Coffee: ಮೂಡ್ ರಿಫ್ರೆಶ್ ಮಾಡೋ ಕಾಫೀಯಿಂದ ದೇಹಕ್ಕೆ ಎಷ್ಟು ಲಾಭ?
Coffee : ಬ್ಯುಸಿ ಕೆಲಸಗಳ ಒತ್ತಡದ ನಡುವೆ ಒಂಚೂರು ರಿಲೀಫ್ ಪಡೆಯಬೇಕೆಂದು ಪ್ರತಿಯೊಬ್ಬ ವ್ಯಕ್ತಿಯೂ ಬಯಸುತ್ತಾನೆ. ತನ್ನ ಸ್ಟ್ರೆಸ್ ಹೋಗಲಾಡಿಸಲು ಹೆಚ್ಚಿನ ಜನರು ಫಸ್ಟ್ ಆಯ್ಕೆ ಮಾಡಿಕೊಳ್ಳುವುದೇ ಒಂದು ಕಪ್ ಕಾಫೀ (coffee). ಹೌದು. ಅದೆಷ್ಟೋ ಜನರಿಗೆ ಕಾಫಿ ಕುಡಿಯುವುದರಿಂದ ಒತ್ತಡಗಳು ದೂರ ಆಗುತ್ತದೆ.
ಕಾಫೀ ಯಲ್ಲಿ ಕೆಫೀನ್ಅಂಶ ಇದ್ದು ಮೂಡ್ ರಿಫ್ರೆಶ್ ಮಾಡುತ್ತದೆ.ಕಾಫಿಯಲ್ಲಿ ಹಲವು ಪೋಷಕಾಂಶಗಳು ಇವೆ. ಕಾಫಿಯಲ್ಲಿ ಕೆಫೀನ್, ವಿಟಮಿನ್ ಬಿ 2 ಮೆಗ್ನೀಸಿಯಮ್, ಸಸ್ಯ ರಾಸಾಯನಿಕ ಕ್ಲೋರೊಜೆನಿಕ್ ಆಮ್ಲ, ಕ್ವಿನಿಕ್ ಆಮ್ಲ, ಪಾಲಿಫಿನಾಲ್ಗಳು, ಕೆಫೆಸ್ಟಾಲ್, ಕಹ್ವೀಲ್ ಡೈಟರ್ಪೆನ್ ಇವೆ.ಆದ್ರೆ, ಹೆಚ್ಚಿನವರ ಪ್ರಶ್ನೆ ಏನಪ್ಪ ಅಂದ್ರೆ ಕಾಫೀ ಆರೋಗ್ಯಕ್ಕೆ ಉತ್ತಮವೇ ಕೆಡುಕೆ ಎಂಬುದು.
ಆಲಸ್ಯ ಮತ್ತು ಕೆಲಸ ಮಾಡಲು ಸಾಧ್ಯವಾಗದೇ ಇರುವುದು, ಮಾನಸಿಕ ಕಿರಿಕಿರಿ ಕಡಿಮೆ ಮಾಡಿಕೊಳ್ಳಲು, ತೂಕ ನಷ್ಟಕ್ಕೆ ಕಾಫಿ ಸೇವನೆ ಸಹಕಾರಿ ಆಗಿದೆ. ಆದ್ರೆ ಇದರ ಸೇವನೆ ನಮ್ಮ ದೇಹಕ್ಕೆ ಅನುಗುಣವಾಗಿ ಇರುವುದು ಸೂಕ್ತ. ಹಾಗಿದ್ರೆ ಬನ್ನಿ ಯಾವ ಸಮಯದಲ್ಲಿ ಕಾಫೀ ಸೇವನೆ ಉತ್ತಮ ಎಂಬುದನ್ನು ತಿಳಿಯೋಣ.
ಕಾಫಿಯ ಅತಿಯಾದ ಸೇವನೆಯು ಆತಂಕ, ಚಡಪಡಿಕೆ, ನಿದ್ರಾಹೀನತೆ ಮತ್ತು ಹೆಚ್ಚಿದ ಹೃದಯ ಬಡಿತ ಸಮಸ್ಯೆ ಹೆಚ್ಚಿಸುತ್ತದೆ. ದಿನಕ್ಕೆ ಎರಡು ಕಪ್ ಕಾಫಿಯು ಆರೊಗ್ಯಕರ ಎನ್ನುತ್ತಾರೆ ತಜ್ಞರು. ಒಂದು ಕಪ್ ಕಾಫಿಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬುಗಳಿಲ್ಲ. ಇದು ಕಡಿಮೆ ಸೋಡಿಯಂ ಹೊಂದಿದೆ. ಕಪ್ಪು ಕಾಫಿಯು ಪೋಷಕಾಂಶ ಹೊಂದಿದೆ. ಇದು ಚಯಾಪಚಯ ದರ ಹೆಚ್ಚಿಸುತ್ತದೆ. ಹಾಲು ಅಥವಾ ಇತರೆ ಪದಾರ್ಥಗಳ ಜೊತೆ ಸೇರಿದರೆ ಕಡಿಮೆ ಪ್ರಯೋಜನ ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ. ಬೆಳಗಿನ ಉಪಾಹಾರದ ನಂತರ, ಮಧ್ಯಾಹ್ನ 5 ಗಂಟೆಯೊಳಗೆ ಕಾಫಿ ಕುಡಿಯುವುದು ಉತ್ತಮ.
ದಿನಕ್ಕೆ ನೀವು ಮೂರರಿಂದ ನಾಲ್ಕು ಕಪ್ ಕಾಫಿ ಸೇವನೆ ಮಾಡಿ. ಆದರೆ ಬೇಸಿಗೆಯಲ್ಲಿ ಮೂರಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯಬೇಡಿ. ಫ್ಯಾಟ್ ಬರ್ನ್ ಹಿನ್ನೆಲೆ ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕೆಫೀನ್ ಚಯಾಪಚಯ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ. ಆದರೆ ಪ್ಲಾಸ್ಮಾ ಗ್ಲೂಕೋಸ್, ಇನ್ಸುಲಿನ್ ಮತ್ತು ಕಾರ್ಬೋಹೈಡ್ರೇಟ್ ಆಕ್ಸಿಡೀಕರಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲವೆಂದು ಸಂಶೋಧನೆ ಹೇಳಿದೆ.
ಇದು ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಚಯಾಪಚಯ ದರ ಹೆಚ್ಚಿಸುತ್ತದೆ. ಕೆಫೀನ್ ಚಯಾಪಚಯ ದರವನ್ನು ಹನ್ನೊಂದು ಪ್ರತಿಶತ ಹೆಚ್ಚಿಸುತ್ತದೆ. ಕೆಫೀನ್ ಸೇವನೆಯ ನಂತರ ಪರೀಕ್ಷೆ ನಡೆಸಿದ ವೇಳೆ ಚಯಾಪಚಯ ದರದಲ್ಲಿ ಸುಧಾರಣೆಯಾಗುತ್ತದೆ. ಕಾಫಿಗೆ ಸಕ್ಕರೆಯ ಬದಲು ದಾಲ್ಚಿನ್ನಿ ಬಳಸಿ ಕುಡಿಯುವುದರಿಂದ ಚಯಾಪಚಯ ವೇಗಗೊಳಿಸುತ್ತದೆ.
ಇದನ್ನೂ ಓದಿ: Sugar in Blood : ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚು- ಕಡಿಮೆ ಆಗುವ ರೀತಿ ತಿಳಿಯುವ ಬಗ್ಗೆ ಹೇಗೆ?