Post Office : ಏಪ್ರಿಲ್ 01ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ನಿಯಮ ಬದಲಾವಣೆ!

PostOffice Scheme Rules Change : ಅಂಚೆ ಕಚೇರಿಯು ಸರ್ಕಾರದ (government )ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿದ್ದು, ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರಲು (safe)ಮತ್ತು ಯಾವುದೇ ಒತ್ತಡವಿಲ್ಲದೆ ನೀವು ಉತ್ತಮ ಲಾಭವನ್ನು ಪಡೆಯಲು ಅಂಚೆ ಕಚೇರಿಯಲ್ಲಿ ಹೂಡಿಕೆ(Investment) ಮಾಡುವುದು ಉತ್ತಮವಾಗಿದೆ. ಅದಕ್ಕೂ ಮೊದಲು ಹೊಸ ಆರ್ಥಿಕ ವರ್ಷ 01 ಏಪ್ರಿಲ್ (PostOffice Scheme Rules Change) 2023ರಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ಸಹ ತಿಳಿದಿರುವುದು ಮುಖ್ಯವಾಗಿದೆ.

ಹೌದು, ನೀವು ಈಗಾಗಲೇ ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಹೂಡಿಕೆ ಮಾಡಲು ಯೋಚನೆ ಮಾಡಿದಲ್ಲಿ, ಅಂಚೆ ಕಚೇರಿಯ ಯಾವ ಯೋಜನೆಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಏಪ್ರಿಲ್ 01. 2023ರಿಂದ ಹೊಸ ಆರ್ಥಿಕ ವರ್ಷ ಆರಂಭ ಆಗಲಿದ್ದು ಅಂಚೆ ಕಚೇರಿಯ 2023ರ ಕೇಂದ್ರ ಬಜೆಟ್‌ನಲ್ಲಿ ಎರಡು ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅವುಗಳೆಂದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಆಗಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):
2004 ರಲ್ಲಿ ಹಿರಿಯ ನಾಗರಿಕರಿಗೆ ಅವರ ನಿವೃತ್ತಿಯ ನಂತರದ ವರ್ಷಗಳಲ್ಲಿ ನಂಬಿಕೆಯುಳ್ಳ ಮತ್ತು ಸುರಕ್ಷಿತ ಆದಾಯದ ಮೂಲವನ್ನು ಒದಗಿಸುವ ಉದ್ದೇಶದಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅನ್ನು ಸ್ಥಾಪಿಸಲಾಯಿತು. ಇದೀಗ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ SCSS ನಲ್ಲಿ ನೀಡಲಾಗುವ ಬಡ್ಡಿ ದರವು 8% ಆಗಿದೆ. ಆದರೆ, ಗಮನಿಸಬೇಕಾದ ಅಂಶವೆಂದರೆ ಈ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗೆ ತೆರಿಗೆ ಮುಕ್ತವಾಗಿಲ್ಲ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ(POMIS):
ಯೂನಿಯನ್ ಬಜೆಟ್ 2023 ರ ಪ್ರಕಾರ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಗಾಗಿ ಒಂದೇ ಖಾತೆದಾರರ ಮಿತಿಯನ್ನು 4.5 ಲಕ್ಷದಿಂದ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆದಾರರ ಹೂಡಿಕೆ ಮಿತಿಯನ್ನು 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಮಾಸಿಕ ಆದಾಯ ಯೋಜನೆಯ ಹೂಡಿಕೆದಾರರಿಗೆ ಪ್ರತಿ ತಿಂಗಳು ಬಡ್ಡಿಯನ್ನು ಪಾವತಿಸಲಾಗುವುದು. ಈ ಯೋಜನೆಗೆ ಸರ್ಕಾರವು ನಿಯಮಿತವಾಗಿ ಬಡ್ಡಿದರವನ್ನು ನಿಗದಿಪಡಿಸುತ್ತದೆ. ಪ್ರಸ್ತುತ, ಜನವರಿಯಿಂದ ಮಾರ್ಚ್ 2023ರ ಅವಧಿಯ ಬಡ್ಡಿ ದರವು 7.1% ಆಗಿದೆ.

ಸದ್ಯ ಏಪ್ರಿಲ್ 01. 2023ರಿಂದ ಹೊಸ ಆರ್ಥಿಕ ವರ್ಷ ಆರಂಭ ಆಗಲಿದ್ದು ಅಂಚೆ ಕಚೇರಿಯ 2023ರ ಕೇಂದ್ರ ಬಜೆಟ್‌ನಲ್ಲಿ ಎರಡು ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಈ ಮೇಲಿನಂತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ : Dharmasthala : ಧರ್ಮಸ್ಥಳದಲ್ಲಿ ಇದನ್ನು ಖಂಡಿತ ಮಾಡಬೇಡಿ!

Leave A Reply

Your email address will not be published.