Anti-Toll Gate Committee :ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಟೋಲ್ ಹೆಚ್ಚಳ; ಬಿಜೆಪಿಯನ್ನು ಸೋಲಿಸುವಂತೆ ಟೋಲ್ ಗೇಟ್ ವಿರೋಧಿ ಸಮಿತಿ ಮನವಿ

Anti-Toll Gate Committee :ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಬಿಜೆಪಿಯನ್ನು ಸೋಲಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಮತದಾರರಿಗೆ ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿಯು (Anti-Toll Gate Committee) ಮನವಿ ಮಾಡಿದೆ.

ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ಟೋಲ್‌ ಗೇಟ್‌ ವಿರುದ್ಧದ ಯಶಸ್ವಿ ಆಂದೋಲನದ ನೇತೃತ್ವ ವಹಿಸಿದ್ದ ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿಯು ಈ ಕರೆ ನೀಡಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೆದ್ದಾರಿ ಟೋಲ್ ಶುಲ್ಕವನ್ನು ಶೇ 25ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಿತಿಯ ಸಂಚಾಲಕರಾಗಿರುವ ಮುನೀರ್ ಕಾಟಿಪಳ್ಳ ತೀವ್ರವಾಗಿ ಖಂಡಿಸಿದ್ದಾರೆ.

ನಮ್ಮಲ್ಲಿ ಈಗಾಗಲೇ ಬೆಲೆ ಏರಿಕೆ ಮತ್ತು ಹೆಚ್ಚಿದ ಜೀವನ ವೆಚ್ಚದಿಂದ ಜನ ಭಾರೀ ಕಂಗೆಟ್ಟಿದ್ದಾರೆ. ನಮ್ಮ ಜನರಿಗೆ ಟೋಲ್ ಶುಲ್ಕ ಹೆಚ್ಚಳವು ಭಾರೀ ಹೊರೆಯಾಗಿ ಕಾಡುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಲ್ಕು ಟೋಲ್ ಪ್ಲಾಜಾಗಳಲ್ಲಿ ಇದೀಗ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನಸಾಮಾನ್ಯರು ಮನಸ್ಸು ಮಾಡಬೇಕು. ಜನರು ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಮತ್ತು ಕಾರ್ಪೊರೇಟ್‌ ಜನರಿಗೆ ಲಾಭ ಮಾಡಿಕೊಡದಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಒತ್ತಾಯಿಸಬೇಕು ಎಂದರು.
ಅವಿಭಾಜಿತ ಜಿಲ್ಲೆಯಲ್ಲಿ ಎಲ್ಲೆಲ್ಲಿ ಇದೆ ಟೋಲ್ ?
ಉಡುಪಿ ಜಿಲ್ಲೆಯು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಎರಡು ಟೋಲ್ ಗಳನ್ನು ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ಗಡಿಗೆ ಹೊಂದಿಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿ ತಲಪಾಡಿ ಮತ್ತು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75 ರಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ಎರಡು ಟೋಲ್ ಗೇಟ್‌ಗಳನ್ನು ಹೊಂದಿದೆ. ಇಲ್ಲಿನ ಕಗಳು ಒಂದರಿಂದ 25 ಪರ್ಸೆಂಟ್ ಅಧಿಕವಾಗಿದೆ ಎನ್ನುವುದು ಆರೋಪ.

Leave A Reply

Your email address will not be published.