Gas cylinder : ಒಂದು ಗ್ಯಾಸ್ ಸಿಲಿಂಡರ್‌ನ್ನು ದೀರ್ಘಾವಧಿಯವರೆಗೆ ಬಳಕೆ ಮಾಡಬೇಕೇ? : ಹಾಗಿದ್ರೆ ನಿಮಗಿದೆ ನೋಡಿ ಸಿಂಪಲ್ ಸಲಹೆಗಳು

Tips to use gas efficiently : ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಗ್ಯಾಸ್ ಸ್ಟವ್ ಇದ್ದೆ ಇದೆ. ಇದರಿಂದಾಗಿ ಬೇಗನೆ ಸುಲಭವಾಗಿ ಹೆಚ್ಚಿನವರು ಬಗೆ ಬಗೆಯ ಅಡುಗೆ ತಯಾರಿಸುತ್ತಾರೆ. ಆದ್ರೆ, ಈ ದುಬಾರಿ ದುನಿಯಾದಲ್ಲಿ ಹಣವೇ ಸಮಸ್ಯೆಯಾಗಿ ಹೋಗಿದೆ. ಯಾಕಂದ್ರೆ, ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವ ಅಡುಗೆ ಅನಿಲದಿಂದಾಗಿ ಆಹಾರ ತಯಾರಿಸಿ ಕೊಳ್ಳುವುದೇ ಕಷ್ಟವಾಗಿದೆ.

ಇಂತಹ ಸಮಸ್ಯೆಯಿಂದ ದೂರ ಇರಲು ಗೃಹಿಣಿಯರು ಮೊದಲು ಮಾಡಬೇಕಾದ ಕೆಲಸ ಎಂದ್ರೆ, ಗ್ಯಾಸ್ ಉಳಿತಾಯ. ಹೌದು. ದೀರ್ಘಾವಧಿಯವರೆಗೆ ಗ್ಯಾಸ್ ಸಿಲಿಂಡರ್‌ನ್ನು ಪರಿಣಾಮಕಾರಿಯಾಗಿ ಬಳಸಲು ಕೆಲವೊಂದು ಸಲಹೆಗಳಿದೆ (Tips to use gas efficiently). ಇದರಿಂದ ಎಲ್‌ಪಿಜಿ ಗ್ಯಾಸ್ ಕೂಡ ಉಳಿತಾಯವಾಗಲಿದೆ. ಹಾಗೆಯೇ ವಾತಾವರಣಕ್ಕೆ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಪರಿಣಾಮಗಳ ಸಂಖ್ಯೆಯನ್ನು ಕೂಡ ಕಡಿಮೆ ಮಾಡಬಹುದು. ಒಂದು ಗ್ಯಾಸ್ ಸಿಲಿಂಡರ್‌ನ್ನು ದೀರ್ಘಾವಧಿಯವರೆಗೆ ಬಳಕೆ ಮಾಡಬಹುದಾದ ಟಿಪ್ಸ್ ಇಲ್ಲಿದೆ ನೋಡಿ.

ಪ್ರೆಶರ್ ಕುಕ್ಕರ್ ಬಳಸಿ:
ಪ್ರೆಶರ್ ಕುಕ್ಕರ್ ಆಹಾರವು ವೇಗವಾಗಿ ಬೇಯಲು ಸಹಾಯ ಮಾಡುತ್ತದೆ. ಇದರಿಂದ ಗ್ಯಾಸ್ ಅನಿಲವೂ ಉಳಿತಾಯವಾಗುತ್ತದೆ.

ನೈಸರ್ಗಿಕ ಬೆಳಕನ್ನು ಬಳಸಿ:
ನೀವು ಹಗಲಿನಲ್ಲಿ ಅಡುಗೆ ಮಾಡುತ್ತಿದ್ದರೆ, ಅಡುಗೆ ಮನೆಯಲ್ಲಿ ಲೈಟ್​ ಆನ್ ಮಾಡುವ ಬದಲು ನೈಸರ್ಗಿಕ ಬೆಳಕನ್ನು ಬಳಸಿ. ಇದು ನಿಮ್ಮ ಅನಿಲ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬರ್ನರ್‌ನ್ನು ಸ್ವಚ್ಛವಾಗಿಡಿ:
ಸ್ವಚ್ಛವಾಗಿರುವ ಬರ್ನರ್‌ನ್ನು ಉಪಯೋಗಿಸುವುದರಿಂದ ಆಹಾರವು ವೇಗವಾಗಿ ಬೇಯುತ್ತದೆ. ಮತ್ತು ಇದರಿಂದ ಹೆಚ್ಚು ಹೊತ್ತ ಗ್ಯಾಸ್ ಅನಿಲವನ್ನು ವ್ಯಯ ಮಾಡುವ ಅಗತ್ಯ ಇರುವುದಿಲ್ಲ. ಜೊತೆಗೆ ಬರ್ನರ್‌ನ್ನು ಸುಸ್ಥಿತಿಯಲ್ಲಿಡಲು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮುಖ್ಯವಾಗಿದೆ.

ಬೇಗ ಬರ್ನರ್ ಆಫ್ ಮಾಡಿ:
ಅಡುಗೆ ಮಾಡುವಾಗ ನಿಮ್ಮ ಆಹಾರವು ಸಂಪೂರ್ಣವಾಗಿ ಬೇಯುವ ಕೆಲವು ನಿಮಿಷಗಳ ಮೊದಲು ಬರ್ನರ್‌ನ್ನು ಆಫ್ ಮಾಡಿ. ಆಗ ಬರ್ನರ್‌ನ ಉಳಿದ ಶಾಖವು ಆಹಾರವನ್ನು ಪೂರ್ಣ ಪ್ರಮಾಣದಲ್ಲಿ ಬೇಯಿಸುತ್ತದೆ. ಮತ್ತು ಇದರಿಂದ ಅನಿಲವೂ ಉಳಿತಾಯವಾಗುತ್ತದೆ.

ಮುಚ್ಚಳವನ್ನು ಇರಿಸಿಕೊಳ್ಳಿ:
ಅಡುಗೆ ಮಾಡುವಾಗ ಬಳಸುವ ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದು ತುಂಬಾ ಮುಖ್ಯವಾಗಿರುತ್ತದೆ. ಇದು ಶಾಖ ಮತ್ತು ಉಗಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಮತ್ತು ಇದು ಕಡಿಮೆ ಅನಿಲವನ್ನು ಬಳಸಿಕೊಂಡು ಆಹಾರವನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೇಯಿಸಲು ಸಹಾಯವಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಬೇಯಿಸಿ:
ಊಟವನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಬೆಯಿಸಿ ನಂತರ ರೆಫ್ರಜರೆಟರ್‌ನಲ್ಲಿ ಸಂಗ್ರಹಿಸಿಡಬಹುದು. ನಂತರದಲ್ಲಿ ಅವುಗಳ ಬಳಕೆಗಾಗಿ ಅವುಗಳನ್ನು ಮತ್ತೆ ಬಿಸಿ ಮಾಡಬಹುದು. ಆಗ ಗ್ಯಾಸ್ ಕೂಡಾ ಕಡಿಮೆ ಖರ್ಚಾಗುತ್ತದೆ.

ಸರಿಯಾದ ಬರ್ನರ್ ಬಳಸಿ:
ನೀವು ಅಡುಗೆಗೆ ಬಳಸುವ ಪಾತ್ರೆಗಳ ಗಾತ್ರಕ್ಕೆ ಹೊಂದಿಕೆಯಾಗುವ ಬರ್ನರ್‌ನ್ನು ಬಳಸಿ. ದೊಡ್ಡ ಬರ್ನರ್‌ನಲ್ಲಿ ಸಣ್ಣ ಪಾತ್ರೆಯನ್ನಿಟ್ಟು ಅಡುಗೆ ಮಾಡಿದಾಗ ಅಲ್ಲಿ ಹೆಚ್ಚು ಅನಿಲ ವ್ಯಯವಾಗುತ್ತದೆ. ಆದ್ದರಿಂದ ಸರಿಯಾದ ಗಾತ್ರವನ್ನು ಆಯ್ಕೆ ಮಾಡಿ.

ಇದನ್ನೂ ಓದಿ: Whatsapp Ban : ಇನ್ಮುಂದೆ ಈ ಫೋನ್ ಗಳಲ್ಲಿ ವರ್ಕ್ ಆಗೋದಿಲ್ಲ ವಾಟ್ಸಪ್!

Leave A Reply

Your email address will not be published.