Optical Illusion : ಈ ಚಿತ್ರದಲ್ಲಿರುವ ಗೂಬೆಯನ್ನು ಗುರುತಿಸಲು ನಿಮ್ಮ ಬಳಿ ಇದೆ ಕೇವಲ ಹತ್ತು ಸೆಕೆಂಡ್‌!

Optical Illusion of Owl : ಈ ಚಿತ್ರದಲ್ಲಿಇರುವ (Owl photo) ಗೂಬೆಯನ್ನು ಹುಡುಕುವುದು ನಮ್ಮ ಕಣ್ಣುಗಳಿಗೆ ಸವಾಲಿನ ಕೆಲಸ.  ಈ ರೀತಿಯ ಸವಾಲಿನ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ  ಹರಿದಾಡುತ್ತಲೇ ಇರುತ್ತವೆ. ಈ ಚಿತ್ರದಲ್ಲಿ ಇರುವ  ಪ್ರಾಣಿ- ಪಕ್ಷಿಗಳನ್ನು ಅಥವಾ ವಸ್ತುಗಳನ್ನು ಪತ್ತೆ ಹಚ್ಚಿ ಎಂಬ ಅನೇಕ ಪ್ರಶ್ನೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತಲೇ ಇರುತ್ತದೆ. ಇವು ನಿಜಕ್ಕೂ ನೆಟ್ಟಿಗರ ತಲೆಗೆ ಹುಳ ಬಿಡುತ್ತವೆ.

ಈ ರೀತಿಯದ್ದೇ ಮತ್ತೊಂದು ಫೋಟೊ ದ ಸವಾಲು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮಾನವನ ಮೆದುಳು ಹೇಗೆ ಚಿತ್ರದಲ್ಲಿರುವ ವಿಷಯವನ್ನು ಹೇಗೆ  ಗುರುತಿಸುತ್ತದೆ ಎಂಬುವುದು ಇಲ್ಲಿನ ಸವಾಲು. ಆದರೆ ಕೆಲವೊಮ್ಮೆ ನಾವು ವೀಕ್ಷಿಸುವುದು ಮತ್ತು ಗ್ರಹಿಸಿವುದು ವಿಭಿನ್ನವಾಗಿರುತ್ತದೆ. ಇದನ್ನೇ  ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತಾರೆ.

ಈ ದೃಷ್ಟಿ ಭ್ರಮೆ ಪರೀಕ್ಷೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಈ ಸವಾಲನ್ನು ಹಲವಾರು ಜನರು ಸ್ವೀಕರಿಸಿ ತಮ್ಮ ಮೆದುಳನ್ನು ಚುರುಕುಗೊಳಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟು ಮಾತ್ರವಲ್ಲದೇ, ತಮ್ಮ ಸ್ನೇಹಿತರಿಗೂ ಕಳುಹಿಸಿ ಅವರ ಬುದ್ಧಿವಂತಿಕೆಯನ್ನು ಸಾಬೀತು ಪಡಿಸುವ ಮಾರ್ಗ ಇದಾಗಿದೆ. ಇದು ವೀಕ್ಷಿಸುವ ಕೌಶಲ್ಯ, ಮತ್ತು ಏಕಾಗ್ರತೆಯನ್ನು ಸುಧಾರಿಸುವ ಪ್ರಯೋಜನಕಾರಿ ವಿಷಯವಾಗಿದೆ.

ನೀವು ಕೂಡ ನಿಮ್ಮ ಏಕಾಗ್ರತೆ ಮಟ್ಟವನ್ನು ಪರೀಕ್ಷಿಸ ಬೇಕಾ? ಹಾಗಾದರೆ ಈ ಸವಾಲನ್ನು ಸ್ವೀಕರಿಸಿ ನೋಡಿ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಎಳೆಗಳಿಲ್ಲದೆ ಒಣಗಿರುವ ಮರದಲ್ಲಿ ಗೂಬೆಯೊಂದು ಅಡಗಿದೆ. ಆ ಗೂಬೆಯನ್ನು ಪತ್ತೆ ಹಚ್ಚುವುದು ಸುಲಭದ ಮಾತಲ್ಲ(Optical Illusion of Owl). ಗೂಬೆ ಹಾಗೂ ಮರವು ಒಂದೇ ರೀತಿ ಇದೆ. ಅದರಲ್ಲಿ ಗೂಬೆ ಯಾವುದು? ಮರ ಯಾವುದು? ಎಂದು ತಿಳಿಯುವುದಿಲ್ಲ. ಅದರಲ್ಲಿಯೂ ನೀವು ಕೇವಲ 10 ಸೆಕೆಂಡ್ ನಲ್ಲಿ ಇದನ್ನು ಪತ್ತೆ ಹಚ್ಚಬೇಕಾಗುತ್ತದೆ.  10 ಸೆಕೆಂಡ್ ನ ಒಳಗಾಗಿ ನೀವು ಅದನ್ನು ಪತ್ತೆ ಹಚ್ಚಿದರೆ ನಿಮ್ಮ ಕಣ್ಣಿನ  ಸಾಮರ್ಥ್ಯಕ್ಕೆ ಮತ್ತು ಏಕಾಗ್ರತೆಗೆ ನೀವೇ ಒಂದು ಮೆಚ್ಚುಗೆ ಕೊಟ್ಟುಬಿಡಿ.

ನೀವು ಗೂಬೆಯನ್ನು ಪತ್ತೆ ಮಾಡಿದ್ರಾ? ನಿಮ್ಮ ಪತ್ತೆ ಸರಿಯಾಗಿ ಇದೆಯೇ ನೋಡಿ

Leave A Reply

Your email address will not be published.