Smart Gas Stove: ಬಂತು ನೋಡಿ ಪಾಸ್‌ವರ್ಡ್‌ನಿಂದ ಓನ್‌ ಆಗುವ ಗ್ಯಾಸ್‌ ಸ್ಟವ್‌!

Smart Gas Stove : ಈ ಡಿಜಿಟಲ್ ಯುಗದಲ್ಲಿ ಯಾವುದು ಅಸಾಧ್ಯವಲ್ಲ ಎಲ್ಲವೂ ಸಾಧ್ಯ,ಬಿಹಾರ ರಾಜ್ಯದಲ್ಲಿ(Bihar state) ನಡೆದ ಈ ವಿಷಯವನ್ನು ಕೇಳಿದ ತಕ್ಷಣವೇ ನಮಗೆ ಬೆರಗು ಮೂಡಬಹುದು ಅದೇನಪ್ಪ ಅಂದ್ರೆ?

ಮೊಬೈಲ್ ಮತ್ತು ಲ್ಯಾಪ್ಟಾಪ್ ನಲ್ಲಿ ಪಾಸ್ ವರ್ಡ್ ಹಾಕಿದ ತಕ್ಷಣ ಆನ್ ಆಗುವಂತೆ ಗ್ಯಾಸ್ ಸ್ಟವ್(Smart Gas Stove) ಸಹ ಆನ್ ಆದರೆ ಹೇಗಿರುತ್ತೆ? ಈ ವಿಷಯವನ್ನು ಕೇಳಿದಾಗ ನಮಗೆ ಆಶ್ಚರ್ಯ ಚಕಿತನಾಗಬಹುದು ಆದರೆ ಇದು ನಿಜವಾಗಿಯೂ ಸಾಧ್ಯವಾದ ವಿಷಯ.

ಹೌದು, ಬಿಹಾರದ 13 ವರ್ಷದ ಪ್ರತ್ಯೂಷ್(pratyush) ಎಂಬ ಬಾಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ.ಪಾಸ್​ವರ್ಡ್​ (password)ಹಾಕಿದ್ರೆ ಆನ್ ಆಗುವ ಮತ್ತು ಗ್ಯಾಸ್ ಸೋರಿಕೆಯಾದಾಗ ತನ್ನಷ್ಟಕ್ಕೆ ಆಫ್ ಆಗುವ ಇಂತಹ ಗ್ಯಾಸ್ ಸ್ಟವ್ ಪ್ರತ್ಯೂಷ್ ತಯಾರಿಸಿದ್ದಾರೆ. ಹಾಗಾದರೆ ಈ ಗ್ಯಾಸ್ ಸ್ಟವ್ ಯಾವ ರೀತಿ ಇರಬಹುದು ,ಇದರಿಂದ ಜನರಿಗೆ ಯಾವ ರೀತಿ ಉಪಯೋಗ ಆಗಬಹುದು ಎಂದು ನೋಡೋಣ ಬನ್ನಿ.

ಈ ಗ್ಯಾಸ್ ಸ್ಟವ್ ನ ವಿಶೇಷತೆ ಏನೆಂದರೆ, ಕೆಲವು ಸೆಕೆಂಡ್(second) ಗಳಿಗಿಂತ ಹೆಚ್ಚು ಕಾಲ ಗ್ಯಾಸ್ ಸೋರಿಕೆಯಾದರೆ ಇಡೀ ಮನೆಯ ವಿದ್ಯುತ್ ಕೂಡ ಸ್ವಯಂಚಾಲಿತವಾಗಿ ಅಂದರೆ ತನ್ನಷ್ಟಕ್ಕೆ ತಾನೇ ಸ್ಥಗಿತಗೊಳ್ಳುತ್ತದೆ.ಹಾಗೆಯೇ ಈ ಗ್ಯಾಸ್ ಸ್ಟವ್ ನಲ್ಲಿ ಅನಿಲ ಸೋರಿಕೆಯಾದಾಗ (flow)ಎಚ್ಚರಿಕೆಯ ವ್ಯವಸ್ಥೆ ಅಲರ್ಟ್ ಆಗುತ್ತದೆ.

ಮಾಮೂಲಿ ಗ್ಯಾಸ್ ಸ್ಟವ್ ಗಿಂತ ಈ ಗ್ಯಾಸ್ ಸ್ಟವ್ ತುಂಬಾನೇ ವಿಭಿನ್ನವಾಗಿದೆ.ಈ ಗ್ಯಾಸ್ ಸ್ಟವ್​ನಲ್ಲಿ ಅಲಾರಂ(alarm) ಸಹ ಇದೆ. ಅನಿಲ ಸೋರಿಕೆಯಾದಾಗ(fuel flow) ಈ ಅಲಾರಂ ಜೋರಾಗಿ ಬೀಪ್ ಆಗುತ್ತದೆ. ಅಲ್ಲದೇ, ಗ್ಯಾಸ್ ಲೀಕ್ ಆದರೆ ಅಡುಗೆಮನೆಯಲ್ಲಿ ಅಳವಡಿಸಿದ ಫ್ಯಾನ್(fan) ಆನ್ ಆಗುತ್ತದೆ. ಸ್ವಲ್ಪ ಹೊತ್ತಿನ ನಂತರ ಮನೆಗೆ ವಿದ್ಯುತ್ ಬರುವುದು ನಿಲ್ಲುತ್ತದೆ. ಅನಿಲ ಸಂಪರ್ಕವು ನಿಲ್ಲುತ್ತದೆ. ಈ ಮೂಲಕ ಅನಿಲ ದುರಂತ ಸಂಭವಿಸುವುದು ತಡೆಗಟ್ಟಬಹುದು ಎಂದು ಪ್ರತ್ಯೂಷ್ ಮಾಹಿತಿಯನ್ನು ನೀಡಿದ್ದಾರೆ.

ಈ ವಿಶೇಷ ಗ್ಯಾಸ್ ಸ್ಟವ್​ ಅನ್ನು ತಯಾರಿಸಿ ಮಾರುಕಟ್ಟೆಗೆ(market) ಪ್ರದರ್ಶಿಸಲು ಬರೋಬ್ಬರಿ ಪ್ರತ್ಯೂಷ್ ಅವರಿಗೆ ಸುಮಾರು 1,500 ರೂಪಾಯಿ ಖರ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ 3,000 ರೂಪಾಯಿವರೆಗೆ ಮಾರಾಟವಾಗುವ ಸಾದ್ಯತೆ ಇದೆ ಎನ್ನಬಹುದು.

Leave A Reply

Your email address will not be published.