2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಯಾವ ಜಿಲ್ಲೆ ಪಡೆದುಕೊಂಡಿದೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್‌ ವಿವರ!

Karnataka PUC Result 2023: ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ (2nd PUC Result) ಕಾದು ಕೂತಿರುವ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಹೊರ ಬಿದ್ದಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(Karnataka PUC Result 2023) ಎಪ್ರಿಲ್ 21ರಂದು ಪ್ರಕಟವಾಗಿದ್ದು, ಇನ್ನೂ ಯಾವ ಜಿಲ್ಲೆ ಮೊದಲ ಮೂರು ಸ್ಥಾನ ಪಡೆದುಕೊಂಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ( Karnataka Second PUC Exam Results ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ. 74.64 ಫಲಿತಾಂಶ ಬಂದಿದೆ.
ಈಗಾಗಲೇ ಪರೀಕ್ಷೆಗಳು ಮುಗಿದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗುವುದನ್ನು ಎದುರು ನೋಡುತ್ತಿದ್ದ ವಿದ್ಯಾರ್ಥಿಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದು ಮೇಲು ಗೈ ಸಾಧಿಸಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ ಪಡೆದುಕೊಂಡಿದೆ. ಕೊಡಗು 3ನೇ ಸ್ಥಾನದಲ್ಲಿದ್ದು, ಆ ನಂತರದ ಸ್ಥಾನ ಉತ್ತರ ಕನ್ನಡ ಬಾಚಿಕೊಂಡಿದ್ದು, ಕೊನೆಯ ಸ್ಥಾನವನ್ನು ಯಾದಗಿರಿ ಪಡೆದಿದೆ.

ಕಳೆದ ಬಾರಿಯಂತೆ ಈ ಬಾರಿಯು ದಕ್ಷಿಣ ಕನ್ನಡ ಶೇಕಡ 95.34 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಾಚಿಕೊಂಡಿದೆ. ಎರಡನೇ ಸ್ಥಾನವನ್ನು ಪಡೆದ ಉಡುಪಿ 95.24% ಪಡೆದಿದ್ದು, ತೃತೀಯ ಸ್ಥಾನದಲ್ಲಿರುವ ಕೊಡಗು 90.55% ಗಳಿಸಿದ್ದು, ಯಾದಗಿರಿ 62.98% ಕೊನೆಯ ಸ್ಥಾನದಲ್ಲಿದೆ.

ಈ ಬಾರಿ ಪ್ರಥಮ ಸ್ಥಾನ ಬಾಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾವಾರು 88.02 ಗಳಿಸಿದ್ದು, ದ್ವಿತೀಯ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆ -ಶೇಕಡಾ 86.38 ಗಳಿಸಿದ್ದು, ಜಿಲ್ಲಾವಾರು ಮಾಹಿತಿಯ ಅನುಸಾರ ಕೊಡಗು ಶೇಕಡಾ 73.22 ಪಡೆದು ತೃತೀಯ ಸ್ಥಾನ ಪಡೆದಿದೆ. ಇನ್ನುಳಿದಂತೆ ಕ್ರಮವಾಗಿ ಉತ್ತರಕನ್ನಡ ಶೇಕಡಾ 74.33, ವಿಜಯಪುರ ಶೇಕಡಾವಾರು 77.14, ಚಿಕ್ಕಮಗಳೂರು 69.42 ಮತ್ತು ಕೊನೆಯ ಸ್ಥಾನ ಪಡೆದಿರುವ ಯಾದಗಿರಿ ಶೇಕಡಾವಾರು 60.59 ಗಳಿಸಿದೆ

ಜಿಲ್ಲಾವಾರು ಶೇಕಡ ಅಂಕಗಳನ್ನು ಪಡೆದುಕೊಂಡ ರಾಜ್ಯಗಳ ಪಟ್ಟಿಯ ಲಿಸ್ಟ್‌ ಈ ಕೆಳಗೆ ನೀಡಲಾಗಿದೆ.

 

ಇದನ್ನೂ ಓದಿ: Rain Forecast: ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ:ಹವಾಮಾನ ಇಲಾಖೆ ಮುನ್ಸೂಚನೆ!

Leave A Reply

Your email address will not be published.