The most expensive potato in the world: ಅಬ್ಬಾಬ್ಬಾ! ಇಲ್ಲಿ 1ಕೆಜಿ ಆಲೂಗಡ್ಡೆಗೆ 40 ರಿಂದ 50 ಸಾವಿರವಂತೆ! ಏನಿದರ ವಿಶೇಷತೆ ಗೊತ್ತಾ?

Expensive potato :ಜಗತ್ತಿನಲ್ಲಿ ಹೆಚ್ಚು ಬಳಕೆಯಾಗುವ, ಹೆಚ್ಚು ಜನಪ್ರಿಯತೆ ಗಳಿಸಿರುವ ಪ್ರಮುಖ ತರಕಾರಿ ಬೆಳೆ ಎಂದರೆ ಅದು ಆಲೂಗಡ್ಡೆ  ಎಂದು ಹೇಳಬಹುದು. ಭಾರತದಲ್ಲಂತೂ ಇದು ಮನೆ ಮನೆಯ ಆಹಾರ ಪದಾರ್ಥವಾಗಿದೆ. ಪ್ರತಿಯೊಂದು ಖಾದ್ಯಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇಷ್ಟೊಂದು ಜನಪ್ರಿಯತೆ ಗಳಿಸಿರುವ ಈ ಆಲೂ ಎಂದಿಗೂ ಅಗ್ಗದ ದರದಲ್ಲೇ ನಮ್ಮ ಕೈ ಸೇರುತ್ತದೆ. ಏನಿದ್ದರೂ 10 ರಿಂದ 40ರೂ ಒಳಗೆ ದರವನ್ನು ಹೊಂದಿರುತ್ತದೆ. ಆದರೆ ಇಲ್ಲೊಂದೆಡೆ ಆಲೂಗಡ್ಡೆಯ ರೇಟ್ ಕೇಳಿದರೆ ನೀವೇ ಹೌಹಾರುತ್ತೀರ!

ಹೌದು, ನಾವು ಹೇಳ ಹೊರಟಿರುವ ಆಲೂಗಡ್ಡೆ ದರ ಕೇಳಿದ್ರೆ ನಿಮ್ಮ ತಲೆ ತಿರುಗೋದು ಪಕ್ಕ. ಯಾಕೆಂದರೆ ಯಾರೂ ನಂಬಲಾಗದಷ್ಟು ಅಪರೂಪದ ಬೆಲೆ ಆ ಆಲೂಗಡ್ಡೆಗಿದೆ. ಫ್ರಾನ್ಸ್ ನ ಐಲ್ ಡಿ ನೊಯಿರ್ಮೌಟಿಯರ್ ದ್ವೀಪದಲ್ಲಿ ಬೆಳೆಯುವ ಲಾ ಬೊನೊಟ್ ಎಂಬ ಆಲೂಗಡ್ಡೆ (Expensive potato) ಒಂದು ಕೆಜಿಗೆ ಬರೋಬ್ಬರಿ 40,000-50,000 ರೂಪಾಯಿ! ಇನ್ನೂ ಮುಖ್ಯವಾದ ಅಂಶವೆಂದರೆ ಇದು ವರ್ಷದಲ್ಲಿ ಕೇವಲ 10 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.

ಅಂದಹಾಗೆ ಈ ಆಲೂಗೆಡ್ಡೆ ತುಂಬಾ ಅಪರೂಪವಾಗಿದ್ದು ಇದನ್ನು 50 ಚದರ ಮೀಟರ್ ಭೂಮಿಯಲ್ಲಿ ಮಾತ್ರ ಬೆಳೆಸಲಾಗುತ್ತದೆ. ಅದೂ ಕೂಡ ಅವುಗಳನ್ನು ಮರಳು ಭೂಮಿಯಲ್ಲಿ ಮಾತ್ರ ಬೆಳೆಸಲಾಗುತ್ತದೆ. ಅಲ್ಲದೆ ಕಡಲಕಳೆ ಮತ್ತು ಪಾಚಿಯನ್ನು ಗೊಬ್ಬರವನ್ನಾಗಿ ಆಲೂಗಡ್ಡೆ ಬೆಳೆಗೆ ಹಾಕಲಾಗುತ್ತದೆ. ಈ ಕಾರಣದಿಂದ ಇವುಗಳನ್ನು ವಿಶ್ವದ ಅತ್ಯಂತ ದುಬಾರಿ ಆಲೂಗಡ್ಡೆಯೆನ್ನಲಾಗುತ್ತದೆ.

ವಿಶೇಷವಾಗಿ Le Bonnotte ಆಲೂಗಡ್ಡೆಯ ರುಚಿ ಇತರ ಆಲೂಗಡ್ಡೆಗಳಿಗಿಂತ ಭಿನ್ನವಾಗಿದೆ. ಇದು ಸ್ವಲ್ಪ ಹುಳಿ, ಸ್ವಲ್ಪ ಉಪ್ಪು ರುಚಿಯನ್ನು ಹೊಂದಿರುತ್ತದೆ. ಆಲೂಗಡ್ಡೆಯನ್ನು ದುರ್ಬಲ ಮತ್ತು ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ವರ್ಷಕ್ಕೆ ಕೇವಲ ಒಂದು ವಾರದವರೆಗೆ ಪ್ರತ್ಯೇಕವಾಗಿ ಕೈಯಿಂದ ಒಂದೊಂದಾಗಿ ಕೀಳಲಾಗುತ್ತದೆ. ಈ ಆಲೂಗಡ್ಡೆಗಳ ಸಿಪ್ಪೆ ತೆಗೆಯದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಆಲೂಗಡ್ಡೆಯು ಮಣ್ಣಿನ ಎಲ್ಲಾ ಪರಿಮಳ ಮತ್ತು ಸುವಾಸನೆ ಹಾಗು ಹತ್ತಿರದ ಸಮುದ್ರದ ನೀರನ್ನು ಹೀರಿಕೊಂಡಿರುತ್ತದೆ.

ಈ ವಿಶೇಷ ಆಲೂಗಡ್ಡೆಗಳನ್ನು ಸಲಾಡ್ ಪ್ಯೂರಿ, ಸೂಪ್ ಮತ್ತು ಕ್ರೀಮ್ ತಯಾರಿಸಲು ಬಳಸಲಾಗುತ್ತದೆ. ವೈದ್ಯರ ಪ್ರಕಾರ ಬೊನೊಟ್ ಗಳನ್ನು ತೀವ್ರವಾದ ಕಾಯಿಲೆಗಳಿಂದ ರಕ್ಷಿಸಲು ಬಳಸಲಾಗುತ್ತದೆ. ಅಲ್ಲದೆ ಅವು ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯವಾಗುವುದಿಲ್ಲ. ಜನ ಅವುಗಳನ್ನು ಖರೀದಿಸಲು ಇ-ಕಾಮರ್ಸ್ ಸೈಟ್‌ಗಳನ್ನು ಸಂಪರ್ಕಿಸಬೇಕಾಗುತ್ತದೆ.

Leave A Reply

Your email address will not be published.