LPG Cylinder : ಗ್ಯಾಸ್ ಸಿಲಿಂಡರ್ ಬುಕ್ ಈ ರೀತಿ ಮಾಡಿ 200 ರೂಪಾಯಿ ಪಡೆಯಿರಿ!

LPG Cylinder : ಗ್ಯಾಸ್ ಸಿಲಿಂಡರ್ (LPG Cylinder)ಬೆಲೆ ದಿನೇ ದಿನೇ ಏರಿಕೆ ಆಗುತ್ತಿದೆ. ಆದರೂ ಗ್ಯಾಸ್ ಬಳಕೆ ಅನಿವಾರ್ಯ ಆಗಿದೆ. ಸದ್ಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಮೊದಲು ಚಿಂತೆ ಆಗೋದು ಸಿಲಿಂಡರ್ ಬೆಲೆ ಬಗ್ಗೆ. ಆದರೆ ನೀವು ಗ್ಯಾಸ್ ಸಿಲಿಂಡರ್ ಖಾಲಿ ಆದಾಗ ಈ ರೀತಿ ಬುಕ್ ಮಾಡಿದಲ್ಲಿ 200 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ.

ಗ್ಯಾಸ್ ಸಿಲಿಂಡರ್ ಬುಕ್ ಮಾಡಿ 200 ರೂಪಾಯಿ ರಿಯಾಯಿತಿ ಈ ರೀತಿ ಪಡೆಯಬಹುದು :
ನೀವು ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ರೂ. 200 ವರೆಗೆ ರಿಯಾಯಿತಿ ಪಡೆಯಬಹುದು.

ಮೊದಲು ಫ್ಲಿಪ್‌ಕಾರ್ಟ್‌ ಆಪ್​ಗೆ ಹೋಗಿ ಸೂಪರ್ ಕಾಯಿನ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸೂಪರ್ ಕಾಯಿನ್ ಪೇ ಎಂಬ ಆಯ್ಕೆ ಇದೆ. ಅದನ್ನು ಆಯ್ಕೆ ಮಾಡಬೇಕು. ನಂತರ ಈಗ ನೀವು ವಿವಿಧ ಆಯ್ಕೆಗಳನ್ನು ಹೊಂದಿರುತ್ತದೆ.

LPG ಬುಕಿಂಗ್ ಆಯ್ಕೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನೀವು ಗ್ಯಾಸ್ ಕಂಪನಿ ಆಯ್ಕೆ ಮಾಡಬೇಕು. ಗ್ಯಾಸ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಮೇಕ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ.ಇಲ್ಲಿ ನಿಮಗೆ ಸಿಲಿಂಡರ್ ಬೆಲೆ ಎಷ್ಟು ಎಂದು ಕಾಣಿಸುತ್ತದೆ. ನಂತರ ಪಾವತಿ ಆಯ್ಕೆ ನಿಮ್ಮ ಮುಂದೆ ಬರುತ್ತದೆ. ಈಗ ನಿಮಗೆ ಎಷ್ಟು ರಿಯಾಯಿತಿ ಸಿಗುತ್ತೆ ಅನ್ನೋದು ಕಾಣುತ್ತದೆ.

ನಂತರ ಮುಂದುವರೆಯಲು ಕ್ಲಿಕ್ ಮಾಡಿ. ಮುಂದೆ ನೀವು ಎಷ್ಟು ಸೂಪರ್‌ಕಾಯಿನ್‌ಗಳನ್ನು ಹೊಂದಿದ್ದೀರಿ? ನೀವು ಎಷ್ಟು ರಿಯಾಯಿತಿ ಪಡೆದಿದ್ದೀರಿ? ಎಂಬುವುದು ತೋರಿಸುತ್ತದೆ. ಉದಾಹರಣೆಗೆ ನೀವು 700 ಸೂಪರ್ ಕಾಯಿನ್ ಹೊಂದಿದ್ದರೆ ನಿಮಗೆ 200 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ.

ಪ್ರಸ್ತುತ ಸಿಲಿಂಡರ್ ಬೆಲೆ 1150 ರೂಪಾಯಿ ಆಗಿದೆ. ನೀವು 200 ರೂಪಾಯಿ ರಿಯಾಯಿತಿ ಪಡೆದುಕೊಂಡರೆ ನೀವು ಕೇವಲ 950 ರೂಪಾಯಿಯಲ್ಲಿ ಸಿಲಂಡರ್ ಬುಕ್ ಮಾಡಬಹುದು. ನಿಮ್ಮ ಬಳಿ ಕಡಿಮೆ ಸೂಪರ್ ನಾಣ್ಯಗಳಿದ್ದರೆ ಕಡಿಮೆ ಡಿಸ್ಕೌಂಟ್ ಬರುತ್ತದೆ. ಫ್ಲಿಪ್​ಕಾರ್ಟ್​ನಲ್ಲಿ ಶಾಪಿಂಗ್ ಮಾಡಿದಾಗ ನಿಮಗೆ ಸೂಪರ್ ಕಾಯಿನ್​ಗಳು ಲಭ್ಯವಾಗುತ್ತವೆ.

ಒಟ್ಟಿನಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಶಾಪಿಂಗ್ ಮಾಡುವ ಮೂಲಕ ನೀವು ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.

Leave A Reply

Your email address will not be published.