Excitel offer :ಎಕ್ಸಿಟೆಲ್‌ ಕಂಪೆನಿ ಬಿಗ್ ಆಫರ್ : ಕೇವಲ 999ರೂ. ಬೆಲೆಯ ಮಾಸಿಕ ಅವಧಿಯ ವೈಫೈ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಜೊತೆಗೆ ಖರೀದಿಸಿ ಸ್ಮಾರ್ಟ್‌ಟಿವಿ!

Excitel offer : ಗೃಹಪಯೋಗಿ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ದಿನ ಬಳಕೆಯ ವಸ್ತುಗಳ ಮೇಲೆ ಉತ್ತಮವಾದ ಆಫರ್ ಗಳನ್ನು ನೀಡುವುದರ ಮೂಲಕ ತನ್ನತ್ತ ಸೆಳೆಯುತ್ತಲೇ ಇದೆ. ಅದರಂತೆ ಇದೀಗ ಎಕ್ಸಿಟೆಲ್‌ ಕಂಪೆನಿ ಬಿಗ್ ಆಫರ್ (Excitel offer) ಅನ್ನು ಗ್ರಾಹಕರಿಗೆ ಘೋಷಿಸಿದ್ದು, ವೈಫೈ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಜೊತೆಗೆ ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದು.

 

ಹೌದು. ಎಕ್ಸಿಟೆಲ್‌ ಕಂಪೆನಿಯ 999ರೂ. ಬೆಲೆಯ ಮಾಸಿಕ ಅವಧಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್ ಖರೀದಿಸಿದರೆ ಹೊಸ ಸ್ಮಾರ್ಟ್‌ಟಿವಿ ಸಿಗಲಿದೆ. 32-ಇಂಚಿನ LED ಟಿವಿಯನ್ನು ನೀವು 300Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ನೊಂದಿಗೆ ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್‌ ತಿಂಗಳಿಗೆ 999 ರೂ. ಬೆಲೆಯನ್ನು ಹೊಂದಿದೆ. ಅಂದರೆ ಈ ಪ್ಲಾನ್‌ನಲ್ಲಿ ನಿಮಗೆ 300 Mbps ವರೆಗಿನ ಹೈ-ಸ್ಪೀಡ್ ಇಂಟರ್‌ನೆಟ್ ಮಾತ್ರವಲ್ಲದೆ, 32 ಇಂಚಿನ ಫ್ರೇಮ್‌ಲೆಸ್ ಸ್ಮಾರ್ಟ್ LED ಟಿವಿಯನ್ನು ಸಹ ನೀಡಲಿದೆ. ಜೊತೆಗೆ 6ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಮತ್ತು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ ಪ್ರಯೋಜನ ದೊರೆಯಲಿದೆ.

ಬಳಕೆದಾರರು ಸ್ಮಾರ್ಟ್ ಟಿವಿ ಮತ್ತು OTT ಅಪ್ಲಿಕೇಶನ್‌ಗಳು ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ವಾರ್ಷಿಕ ಚಂದಾದಾರಿಕೆಯನ್ನು ಪಡದುಕೊಳ್ಳಬೇಕಾಗುತ್ತದೆ. ಈ ಪ್ಲಾನ್‌ ತಿಂಗಳಿಗೆ 999 ರೂ. ಮತ್ತು ವಾರ್ಷಿಕವಾಗಿ 11,988 ರೂ. ಬೆಲೆ ಹೊಂದಿದೆ. ಆದರೆ, ಈ ಪ್ಲಾನ್‌ ಕೇವಲ ದೆಹಲಿಯಲ್ಲಿ ಮಾತ್ರ ಲಭ್ಯವಾಗಲಿದೆ. ಐಪಿಎಲ್‌ ಕ್ರಿಕೆಟ್‌ ಪ್ರಿಯರನ್ನು ಗುರಿಯಾಗಿಸಿಕೊಂಡು ಈ ಪ್ಲಾನ್‌ ಅನ್ನು ಪರಿಚಯಿಸಲಾಗಿದೆ ಎಂದು ವರದಿಯಾಗಿದೆ. ಉಚಿತ ಸ್ಮಾರ್ಟ್ ಟಿವಿ ಮತ್ತು ಲೈವ್ ಚಾನೆಲ್‌ಗಳೊಂದಿಗೆ, ಈ ಪ್ಲಾನ್‌ ಮೂಲಕ ಐಪಿಎಲ್‌ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸುವುದಕ್ಕೆ ಅವಕಾಶ ಸಿಗಲಿದೆ

ಈ ಫ್ರೇಮ್‌ಲೆಸ್ ಸ್ಮಾರ್ಟ್‌ಟಿವಿ LED ಡಿಸ್‌ಪ್ಲೇಯನ್ನು ಹೊಂದಿದೆ. ಇದು 512MB RAM ಮತ್ತು 4GB ಆನ್‌ಬೋರ್ಡ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ 20W ಸ್ಪೀಕರ್‌ಗಳನ್ನು ಕೂಡ ಹೊಂದಿದೆ. ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ TV OS 9.0ನಲ್ಲಿ ಕಾರ್ಯನಿರ್ವಹಿಸಲಿದೆ. ಇದು HDMI, USB, AV ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಎಕ್ಸಿಟೆಲ್‌ ಕಂಪೆನಿ ಈ ಸ್ಮಾರ್ಟ್ ಟಿವಿಗೆ 1 ವರ್ಷದ ಆನ್-ಸೈಟ್ ವಾರಂಟಿಯನ್ನು ಸಹ ನೀಡುತ್ತಿದೆ. ಇನ್ನು ಈ ಸ್ಮಾರ್ಟ್ ಟಿವಿಯು 6 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಅಲ್ಟ್‌ ಬಾಲಾಜಿ, ಹಂಗಾಮಾ ಪ್ಲೇ, ಹಂಗಾಮಾ ಮ್ಯೂಸಿಕ್‌, ಶೆಮಾರೋ, ಎಪಿಕ್‌ ಆನ್‌ ಮತ್ತು ಪ್ಲೇಬಾಕ್ಸ್‌ ಟಿವಿ ಸೇರಿವೆ.

ಇದನ್ನೂ ಓದಿ: Standup India scheme: ಏಳು ವರ್ಷಗಳನ್ನು ಪೂರೈಸಿದ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆ : SC-ST ಮಹಿಳೆಯರಿಗೆ ರೂ.10 ಲಕ್ಷದಿಂದ 1 ಕೋಟಿವರೆಗೆ ಸಾಲ ಸೌಲಭ್ಯ!

Leave A Reply

Your email address will not be published.