D K Suresh: ಆರ್ ಅಶೋಕ್ ಗೆ ‘ಅಯ್ಯೋ ಪಾಪ’ ಎಂದ ಡಿ ಕೆ ಸುರೇಶ್, ಪದ್ಮನಾಭ ನಗರ ಸ್ಪರ್ಧೆ ಏನಂದ್ರು ಗೊತ್ತಾ?

D K Suresh: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನು ಒಂದೇ ದಿನ ಬಾಕಿ ಉಳಿದಿದೆ. ಹೀಗಾಗಿ ಚುನಾವಣಾ ಕಣ ರಂಗೇರುತ್ತಿದ್ದು ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಗೆ (Padmanabhanagar) ಕಾಂಗ್ರೆಸ್‌ (Congress) ಅಭ್ಯರ್ಥಿ ಠಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದು ಘುನಾಥ್ ನಾಯ್ಡು (Raghunath Naidu) ಅವರಿಗೆ ನೀಡಿದ ಬಿ ಫಾರಂಗೆ ತಡೆ ಹಿಡಿಯಲಾಗಿದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಕೆ ಸುರೇಶ್‌ (D K Suresh) ಅವರನ್ನು ಕಣಕ್ಕಿಳಿಸಲು ಎಲ್ಲಾ ತಯಾರಿ ನಡೆಸಿದೆ. ಈ ನಡುವೆ ಮಾತನಾಡಿದ ಡಿ ಕೆ ಸುರೇಶ್ ಅವರು, ಆರ್ ಅಶೋಕ್ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಿ ಮತಿನಲ್ಲೇ ತಿವಿದಿದ್ದಾರೆ.

ಒಕ್ಕಲಿಗರೇ ಹೆಚ್ಚಿರುವ ಕನಕಪುರ(Kanakapura) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಪ್ರಭಾವಿ ಶಾಸಕ, ನಾಯಕರಾಗಿರುವ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೊಕ್ ನೀಡುವ ನಿಟ್ಟಿನಲ್ಲಿ ಬಿಜೆಪಿಯು ತನ್ನ ಪ್ರಭಾವಿ ನಾಯಕ, ಒಕ್ಕಲಿಗ ನಾಯಕ, ಪದ್ಮನಾಭ ನಗರದ ಶಾಸಕ ಆರ್ ಅಶೋಕ್ ಅವರನ್ನು ಕನಕಪುರದಿಂದ ಕಣಕ್ಕಿಳಿಸಿದೆ. ಇದರಿಂದ ಎಚ್ಚೆತ್ತ ಕಾಂಗ್ರೆಸ್ ಬಿಜೆಪಿಗೆ ಶಾಕ್ ಕೊಡಲು ಅಶೋಕ್ ಅವರ ಹಾಲಿ ಕ್ಷೇತ್ರ ಪದ್ಮನಾಭ ನಗರಕ್ಕೆ ಕಾಂಗ್ರೆಸ್ ನ ಮತ್ತೊಬ್ಬ ಪ್ರಭಾವಿ ನಾಯಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಕೆ ಸುರೇಶ್‌ (DK Suresh) ಅವರನ್ನು ಕಣಕ್ಕಿಳಿಸಲು ಎಲ್ಲಾ ತಯಾರಿ ನಡೆಸಿದೆ.

ಹೌದು, ಪದ್ಮನಾಭ ನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುಳಿವನ್ನು ಡಿಕೆ ಶಿವಕುಮಾರ್ ನೀಡಿದ್ದು, ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಸುರೇಶ್, ಹಿರಿಯ ಮುಖಂಡರ ಮಾತಿಗೆ ಕಾಯುತ್ತಿದ್ದೇನೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಸಂಸದ ಡಿಕೆ ಸುರೇಶ್ ‘ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಸೂಚನೆಗಾಗಿ ಕಾಯ್ತಿದ್ದೇನೆ. ಚರ್ಚೆಗಳು ನಡೆಯುತ್ತಿವೆ. ರಘುನಾಥ ನಾಯ್ಡು ಕೂಡ ನನ್ನ ಆಹ್ವಾನ ಮಾಡಿದ್ದಾರೆ. ನಾನು ಇವತ್ತು ಪಕ್ಷಕ್ಕಿಂತ ಹೆಚ್ಚಾಗಿ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಸ್ಪರ್ಧೆ ಬಗ್ಗೆ ತಿಳಿಸಬೇಕಿದೆ. ನಾಮಿನೇಷನ್ ಫೈಲ್ ಮಾಡಬೇಕು ಅಂತ ಹೇಳಿದ್ದಾರೆ.

ಅಂದಹಾಗೆ ಈ ಸಮಯದಲ್ಲಿ ಡಿ ಕೆ ಸುರೇಶ್ ಅವರಿಗೆ ಸುದ್ದಿಗಾರರು ‘ಇದು ಅಶೋಕ್ ಭಯ ಬೀಳಿಸುವ ತಂತ್ರವಾ?’ ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ ‘ನನಗೆ ಅಶೋಕ್ ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಆದರೆ ಪಾಪ ಅಶೋಕ್’ ಎಂದು ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಈ ಮಾತಿನ ಇದರ ಹಿಂದಿನ ಮರ್ಮ ಏನೆಂದು ತಿಳಿದಿಲ್ಲ.

ಮುಂದುವರೆದು ಮಾತನಾಡಿದ ಅವರು “ನನಗೆ ವೈಯಕ್ತಿಕವಾಗಿ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ. ಆದರೆ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಮುಖ್ಯ. ಡಿಕೆಶಿ ಹೇಳಿದ ಹಾಗೆ ಶುಭ ಘಳಿಗೆ ಶುಭ ಸಮಯದಲ್ಲಿ ಎಲ್ಲವೂ ನಡೆಯುತ್ತಿರುತ್ತದೆ. ಇಂದು ಏನೇ ತೀರ್ಮಾನ ತೆಗೆದುಕೊಂಡರೂ ಇಂದು ರಾತ್ರಿ ನಾಳೆಯೊಳಗೆ ತೆಗೆದುಕೊಳ್ಳಬೇಕು. ನೋ ಡ್ಯೂ ಸರ್ಟಿಫಿಕೇಟ್ ದೆಹಲಿಯ ಇಂದ ಬೇಕಾಗುತ್ತದೆ ತರಿಸಿಕೊಂಡಿದ್ದೇನೆ. ಎಲ್ಲ ವ್ಯವಸ್ಥೆ ಆಗ್ತಾ ಇದೆ. ಅಭ್ಯರ್ಥಿ ಬದಲಾವಣೆಗೆ ನಾಳೆ ಸಾಯಂಕಾಲ ಮೂರು ಗಂಟೆ ತನಕ ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Siddaramaiah : ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ, 5 ವರ್ಷಗಳಲ್ಲಿ ಹೆಚ್ಚಿದ ಆಸ್ತಿ! ಸಿದ್ದು ಸಾಲ ಕೊಟ್ಟದ್ಯಾರಿಗೆ, ಪಡೆದದ್ಯಾರಿಂದ ಗೊತ್ತಾ?

Leave A Reply

Your email address will not be published.