PAN Card-Aadhaar link :ಪಾನ್ ಕಾರ್ಡ್-ಆಧಾರ್ ಲಿಂಕ್ ಗಡುವು ವಿಸ್ತರಣೆಯಾಗಿಲ್ಲ
PAN Card-Aadhaar link : ಮುಂಬೈ : ಪಾನ್ ಕಾರ್ಡ್-ಆಧಾರ್ ಕಾರ್ಡನ್ನು ಲಿಂಕ್ ಮಾಡುವ (PAN Card-Aadhaar link) ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ.
ಆದರೆ ಆದಾಯ ತೆರಿಗೆ ಇಲಾಖೆ ವೆಬ್ಸೈಟ್ನಲ್ಲಿ ಮಾ.31ರೊಳಕ್ಕೆ ಈ ಪ್ರಕ್ರಿಯೆಯನ್ನು ಪೂರೈಸಲೇಬೇಕು ಎಂಬ ಸಂದೇಶವೇ ಇದೆ.ಆದರಿಂದ ಅಂತಿಮ ಗಡುವು ವಿಸ್ತರಣೆ ಎಂಬುದು ವದಂತಿ ಎನ್ನಲಾಗಿದೆ.
ಪಾನ್-ಆದಾರ್ ಲಿಂಕ್ ಮಾಡಲು 1000 ರೂ.ಗಳನ್ನು ಪಾವತಿಸಬೇಕು. ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ ಹಲ ವಿಭಾಗಗಳಲ್ಲಿ ಬರುವ ಜನರಿಗೆ ರಿಯಾಯಿತಿ ನೀಡಲಾಗಿದೆ.