Whatsapp Ban : ಇನ್ಮುಂದೆ ಈ ಫೋನ್ ಗಳಲ್ಲಿ ವರ್ಕ್ ಆಗೋದಿಲ್ಲ ವಾಟ್ಸಪ್!

Whatsapp Ban :ದೂರದಲ್ಲಿ ಇರುವ ಸ್ನೇಹಿತರನ್ನು, ಸಂಬಂಧಿಕರನ್ನು ಕ್ಷಣಾರ್ಧದಲ್ಲಿ ಸೇರಿಸುವಂತಹ ಆಪ್ ವಾಟ್ಸಪ್. ಇಂತಹ ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸಪ್, ಎಲ್ಲಾ ಬಳಕೆದಾರರ ಮನ ಗೆದ್ದಿದೆ. ಹೊಸ-ಹೊಸ ಆಫರ್ ಗಳನ್ನು ನೀಡುವುದರ ಮೂಲಕ ಮತ್ತಷ್ಟು ಗ್ರಾಹಕರ ಗಮನ ಸೆಳೆಯುತ್ತಿದೆ. ಆದ್ರೆ, ಇದೀಗ ವಾಟ್ಸಪ್ ಕಂಪನಿಯಿಂದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಹೌದು. ಇನ್ಮುಂದೆ ಈ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ (Whatsapp Ban). ಹಳೆಯದಾಗಿರುವ 49ಕ್ಕೂ ಹೆಚ್ಚು ಮೊಬೈಲ್‌ ಮಾಡೆಲ್‌ಗಳಲ್ಲಿ ಈ ವಾಟ್ಸಾಪ್‌ ವರ್ಕ್ ಆಗುವುದಿಲ್ಲ. ವಾಟ್ಸಪ್ ಬಳಸಲು ಆಗದ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಯಾವ್ಯಾವ ಮೊಬೈಲ್‌ಗಳಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುವುದಿಲ್ಲ ಅನ್ನೋದನ್ನು ತಿಳಿಯಬಹುದು. ಅಂದಹಾಗೆ ಇಂತಹದೊಂದು ನಿರ್ಧಾರ ಡಿಸೆಂಬರ್‌ 31 ರಿಂದ ಅನ್ವಯ ಆಗಲಿದೆ ಎಂದು ತಿಳಿದು ಬಂದಿದೆ.

ಐಫೋನ್​:
ಐಫೋನ್ 5, ಐಫೋನ್‌ 5c, ಆರ್ಕೋಸ್ 53 ಪ್ಲಾಟಿನಂ, ಗ್ರ್ಯಾಂಡ್ ಎಸ್ ಫ್ಲೆಕ್ಸ್ ZTE, ಗ್ರ್ಯಾಂಡ್ X ಕ್ವಾಡ್ V987 ZTE, ಹೆಚ್‌ಟಿಸಿ ಡಿಸೈರ್ 500 ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸಲು ಆಗುವುದಿಲ್ಲ.

ಹುವಾಯ್​ ಕಂಪೆನಿ:
ಹುವಾಯ್​​ ಅಸೆಂಡ್ ಡಿ, ಹುವಾಯ್‌ ಅಸೆಂಡ್‌ D1(Huawei Ascend D1), ಹುವಾಯ್‌ ಅಸೆಂಡ್‌ D2Huawei Ascend D2, ಹುವಾಯ್‌ ಅಸೆಂಡ್‌ G740 (Huawei Ascend G740), ಹುವಾಯ್‌ ಅಸೆಂಡ್‌ ಮೇಟ್(Huawei Ascend Mate), ಹುವಾಯ್‌ ಅಸೆಂಡ್‌ P1(Huawei Ascend P1), ಕ್ವಾಡ್ XL ಫೋನ್ ಗಳು.

ಸ್ಯಾ,ಮ್​ಸಂಗ್​ ಕಂಪೆನಿ:
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಏಸ್‌ 2, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೋರ್‌, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S2, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S3 ಮಿನಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ರೆಂಡ್‌ II, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ರೆಂಡ್‌ ಲೈಟ್‌, ಸ್ಯಾಮ್‌ಸಂಗ್‌ ಗ್ಯಾಲಕ್ಸಿ Xcover 2.

ಸೋನಿ ಕಂಪೆನಿ:
ಸೋನಿ ಎಕ್ಸ್‌ಪೀರಿಯಾ ಆರ್ಕ್ ಎಸ್, ಸೋನಿ ಎಕ್ಸ್‌ಪೀರಿಯಾ ಮಿರೋ, ಸೋನಿ ಎಕ್ಸ್‌ಪೀರಿಯಾ ನಿಯೋ ಎಲ್, ವಿಕೊ ಸಿಂಕ್ ಫೈವ್, ವಿಕೊ ಡಾರ್ಕ್ನೈಟ್ ಝೆಡ್ಟ್.

ಲೆನೋವೋ ಮತ್ತು ಎಲ್​ಜಿ ಕಂಪೆನಿಯ ಸ್ಮಾರ್ಟ್​ಫೋನ್​ಗಳು:
ಲೆನೋವೋ A820, ಎಲ್‌ಜಿ ಎನಾಕ್ಟ್, ಎಲ್‌ಜಿ ಲುಸಿಡ್ 2, ಎಲ್‌ಜಿ Optimus 4X HD, ಎಲ್‌ಜಿ ಆಪ್ಟಿಮಸ್ F3, ಎಲ್‌ಜಿ ಆಪ್ಟಿಮಸ್ F3Q, ಎಲ್‌ಜಿ ಆಪ್ಟಿಮಸ್ F5, ಎಲ್‌ಜಿ ಆಪ್ಟಿಮಸ್ F6, ಎಲ್‌ಜಿ ಆಪ್ಟಿಮಸ್ F7. ಎಲ್‌ಜಿ ಆಪ್ಟಿಮಸ್ L2 II, ಎಲ್‌ಜಿ ಆಪ್ಟಿಮಸ್ L3 II, ಎಲ್‌ಜಿ ಆಪ್ಟಿಮಸ್ L3 II ಡ್ಯುಯಲ್, ಎಲ್‌ಜಿ ಆಪ್ಟಿಮಸ್ L4 II, ಎಲ್‌ಜಿ ಆಪ್ಟಿಮಸ್ L4 II ಡ್ಯುಯಲ್, ಎಲ್‌ಜಿ ಆಪ್ಟಿಮಸ್ L5, ಎಲ್‌ಜಿ ಆಪ್ಟಿಮಸ್ L5 ಡ್ಯುಯಲ್, ಎಲ್‌ಜಿ ಆಪ್ಟಿಮಸ್ L5 II, ಎಲ್‌ಜಿ ಆಪ್ಟಿಮಸ್ L7, ಎಲ್‌ಜಿ ಆಪ್ಟಿಮಸ್ L7 II, ಎಲ್‌ಜಿ ಆಪ್ಟಿಮಸ್ L7 II ಡ್ಯುಯಲ್, ಎಲ್‌ಜಿ ಆಪ್ಟಿಮಸ್ ನೈಟ್ರೋ ಎಚ್ಡಿ, ಮೆಮೊ ZTE V956 ಗಳಲ್ಲಿ ವಾಟ್ಸಾಪ್‌ ಬಳಸುವುದನ್ನು ಮುಂದುವರಿಸಲು ಆಗುವುದಿಲ್ಲ. ಹಾಗಾಗಿ ಲೇಟೆಸ್ಟ್ ಮೊಬೈಲ್ ಗಳನ್ನು ಖರೀದಿಸುವುದು ಉತ್ತಮ.

Leave A Reply

Your email address will not be published.