Indian Railways Rule : ರೈಲು ಸಂಚಾರ ಮಾಡುವಾಗ ಪರ್ಸ್‌, ಮೊಬೈಲ್‌ ಬಿದ್ದರೆ, ಈ ರೀತಿಯಾಗಿ ಪಡೆದುಕೊಳ್ಳಿ!

Indian Railways Rule : ಚಲಿಸುತ್ತಿರುವ ರೈಲಿನಿಂದ ನಿಮ್ಮ ಮೊಬೈಲ್ , ಪರ್ಸ್ ಕೆಳಗೆ ಬಿದ್ದರೆ ಈ ಪ್ರಕ್ರಿಯೆಯಿಂದ ಮತ್ತೆ ಪಡೆಯಬಹುದಾಗಿದೆ. ರೈಲಿನಲ್ಲಿ ದಿನಕ್ಕೆ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಣಿಸುತ್ತಿರುವಾಗ ಜನರು ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡುತ್ತಾರೆ, ಆ ಸಂದರ್ಭದಲ್ಲಿ ಕೈ ತಪ್ಪಿ ಅಥವಾ ಕೈ ಜಾರಿ ಮೊಬೈಲ್ ಕೆಳಗೆ ಬೀಳುವ ಸಾದ್ಯತೆ ಹೆಚ್ಚು.

 

ಇನ್ನು ಕೆಲವೊಮ್ಮೆ ಪರ್ಸ್ ಗಳು ಕೈ ತಪ್ಪಿ ಹಳಿಗೆ ಬೀಳುತ್ತವೆ.  ಹೆಚ್ಚಾಗಿ ಎಲ್ಲರೂ ತಮ್ಮ ಪ್ರತಿಯೊಂದು ಉಪಯುಕ್ತ ಬ್ಯಾಂಕಿಂಗ್ ವಿವರಗಳು, ಐಡಿಗಳು ಹಾಗು ಎಲ್ಲಾ ಪ್ರಮುಖ ಮಾಹಿತಿಯನ್ನು ಫೋನ್‌ನಲ್ಲಿಯೇ ಇಟ್ಟುಕೊಂಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಮೊಬೈಲ್ ಫೋನ್ ಇಲ್ಲವಾದರೆ ಬಹಳಷ್ಟು ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.

ಈ ಸಮಸ್ಯೆಗಳಿಗೆ ರೈಲ್ವೇ ಅಧಿಕಾರಿಗಳು ಕೆಲವು ಪರಿಹಾರ ಹುಡುಕಿದ್ದಾರೆ. ಈ ಸಮಸ್ಯೆಗೆ ಪರಿಹಾರವೆಂದರೆ ಅದು ಕೇವಲ ನಿಯಮಗಳು. ಪ್ರಯಾಣಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ನೀವು ಕಳೆದುಕೊಂಡ ಫೋನ್ ಅಥವಾ ಪರ್ಸ್ ಅನ್ನು ಹಿಂಪಡೆಯಬಹುದು.

ಜನರು ತಮ್ಮ ಮೊಬೈಲ್, ಪರ್ಸ್ ಕೆಳಗೆ ಬಿದ್ದೊಡನೆ, ಚೈನ್ ಅನ್ನು ಎಳೆಯುತ್ತಾರೆ. ಆದರೆ ಹಾಗೇ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಯಾಕೆಂದರೆ, ರೈಲ್ವೆಯ ನಿಯಮದ ಪ್ರಕಾರ (Indian Railways Rule) ಕೇವಲ ತುರ್ತು ಸಂಧರ್ಭದಲ್ಲಿ ಮಾತ್ರ ರೈಲ್ವೆನ ಚೈನ್ ಎಳೆಯಬೇಕು. ಈ ಅಪರಾಧಕ್ಕೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಅನ್ನು ಅನುಭವಿಸಬೇಕು ಮತ್ತು ದಂಡವನ್ನು ಕೂಡ ವಿಧಿಸಬೇಕು.

ನೀವು ನಿಮ್ಮ ಮೊಬೈಲ್ ಅಥವಾ ಪರ್ಸ್ ಹಿಂಪಡೆಯಲು ಮಾಡಬೇಕಾದ ಕೆಲಸ :

ಮೊಬೈಲ್ ಫೋನ್ ಅಥವಾ ಪರ್ಸ್ ರೈಲ್ವೇ ಹಳಿ ಮೇಲೆ ಬಿದ್ದರೆ, ಮೊದಲು ಟ್ರ್ಯಾಕ್ ಬದಿಯ ಕಂಬದ ಮೇಲೆ ಹಳದಿ ಮತ್ತು ಕಪ್ಪು ಬಣ್ಣದಲ್ಲಿ ಬರೆದಿರುವ ಸಂಖ್ಯೆಯನ್ನು ಗಮಸಿನಿಸಿಕೊಳ್ಳಿ. ನಂತರ ಫೋನ್ ಯಾವ ಎರಡು ರೈಲು ನಿಲ್ದಾಣಗಳ ನಡುವೆ ಬಿದ್ದಿದೆ ಎಂಬುದನ್ನು ಕಂಡುಹಿಡಿಯಿರಿ. ಇದಕ್ಕೆ ನೀವು ಟಿಟಿಇ ಅಥವಾ ಇತರ ಯಾವುದೇ ಪ್ರಯಾಣಿಕರ ಮೊಬೈಲ್ ಫೋನ್ ಗಳನ್ನು ಸಹಾಯಕ್ಕೆ ಪಡೆದುಕೊಳ್ಳಬಹುದು. ಇದಾದ ನಂತರ, ರೈಲ್ವೆ ಪೊಲೀಸ್ ಸಹಾಯವಾಣಿ ಸಂಖ್ಯೆ 182 ಅಥವಾ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ. ನಿಮ್ಮ ಮೊಬೈಲ್ ಫೋನ್ ಅಥವಾ ನಾಪತ್ತೆಯಾದ ಬಗ್ಗೆ ಮಾಹಿತಿ ತಿಳಿಸಿ.

ನೀವು ನಿಮ್ಮ ಪೋಲ್ ಸಂಖ್ಯೆಯ ಮಾಹಿತಿಯನ್ನು ಆರ್‌ಪಿಎಫ್‌ಗೆ ನೀಡಬೇಕು. ಈ ಮಾಹಿತಿ ಪಡೆದು ರೈಲ್ವೆ ಪೊಲೀಸರು ನಿಮ್ಮ ಮೊಬೈಲ್ ಅಥವಾ ನಾಪತ್ತೆಯಾದ ಉಪಯುಕ್ತ ವಸ್ತುಗಳನ್ನು ಸರಳವಾಗಿ ಪತ್ತೆ ಹಚ್ಚಲು ಸಹಾಯಾಗುತ್ತದೆ. ಫೋನ್ ಅನ್ನು ಆದಷ್ಟು ಬೇಗನೆ ಹಿಂಪಡೆಯಲು ಇದು ಸಹಾಯವಾಗುತ್ತದೆ. ಪೊಲೀಸರು ಕೇವಲ ಕಳೆದು ಹೋದ ವಸ್ತುವಿಗಾಗಿ ಪ್ರಯತ್ನಗಳನ್ನು ಮಾಡುತ್ತಾರೆ ಎಂಬುದನ್ನು ನೆನಪಿನಲ್ಲಿ ಇರಲಿ. ಕೇವಲ ಫೋನ್ ಕೆಳಗೆ ಬಿದ್ದರೆ ಮಾತ್ರ ಹಿಂಪಡೆಯಬಹುದು, ಏನಾದರೂ ನಿಮ್ಮ ಮೊಬೈಲ್ ಫೋನ್ ಅನ್ನು ಯಾರಾದರೂ ತೆಗೆದುಕೊಂಡಿದ್ದರೆ, ಅದನ್ನು ನೀವು ಹಿಂಪಡೆದುಕೊಳ್ಳಲು ಸಾಧ್ಯವಿಲ್ಲ.

ಆದ್ದರಿಂದ ರೈಲು ಪ್ರಯಾಣದಲ್ಲಿ ಆದಷ್ಟು ನಿಮ್ಮ ಉಪಯುಕ್ತ ಆಗಿರುವ ವಸ್ತು ಅಥವಾ ಮೊಬೈಲ್ ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.

Leave A Reply

Your email address will not be published.