Sugar in Blood : ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚು- ಕಡಿಮೆ ಆಗುವ ರೀತಿ ತಿಳಿಯುವ ಬಗ್ಗೆ ಹೇಗೆ?
Sugar in blood : ನಮ್ಮ ದೇಹದ ಹೊರಗೆ ಏನಾದರೂ ಆರೋಗ್ಯ ಹೆಚ್ಚು ಕಮ್ಮಿ ಆದರೆ ನಮಗೆ ತಿಳಿಯುತ್ತದೆ. ಆದರೆ ದೇಹದ ಒಳಗೆ ಏನಾದರೂ ಆರೋಗ್ಯ ಸಮಸ್ಯೆ (health problem) ಆಗುತ್ತಿದೆ ಎಂದಾಗ ಅದು ತಿಳಿಯುದು ಬಹಳ ಕಷ್ಟದ ಮಾತು. ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಹಾಗೂ ಹೊರಗಿನ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಕೆಲವರ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿ ಹೈಶುಗರ್ (high sugar) ನಿಂದ ಬಳಲಿದರೆ, ಇನ್ನೂ ಕೆಲವರು ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ ಲೋ ಶುಗರ್ (low sugar) ಸಮಸ್ಯೆಗೆ ಒಳಗಾಗುತ್ತಾರೆ. ಇವೆರಡು ಕೂಡ ಆರೋಗ್ಯದ ಮೇಲೆ ಬಹಳ ಗಂಭೀರವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಈ ಎರಡು ಸಮಸ್ಯೆಗಳ ಲಕ್ಷಣಗಳನ್ನು ತಿಳಿದು ಅದನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದರ ಮಾಹಿತಿಯನ್ನು ಸಹ ತಿಳಿದುಕೊಳ್ಳಿ.
ಹೆಚ್ಚಾಗಿ ಮನುಷ್ಯನಿಗೆ ತನ್ನ ದೇಹದ ರಕ್ತದಲ್ಲಿ ಸಕ್ಕರೆ ಮಟ್ಟ (sugar in blood) ಕಡಿಮೆಯಾದಾಗ ಎದೆಯುರಿ, ದಣಿವು, ತಲೆನೋವು, ಹಸಿವು, ಕಿರಿಕಿರಿ, ಎಲ್ಲದಕ್ಕೂ ಕೈಕಾಲು ಅಲುಗಾಡಿಸುವುದು, ಅತಿಯಾಗಿ ಬೆವರುವುದು ಮತ್ತು ದೃಷ್ಠಿಯಲ್ಲಿ ಸಮಸ್ಯೆ, ಮಸುಕಾದ ಚರ್ಮ ಸಮಸ್ಯೆ (skin problem) ಹೆಚ್ಚಾಗಿ ಕಂಡುಬರುತ್ತದೆ. ನೀವು ಹೊಟ್ಟೆಗೆ ಏನು ಸೇರಿಸದೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ, ನೀವು ನಿಮ್ಮ ಕೆಲಸದಲ್ಲಿ ನಿರತವಾಗಿ ಬಿಟ್ಟರೆ ನೀವು ಸೇವಿಸುವ ಆಹಾರ ತಡವಾಗಿ ಅಥವಾ ಕಡಿಮೆ ಪ್ರಮಾಣದಲ್ಲಿ ಇದ್ದರೆ ಈ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತದೆ.
ಹಾಗಾದರೆ ನಮ್ಮ ದೇಹದಲ್ಲಿ ರಕ್ತವನ್ನು (blood) ಹೆಚ್ಚು ಮಾಡಿಕೊಳ್ಳಬೇಕಾದರೆ ಯಾವ ಹಣ್ಣು ಹಂಪಲನ್ನು ಸೇವಿಸಿದರೆ ಉತ್ತಮ.
ಹಾಲು(milk), ಸಕ್ಕರೆ, ಬೆಳ್ಳುಳ್ಳಿ, ಮೊಸರು ಅಥವಾ ಒಣ ಹಣ್ಣುಗಳನ್ನು ಸೇವಿಸಿದರೆ ನಮ್ಮ ದೇಹದಲ್ಲಿ ರಕ್ತದ ಮಟ್ಟ ಇನ್ನಷ್ಟು ಹೆಚ್ಚುತ್ತದೆ. ಹಾಗೆಯೇ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾದಾಗ ಬಾಯಾರಿಕೆ, ಹಸಿವು, ಅತಿಯಾದ ಮೂತ್ರ ವಿಸರ್ಜನೆ, ದಣಿವು, ತೂಕ ಇಳಿಕೆ, ಚರ್ಮದ ಸೋಂಕು, ಮಲಬದ್ಧತೆ ಅಥವಾ ಅತಿಸಾರ, ಕಿಡ್ನಿ ಸಮಸ್ಯೆ (liver problem) ಕಾಡುತ್ತದೆ. ಅತಿಯಾಗಿ ಆಹಾರ ಸೇವಿಸಿದ ಬಳಿಕ ವ್ಯಾಯಾಮ ಮಾಡುವುದು ಅಥವಾ ವಾಕಿಂಗ್ (walking) ಮಾಡದಿರುವುದರಿಂದ ಈ ಸಮಸ್ಯೆ ನಿಮ್ಮನ್ನು ಹೆಚ್ಚಾಗಿ ಕಾಡ ತೊಡಗುತ್ತದೆ.
ಹಾಗಾಗಿ ಇದೆಲ್ಲದಕ್ಕಿಂತ ನೀವು ನಿಮ್ಮ ಆರೋಗ್ಯವನ್ನು (health)ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದರೆ ಅತಿಯಾದ ನೀರನ್ನು ಸೇವನೆ ಮಾಡುವುದು ಉತ್ತಮವಾಗಿದೆ. ಹಾಗೂ ವೈದ್ಯರ(doctor) ಸಲಹೆಯನ್ನು ಪಡೆಯುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Health Tips: ವಿಶ್ವದ ಆರೋಗ್ಯಕರ ಹಣ್ಣು ಇದು…ಇದರ ಬೀಜ ತಿನ್ನೋದು ಒಳ್ಳೆಯದಲ್ಲ!