Marraige Invitation: ಕೊರಗ ಭಾಷೆಯ ಅಪರೂಪದ ಆಮಂತ್ರಣ ಪತ್ರಿಕೆ!

Share the Article

Marriage Invitation: ಕರಾವಳಿಯ ಆಡು ಭಾಷೆ ತುಳು(Tulu). ಕರಾವಳಿ ಭಾಗದಲ್ಲಿ ತುಳು ಗೊತ್ತಿಲ್ಲದೇ ಇರುವವರೇ ವಿರಳ. ಈ ನಡುವೆ ತುಳುವಿಗೆ ಭಾರತದ ಸಂವಿಧಾನದ(Indian Constitution) ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ತುಳುನಾಡಿನ ಜನರು ಸರಕಾರದ ಮುಂದಿಡುತ್ತ ಬಂದಿದ್ದಾರೆ. ತುಳು ಹಳೆ ತಲೆಮಾರಿನ ಪ್ರೀತಿಯ ಭಾಷೆಯಾಗಿ ಪ್ರಚಲಿತದಲ್ಲಿದ್ದು, ಎಲ್ಲಿಕ್ಕಿಂತ ಹೆಚ್ಚಾಗಿ ತುಳುವರು ಎಲ್ಲೇ ಹೋದರೂ ತಮ್ಮ ಮಾತೃ ಭಾಷೆಯನ್ನು ಮರೆಯುವುದಿಲ್ಲ ಎಂಬುದು ವಿಶೇಷ.

ಇದೀಗ, ಅಳಿವಿನಂಚಿನಲ್ಲಿರುವ ತುಳುನಾಡಿನ ಕೊರಗ ಭಾಷೆಯಲ್ಲಿ ತಮ್ಮ ಮಗನ ಮದುವೆಯ(Marriage Invitation) ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಈ ಪತ್ರಿಕೆಯನ್ನು ನೆಂಟರಿಷ್ಟರಿಗೆ ಹಂಚುವ ಮುಖಾಂತರ ರಮೇಶ್‌ ಮಂಚಕಲ್‌ ಅವರು ತಮ್ಮ ಜನಾಂಗದ ಹಾಗೂ ತುಳು ಭಾಷೆಯ ಮೇಲಿನ ಒಲವನ್ನು ವ್ಯಕ್ತ ಪಡಿಸಿದ್ದಾರೆ.

ಮೂಲತಃ ಶಿರ್ವಕೋಡು ಪಂಜಿಮಾರಿನವರಾದ ರಮೇಶ್‌ ಅವರು ವಾಮಂಜೂರಿನ ನಿವಾಸಿಯಾಗಿದ್ದು, ಏಪ್ರಿಲ್ .2ರಂದು ಪುತ್ರ ಲೇಖರಾಜ್‌ ಗೆ ಕೋಡಿಕಲ್‌ ನ ವೇದಾವತಿಯೊಂದಿಗೆ ಮಂಗಳೂರು ಉರ್ವಸ್ಟೋರ್‌ ನ ಡಾ|ಬಿ.ಆರ್‌. ಆಂಬೇಡ್ಕರ್‌ ಭವನದಲ್ಲಿ ನಡೆಯುವ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲಿ ಮುದ್ರಿಸಿದ್ದಾರೆ. ಆ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ. ಅಳಿವಿನಂಚಿನಲ್ಲಿರುವ ಭಾಷೆಯನ್ನು ಉಳಿಸುವ ಸಲುವಾಗಿ ಇದೊಂದು ಪ್ರಾಮಾಣಿಕ ಪ್ರಯತ್ನವಾಗಿ ಜನ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

Leave A Reply

Your email address will not be published.