Vogue’s oldest ever-cover model :ಪ್ರತಿಷ್ಠಿತ ಪತ್ರಿಕೆಯಲ್ಲಿ ಕಾಣಿಸಿಕೊಂಡ 106 ವರ್ಷದ ಶತಾಯುಷಿ ಅಜ್ಜಿ, ಕಾರಣ ಆಕೆಯ ಟ್ಯಾಟೂ !

Vogue’s oldest ever-cover model : ಪ್ರತಿಷ್ಠಿತ ಪತ್ರಿಕೆಯಾದ “ವೋಗ್‌’ ನಿಯತಕಾಲಿಕೆಯಲ್ಲಿ ಜಾಗತಿಕ ಗಣ್ಯರು, ಸೆಲೆಬ್ರಿಟಿಗಳು ಮುಖಪುಟದಲ್ಲಿ ಮಿಂಚುವುದನ್ನು ನೋಡಿರುತ್ತೀರಿ. ಆದರೆ, ಈ ಬಾರಿ ವೋಗ್‌ ಪತ್ರಿಕೆಯಲ್ಲಿ ಮಿಂಚಿದ್ದು ಓರ್ವ.ಅಜ್ಜಿ. ತನ್ನ ಏಪ್ರಿಲ್‌ ಆವೃತ್ತಿಯಲ್ಲಿ 106 ವಯಸ್ಸಿನ ಪಿಲಿಪೈನ್ ನ ಸಾಂಪ್ರದಾಯಿಕ ಟ್ಯಾಟೂ ಕಲಾವಿದೆ ಅಪೋ ವ್ಹಾಂಗ್‌-ಆಡ್‌ ಅವರನ್ನು “ಕವರ್‌ ಸ್ಟಾರ್‌’ ಆಗಿ ಪ್ರಸ್ತುತಪಡಿಸಿದೆ ವೋಗ್ (Vogue’s oldest ever-cover model)!

ಈಕೆ ಈ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಫಿಲಿಪೈನ್ ನ ಬಸ್ಕಲಾನ್‌ನ ಪರ್ವತಪ್ರದೇಶದ ಗ್ರಾಮದಲ್ಲಿ ಬದುಕುತ್ತಿರುವ ಅಪೋ ಅವರು ಅತಿ ಹಿರಿಯ ಮಾತ್ರವಲ್ಲ, ಕೊನೆಯ “ಮಂಬಾಬಟೋಕ್‌’ (ಸಾಂಪ್ರದಾಯಿಕ ಕಳಿಂಗ ಟ್ಯಾಟೂ ಕಲಾವಿದೆ) ಕೂಡ ಹೌದು.

ಆಕೆ ಬದುಕುಳಿದ ಏಕೈಕ ಕಳಿಂಗ ಟ್ಯಾಟೂ ಕಲಾವಿದೆ. ಆಕೆಯ ಕೈಯಲ್ಲಿ ಚಿತ್ರ ವಿನ್ಯಾಸದ ಟ್ಯಾಟುವನ್ನು ಹಾಕಿಕೊಂಡು ಅಂತರಾಷ್ಟ್ರೀಯ ಮಟ್ಟದಿಂದಲೂ ಜನರು ಬರುತ್ತಿದ್ದಾರೆ. ಈ ಹಿಂದೆ ಟ್ಯಾಟುವನ್ನು ಸೈನಿಕರಿಗೆ ಹಾಕಲಾಗುತ್ತಿತ್ತು. ಅಳಿವಿಂಚಿನಲ್ಲಿರುವ ಈ ಕಲೆಯನ್ನು ರಕ್ಷಿಸುವ ಕೆಲಸವನ್ನು ಆಕೆ ಮಾಡುತ್ತಿದ್ದಾಳೆ. ಈಗ ಆಕೆ ಹಲವರಿಗೆ ಟ್ರೈನಿಂಗ್ ನೀಡಿ ಈ ಟ್ಯಾಟೂವನ್ನು ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

Leave A Reply

Your email address will not be published.