟ್ರಾಪೋಲ್ ರೈಲು ನಿಲ್ದಾಣದಲ್ಲೂ ಕೂಡ ನಿಲ್ಲುತ್ತದೆ. ಈ ರೈಲಿನ ಮುಖಾಂತರ ಬಾಂಗ್ಲಾದೇಶಕ್ಕೆ ಪ್ರಯಾಣಿಸಬಹುದು. ಆದರೆ, ಭಾರತ-ಬಾಂಗ್ಲಾದೇಶ ನಡುವಣ ಈ ರೈಲಿನಲ್ಲಿ ಪ್ರಯಾಣಿಸಲು ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿದೆ.

ಸಿಂಗಾಬಾದ್ ರೈಲು ನಿಲ್ದಾಣ :
ಸಿಂಗಾಬಾದ್ ಎಂದು ಕರೆಯಲ್ಪಡುವ ಭಾರತದ ಮೂಲೆಯಲ್ಲಿರುವ ಕೊನೆಯ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಾಗಿದೆ. ಸಿಂಗಾಬಾದ್ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಬೀಬ್‌ಪುರದಲ್ಲಿದೆ. ವಿಶೇಷವೆಂದರೆ ಈ ನಿಲ್ದಾಣವು ಬಾಂಗ್ಲಾದೇಶದ ಗಡಿಗೆ ಹತ್ತಿರದಲ್ಲಿದೆ, ಇಲ್ಲಿಂದ ನಡೆದುಕೊಂಡು ನೀವು ಇನ್ನೊಂದು ದೇಶವನ್ನು ಅಂದರೆ ಬಾಂಗ್ಲಾದೇಶವನ್ನು ತಲುಪಬಹುದು.
ಮತ್ತು ಸಿಂಗಾಬಾದ್ ನಿಲ್ದಾಣವು ರೋಹನ್‌ಪುರ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ.

ಜಯನಗರ ರೈಲು ನಿಲ್ದಾಣ :
ಜಯನಗರ ರೈಲು ನಿಲ್ದಾಣವು ಬಿಹಾರದ ಮಧುಬನಿ ಜಿಲ್ಲೆಯ ಪ್ರಮುಖ ಟರ್ಮಿನಲ್ ರೈಲು ನಿಲ್ದಾಣವಾಗಿದೆ . ಇದು ಜೈನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ. ನಿಲ್ದಾಣವು 5 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ ಈ ರೈಲು ನಿಲ್ದಾಣವು ಇಂಡೋ-ನೇಪಾಳ ಗಡಿಯ ಸಮೀಪದಲ್ಲಿದೆ. ಈ ನಿಲ್ದಾಣವು ಜನಕ್‌ಪುರದಲ್ಲಿರುವ ಕುರ್ತಾ ನಿಲ್ದಾಣದ ಮೂಲಕ ನೇಪಾಳಕ್ಕೆ ಸಂಪರ್ಕ ಹೊಂದಿದೆ. ಈ ರೈಲು ಸೇವೆಯನ್ನು ಇತ್ತೀಚೆಗೆ ಪುನರಾರಂಭಿಸಲಾಗಿದೆ ಮತ್ತು ಎರಡೂ ದೇಶಗಳ ಜನರು ಈ ರೈಲು ಹತ್ತಲು ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ.

ಸದ್ಯ ಭಾರತೀಯ ರೈಲ್ವೆ ಮೂಲಕ ಈ ಮೇಲಿನಂತೆ ಕೆಲವು ದೇಶಗಳಿಗೆ ವಿಮಾನ ಯಾನದ ಹೊರತು ಪ್ರಯಾಣ ಮಾಡಬಹುದು.

ಇದನ್ನೂ ಓದಿ: Urvashi Rautela : ಊರ್ವಶಿ, ಮೇನಕೆ ನಾಚುವಂತೆ ಕಂಡ ಈ ಚೆಲುವೆ ಯಾರು? ಗೆಸ್ ಮಾಡಿ

Leave A Reply

Your email address will not be published.