Mother and Baby : ಅಮ್ಮನ ತಬ್ಬಿ ಹಿಡಿದ ಆಗಷ್ಟೇ ಜನಿಸಿದ ಮಗು!ವಿಡಿಯೋ ವೈರಲ್‌

Mother and Baby : ವೈರಲ್‌ ನ್ಯೂಸ್‌ : ಹುಟ್ಟಿದ ಕೂಡಲೇ ಮಗುವನ್ನು ತಾಯಿಯ ಎದೆ ಮೇಲೆ ಇರಿಸಲಾಗುತ್ತೆ. ಅಷ್ಟೇ ಅಲ್ಲ ನವಜಾತ ಶಿಶು ತನ್ನ ತಂದೆಯೊಂದಿಗೆ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್(Skin to skin contact) ಮಾಡೋದು ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ.

 

ಅರಿವಿರದಿದ್ದರೂ ತಾಯಿ ಬಿಟ್ಟು(Mother and Baby) ಹೋದ ತಕ್ಷಣ ಮಗು ಅಳಲು ಶುರು ಮಾಡುತ್ತದೆ. ಅಚ್ಚರಿ ಎನಿಸಿದರೂ ತಾಯಿ ಮಗುವಿನ ಒಡನಾಟ ಅಂತಹದ್ದು, ಆದ್ರೆ ಇಲ್ಲೊಂದೆಡೆ ಆಗಷ್ಟೇ ಜನಿಸಿದ ಮಗುವೊಂದು ತಾಯಿಯ ಮುಖದ ಬಳಿ ತಂದ ಕೊಡಲೇ ಮಗು ಅಮ್ಮನ ಒಂದು ಕೈಯಲ್ಲಿ ತಬ್ಬಿಕೊಂಡು ಮೊದಲ ಬಾರಿ ಅಳುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರು ‘ದಿ ಫಿಗೆನ್’ ಈ ವೀಡಿಯೊವನ್ನು “ತಾಯಿಯನ್ನು ಬಿಡಲು ಬಯಸದ ನವಜಾತ ಶಿಶು… Aweeeeeeeee” ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿದ್ದಾರೆ.

ತಾಯ್ತನದ ಸಂತಸವನ್ನು (Mother and Baby) ಸಾರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ @TheFigen_ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, 22 ಸೆಕೆಂಡ್‌ಗಳ ವಿಡಿಯೋದಲ್ಲಿ ಆಗಷ್ಟೇ ಜನಿಸಿದ ಮಗವವನ್ನು ಮಗುವಿನ ಮುಖದ ಬಳಿ ವೈದ್ಯರು/ದಾದಿಯರು ಹಿಡಿಯುತ್ತಿದ್ದು, ಈ ವೇಳೆ ಮಗು ಕೈ ಚಾಚಿ ಅಮ್ಮನ ಮುಖವನ್ನು ತಬ್ಬಿ ಹಿಡಿದುಕೊಂಡು ಕೆನ್ನೆಯ ಮೇಲೆಲ್ಲಾ ಮುತ್ತಿಡುತ್ತದೆ. ಆ ಕ್ಷಣ ಆ ತಾಯಿಯೂ ಭಾವುಕಳಾಗಿದ್ದು, ಆಕೆಯ ಕಣ್ಣಿನಂಚಲಿ ನೀರು ಚಿಮ್ಮುತ್ತಿದೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ದಿನ ಆರಂಭಿಸಲು ಇದಕ್ಕಿಂತ ಸುಂದರ ವಿಡಿಯೋ ಇನ್ನೊಂದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 

 

1 Comment
  1. MichaelLiemo says

    ventolin without a prescription: ventolin tabs – ventolin no prescription
    buying ventolin uk

Leave A Reply

Your email address will not be published.