ದ.ಕ : ವಿಧಾನಸಭಾ ಚುನಾವಣೆ ದಾಖಲೆ ಬರೆದ ಶಕುಂತಳಾ ಶೆಟ್ಟಿ

Shakuntala Shetty : ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಏರ ತೊಡಗಿದೆ.ವಿವಿಧ ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಇನ್ನಿಲ್ಲದ ತಯಾರಿ ನಡೆಸುತ್ತಿದ್ದಾರೆ.

ಪ್ರತಿ ಚುನಾವಣೆಯಲ್ಲೂ ಒಂದಲ್ಲೊಂದು ದಾಖಲೆ ಸೃಷ್ಟಿಯಾಗುತ್ತಲೇ ಇದೆ.ಪುತ್ತೂರಿನಲ್ಲಿ ಈ ಹಿಂದೆ ಬಿಜೆಪಿ ,ಕಾಂಗ್ರೆಸ್ ನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದ ಶಕುಂತಲಾ ಶೆಟ್ಟಿ (Shakuntala Shetty) ಅವರು ಈ ಕಾರಣದಿಂದ ದಾಖಲೆ ಬರೆದಿದ್ದಾರೆ.

ಅದು ದ.ಕ. ಜಿಲ್ಲೆಯಲ್ಲಿ ಈವರೆಗೆ ನಡೆದ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗರಿಷ್ಠ ಮತಗಳನ್ನು ಪಡೆದ ದಾಖಲೆ.

ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರಿಗೆ 2008ರಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯು ಟಿಕೆಟ್ ನಿರಾಕರಿಸಿದಾಗ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಈ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿ ಅವರು 25,171 ಮತಗಳನ್ನು ಪಡೆದಿದ್ದರು.
ಆ ಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್ ಅವರು 46,605, ಕಾಂಗ್ರೆಸ್‌ನ ಬೊಂಡಾಲ ಜಗನ್ನಾಥ ಶೆಟ್ಟಿ ಅವರು 45,180 ಮತಗಳನ್ನು ಗಳಿಸಿದ್ದರು.ಮಲ್ಲಿಕಾ ಪ್ರಸಾದ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.ಬೊಂಡಾಲ ಜಗನ್ನಾಥ ಶೆಟ್ಟಿ ಅವರು ಅಪಘಾತದಲ್ಲಿ ಮೃತಪಟ್ಟರು.

ಬಳಿಕ 2013ರ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಬಿಜೆಪಿಯ ಸಂಜೀವ ಮಠಂದೂರು ವಿರುದ್ಧ ಸ್ಪರ್ಧಿಸಿ ಜಯಗಳಿಸಿದ್ದರು.2018ರಲ್ಲಿ ಬಿಜೆಪಿಯ ಸಂಜೀವ ಮಠಂದೂರು ಅವರು ಕಾಂಗ್ರೆಸ್‌ನ ಶಕುಂತಲಾ ಶೆಟ್ಟಿ ವಿರುದ್ಧ ಜಯಗಳಿಸಿ ಶಾಸಕರಾಗಿ ಆಯ್ಕೆಯಾದರು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದಲ್ಲೂ ಅಭ್ಯರ್ಥಿ ಅಂತಿಮ ಆಯ್ಕೆಯಾಗಿಲ್ಲ.

Leave A Reply

Your email address will not be published.