Water Testing Device: ಇನ್ಮುಂದೆ ಮೊಬೈಲ್ ನಲ್ಲೆ ತಿಳಿದುಕೊಳ್ಳಬಹುದು ಕುಡಿಯುವ ನೀರು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂದು!

Water Testing Device: ನೀರು ಭೂಮಿ ಮೇಲೆ ಬದುಕುವ ಪ್ರತಿಯೊಂದು ಜೀವಿಗೂ ಮುಖ್ಯವಾಗಿದೆ. ಹೀಗಾಗಿ ಆರೋಗ್ಯಯುತವಾಗಿರಲು ಶುದ್ಧ ನೀರು ಕುಡಿಯುವುದು ಮುಖ್ಯವಾಗಿದೆ. ಆದ್ರೆ, ಇಂದು ಕುಡಿಯುವ ನೀರಿಗೂ ಪರದಾಡುವಂತೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಶುದ್ಧ ನೀರು ಸಿಗದೇ ಇರುವುದು.

 

ಇಂದಿನ ದಿನಗಳಲ್ಲಿ ಯಾವುದು ಶುದ್ಧ ನೀರು, ಯಾವುದು ಅಶುದ್ಧ ಎಂಬುದೇ ಅರಿಯದೆ ಹೋಗಿದೆ. ಈ ಸಮಸ್ಯೆ ಹೋಗಲಾಡಿಸಲೆಂದೆ ಹೊಸ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಬಂದಿದೆ. ಹೌದು. ಕುಡಿಯುವ ನೀರು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂದು (Water Testing Device) ಮೊಬೈಲ್ ಮೂಲಕವೇ ತಿಳಿಯಬಹುದು.

ನೀರಿನ ಎಲ್ಲಾ ಮಾಹಿತಿಯು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಾಗಲಿದ್ದು, ಈ ಸಾಧನೆಯನ್ನು 17 ವರ್ಷದ ಅಭಿಜೀತ್ ಹೊಸ ಸಂಶೋಧನೆ ಮೂಲಕ ಕಂಡುಹಿಡಿದಿದ್ದಾನೆ. ಈ ಸಾಧನವನ್ನು ಮನೆಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಸಾಧನವು ನಿಮ್ಮ ಮೊಬೈಲ್​ಗೆ ನೇರವಾಗಿ ಮಾಹಿತಿ ರವಾನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದು ಫೋನ್ ನೀರಿನ ಶುದ್ಧತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲದೆ, ಆ ವರದಿಯನ್ನು ಆಧರಿಸಿ ಏನು ಮಾಡಬೇಕೆಂದು ಹೇಳುತ್ತದೆ. ನೀರಿನ ಟಿಡಿಎಸ್ ಮತ್ತು ಪಿಹೆಚ್ ಮೌಲ್ಯದಿಂದ ಆರ್ಸೆನಿಕ್ ಮತ್ತು ಕಬ್ಬಿಣದ ಮಾಹಿತಿ ಲಭ್ಯವಿದೆ. ಇದು ರಾಸಾಯನಿಕವಾಗಿ ಬದಲಾಗಿ ನಂತರ ಎಲೆಕ್ಟ್ರಾನಿಕ್​ ಆಗಿ ನಂತರ ಡಿಜಿಟಲ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀರು ವ್ಯರ್ಥವಾಗುವುದಿಲ್ಲ ಎನ್ನುತ್ತಾರೆ ಸಂಶೋಧಕರು.

ನೀರಿನಲ್ಲಿ ಆರ್ಸೆನಿಕ್ ಮತ್ತು ಬ್ಯಾಕ್ಟೀರಿಯಾದಂತಹ ಅಪಾಯಕಾರಿ ಅಂಶಗಳನ್ನು ಪತ್ತೆ ಹಚ್ಚಲು ಇದು ಸಹಾಯ ಮಾಡುತ್ತದೆ. ನೀರಿನಲ್ಲಿ ಟಿಡಿಎಸ್ ಹೆಚ್ಚಾದರೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತೇವೆ ಎಂದು ಅಭಿಜಿತ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ಈ ಸಾಧನವು 5,000 ರೂ.ಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ನೀರಿಗೆ ಸಂಬಂಧಿಸಿದ ನೈಜ-ಸಮಯದ ವರದಿಯನ್ನು ಆಧರಿಸಿ ಸಲಹೆಯನ್ನು ನೀಡುತ್ತದೆ.

Leave A Reply

Your email address will not be published.