Asha Timmappa : ಪುತ್ತೂರು : ಆಶಾ ತಿಮ್ಮಪ್ಪ ಗೆಲುವಿಗೆ ಸಂಘ ತಂತ್ರಗಾರಿಕೆ : ಪುತ್ತಿಲ ಮನವೊಲಿಕೆಗೆ ಮುಂದಾದ ಹಿರಿಯರು,ಇಂದು ನಿರ್ಧಾರ

Putturu Asha Timmappa : ಪುತ್ತೂರು: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ವುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆ ಆಗಿದೆ. ಮುಂದೆ ಅಭ್ಯರ್ಥಿ ಗೆಲುವಿಗೆ ಸಂಬಂಧಿಸಿ ಚುನಾವಣಾ ಪ್ರಚಾರ ಚುರುಕುಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಂತ್ರಗಾರಿಕೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಎ.13ರಂದು ಪುತ್ತೂರು ಪಂಚವಟಿಯಲ್ಲಿ ಸಂಘದ ಪ್ರಮುಖರು ಪಕ್ಷದ ಪ್ರಮುಖರಿಗೆ, ಪರಿವಾರ ಸಂಘಟನೆಗಳ ಪ್ರಮುಖರೊಂದಿಗೆ ಬೈಠಕ್‌ ನಡೆಸಿ ಮಾರ್ಗದರ್ಶನ ನೀಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಒಂದು ಕಡೆ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್‌ ಸಿಗದೇ ಇರುವುದರಿಂದ ಅವರ ಬೆಂಬಲಿಗರು ಅಸಮಾಧಾನಿತರಾಗಿದ್ದಾರೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಬೆಂಬಲಿಗರು ತುರ್ತು ಸಭೆ ನಡೆಸಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಆಗ್ರಹಿಸಿದ್ದಾರೆ. ಇವೆಲ್ಲವನ್ನೂ ಸರಿಮಾಡಿಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕೆಂಬ ಕುರಿತು ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯ ವಾಹಕ ಪ್ರಕಾ‌ಶ್ ಪಿ.ಎಸ್ ಮತ್ತು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಸಮನ್ವಯ ಸಭೆ ನಡೆಸಿದರು.

ಬಿಜೆಪಿ ಪಕ್ಷದ ಪ್ರಮುಖರು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಸಹಿತ ಪರಿವಾರ ಸಂಘಟನೆಗಳಾದ ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಹಿತ ಪರಿವಾರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಉತ್ಸುಕರಾಗಿ ಕೆಲಸ ಮಾಡಬೇಕೆನ್ನುವ ನಿಟ್ಟಿನಲ್ಲಿ ಎಲ್ಲರೂ ಚುನಾವಣಾ ಪ್ರಚಾರಕ್ಕೆ ಇಳಿಯಬೇಕು ಎಂದು ತಿಳಿಸಲಾಗಿದೆ. ಸಭೆಯ ಬಳಿಕ ಬಿಜೆಪಿ ಅಭ್ಯರ್ಥಿ ಆಶಾ (Putturu Asha Timmappa) ತಿಮ್ಮಪ್ಪ ಗೌಡ ಅವರು ಸಭೆಗೆ ಆಗಮಿಸಿ ಪರಿಚಯ ಮಾಡಿಕೊಂಡಿದ್ದಾರೆ.

ಇದರ ಬೆನ್ನಲೇ ಏ. 12ರಂದು ಸಂಜೆ ಪುತ್ತಿಲ ಅಭಿಮಾನಿಗಳು ಪುತ್ತೂರಿನ ಕೋಟೆಚಾ ಹಾಲ್ ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿ ಪುತ್ತಿಲರವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅಗ್ರಹಿಸಿದ್ದರು. ಈ ವೇಳೆ ಅಭಿಮಾನಿಗಳ ಬಳಿ ಎರಡು ದಿವಸ ಕಾಲಾವಕಾಶ ಕೇಳಿದ ಪುತ್ತಿಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಸಲಹೆ ಪಡೆದು,ಸ್ವಾಮೀಜಿಗಳ ಮಾರ್ಗದರ್ಶನದಂತೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

ವಿಟ್ಲದ ಅಜ್ಞಾತ ಸ್ಥಳವೊಂದರಲ್ಲಿ ಅರುಣ್ ಪುತ್ತಿಲ ಜತೆ ಜಿಲ್ಲೆಯ ಅರ್ ಎಸ್ ಎಸ್ ಹಾಗೂ ಸಂಘ ಪರಿವಾರಕ್ಕೆ ಸೇರಿದ 8 ಮಂದಿ ಮುಖಂಡರು ಗಂಟೆಗಳ ಕಾಲ ಮಾತುಕತೆ ನಡೆಸಿ ಅಸಮಾಧನ ಶಮನಗೊಳಿಸುವ ಹಾಗೂ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೇ ಸಭೆಯೂ ಪಲಪ್ರದವಾಗಿ ಮೂಡಿ ಬರಲಿಲ್ಲ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸದಿರುವ ಭರವಸೆಯನ್ನು ಅವರು ಸಭೆಯಲ್ಲಿ ನೀಡಿಲ್ಲ ಎನ್ನಲಾಗಿದೆ.

ಪುತ್ತಿಲರ ಆಪ್ತ ಮೂಲಗಳ ಪ್ರಕಾರ ಪುತ್ತಿಲರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ಈ ಕುರಿತ ಸಿದ್ದತೆಯಲ್ಲಿ ಅವರ ಆಪ್ತವಲಯ ಹಾಗೂ ಬೆಂಬಲಿಗರು ತೊಡಗಿಸಿಕೊಂಡಿದ್ದಾರೆ.

ಪುತ್ತಿಲರು ಸ್ಪರ್ಧೆ ಕುರಿತ ತಮ್ಮನಿಲುವನ್ನು ಇಂದು ಘೋಷಿಸಲಿದ್ದಾರೆ ಎಂದು ಕೂಡ ಅವರ ಆಪ್ತ ಮೂಲಗಳು ತಿಳಿಸಿವೆ.

 

ಇದನ್ನು ಓದಿ : Truecaller Users : ಟ್ರೂಕಾಲರ್ ಬಳಕೆದಾರರಿಗಾಗಿ ಲೈವ್ ಕಾಲರ್ ಐಡಿ ವೈಶಿಷ್ಟ್ಯ ಆರಂಭ?!

Leave A Reply

Your email address will not be published.