KYC Verification for SIM : ಶೀಘ್ರದಲ್ಲೇ ಸಿಮ್ ಕಾರ್ಡ್ ಗಳಿಗೆ ಕೆವೈಸಿ ಪರಿಶೀಲನೆ!

KYC Verification for SIM : ಇತ್ತೀಚೆಗೆ ನಕಲಿ ಸಿಮ್ ಕಾರ್ಡ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ವಂಚನೆಯನ್ನು ತಡೆಯಲು ದೂರಸಂಪರ್ಕ ಇಲಾಖೆ (DOT) ನೋ ಯುವರ್ – ಕಸ್ಟಮರ್ (KYC Verification for SIM) ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ. ಮಾಧ್ಯಮದಲ್ಲಿ ನೀಡಿರುವ ಪ್ರಕಾರ ಹೊಸ ನಿಯಮಗಳು ಒಂದೇ ಐಡಿಯಲ್ಲಿ ನೀಡಲಾಗುವ ಸಿಮ್ ಕಾರ್ಡ್ (SIM card) ಗಳ ಸಂಖ್ಯೆಯನ್ನು ಒಂಬತ್ತರಿಂದ ಐದಕ್ಕೆ ಇಳಿಸಬಹುದು ಮತ್ತು ಕೆವೈಸಿ ಪ್ರಕ್ರಿಯೆಯ ಸಂಪೂರ್ಣ ಡಿಜಿಟಲಿಕರಣವನ್ನು ಪೂರ್ಣಗೊಳಿಸಬಹುದು.

ಸರ್ಕಾರಿ ಅಧಿಕಾರಿಯೊಬ್ಬರು ನಕಲಿ ಐಡಿಗಳ ಸಮಸ್ಯೆಯನ್ನು ನಿಭಾಯಿಸಲು ಡಿಜಿಟಲ್ ಡಾಕ್ಯುಮೆಂಟ್ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಮೂಲಕ ಕೆವೈಸಿ (KYIC) ಕಾರ್ಯವಿಧಾನವನ್ನು ಕಂಡುಹಿಡಿಯಲು ಚರ್ಚೆ ನಡೆಸುತ್ತಿದ್ದೆ ಎಂದು ಮಾದ್ಯಮಕ್ಕೆ ತಿಳಿಸಿದರು. ಮೊಬೈಲ್ ಸಂಪರ್ಕಗಳನ್ನು ನೀಡುವ ಪ್ರಕ್ರಿಯೆಯಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಆಧಾರಿತ ಇ- ಕೆವೈಸಿ (E- KYIC) ಸೇವೆಯನ್ನು ಬಳಸಲಾಗುತ್ತಿದೆ ಮತ್ತು ಇದರಲ್ಲಿ ಯುಐಡಿಎಐ (UIDAI) ನಿಂದ ಪಡೆದ ಛಾಯಾಚಿತ್ರದೊಂದಿಗೆ ಗ್ರಾಹಕರ ಜನಸಂಖ್ಯಾ ವಿವರಗಳನ್ನು ತಮ್ಮ ಸಿಸ್ಟಮ್ ನಲ್ಲಿ ರಚಿಸಿರುವ ಗ್ರಾಹಕ ಅರ್ಜಿ ನಮೂನೆಯಲ್ಲಿ ಸಿಎಎಫ್ (CAF) ಸೆರೆಹಿಡಿಯುತ್ತಾರೆ.

ಸಿಎಎಫ್ (CAF) ನಲ್ಲಿ ಸೆರೆಹಿಡಿಯಲಾದ ಗ್ರಾಹಕರ ಹೆಸರು ಯುಐಡಿಎಐ ನಿಂದ ಪಡೆದಂತೆ ಮಾತ್ರ ಪಿಒಎಸ್ (POS) ಏಜೆಂಟ್ ಗೆ ತೋರಿಸುತ್ತದೆ ಮತ್ತು ಪಿಒಎಸ್ (POS) ಸಾಧನದಲ್ಲಿ ಡೇಟಾವನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ಒದಗಿಸಿದ ಮಾಹಿತಿ ಯ ಆಧಾರದ ಮೇಲೆ ಸಿಎಎಫ್ (CAF) ನಲ್ಲಿ ಗ್ರಾಹಕರ ಹೆಸರಿನಲ್ಲಿ ಹೊಂದಿರುವ ಮೊಬೈಲ್ ಸಂಪರ್ಕದ ಸಂಖ್ಯೆ ಹಾಗೂ ಟ್ಯಾರಿಫ್ ಯೋಜನೆ ಇತ್ಯಾದಿ ಅಂತಹ ಇತರ ವಿವರಗಳನ್ನು ಅಧಿಕೃತ ಪಿಒಎಸ್ (POS) ಏಜೆಂಟ್ ನಮೂದಿಸಬೇಕು.

Leave A Reply

Your email address will not be published.