Crocodile Viral Video : ಬಿಯರ್‌ ಪ್ರಿಯ ಮೊಸಳೆ! ಬಿಯರ್‌ ಬಾಕ್ಸ್‌ ಕೊಂಡೊಯ್ದೇ ಬಿಟ್ಟ ಮೊಸಳೆ!!!

Crocodile Viral Video : ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಭೀಕರ ಘಟನೆ ಇನ್ನು ಕೆಲವು ಕಾಮಿಡಿ ಘಟನೆಗಳು ವೈರಲ್(Crocodile Viral Video ) ಆಗುತ್ತಿರುವುದು ನೋಡುತ್ತಲೇ ಇರುತ್ತೇವೆ. ಸದ್ಯ ಮೊಸಳೆ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ನೀರಿನಲ್ಲಿ ಬುದ್ದಿವಂತ ಬೇಟೆಗಾರ ಎಂದರೆ ಅದು ಮೊಸಳೆ (crocodile) ಎಂದರೆ ತಪ್ಪಾಗಲಾರದು. ಆದರೆ ಇಲ್ಲೊಂದು ಮೊಸಳೆ ಏನು ಮಾಡಿದೆ ನೀವೇ ನೋಡಿ.

 

ಸಾಮಾನ್ಯವಾಗಿ ಪಿಕ್‌ನಿಕ್ ಹೋಗುವಾಗ ವಿಶ್ರಾಂತಿ ಪಡೆಯಲು ನದಿ ದಡವನ್ನು ಆರಿಸಿಕೊಳ್ಳುವುದು ಸಹಜ. ಹಾಗೆಯೇ ಇಲ್ಲೊಂದು ಮೋಜಿನಲ್ಲಿದ್ದ ಪ್ರವಾಸಿ ತಂಡಕ್ಕೆ ಮೊಸಳೆಯೊಂದು ಸ್ವಲ್ಪ ಕಾಟ ನೀಡಿದ ವಿಡಿಯೋವೊಂದು ವೈರಲ್ ಆಗಿದೆ.

ಪ್ರವಾಸಿಗಳು ನದಿ ದಡದಲ್ಲಿ ತಮ್ಮ ಅಗತ್ಯ ವಸ್ತು ತಿನಿಸುಗಳನ್ನು ಅಲ್ಲಲ್ಲಿ ಹರಡಿದ್ದರು. ಅವುಗಳ ನಡುವೆ ಬಿಯರ್‌ ಇದ್ದ ಕೂಲರ್‌ ಪೆಟ್ಟಿಗೆಯನ್ನು ಕೂಡ ಇರಿಸಲಾಗಿತ್ತು. ಆದರೆ ನೋಡ ನೋಡುತ್ತಲೇ ಮೊಸಳೆ ನದಿ ದಡಕ್ಕೆ ಬಂದು ಬಿಯರ್‌ ಇದ್ದ ಕೂಲರ್‌ ಪೆಟ್ಟಿಗೆಯನ್ನು ನೀರಿಗೆ ಎಳೆದೊಯ್ದು ಬಿಡುತ್ತದೆ. ಅಲ್ಲದೇ ಅಲ್ಲಿಟ್ಟಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತದೆ.

ನಂತರ ನೀರಿನಿಂದ ಹೊರಬರುವ ಮತ್ತೊಂದು ಮೊಸಳೆ ಬಿಯರ್‌ ಬಾಕ್ಸ್‌ಗಾಗಿ ಮೊದಲು ಬಂದಿದ್ದ ಮೊಸಳೆಯೊಂದಿಗೆ ಕಾದಾಟಕ್ಕೆ ಮುಂದಾಗುತ್ತದೆ. ಈ ವಿಡಿಯೋ ನೋಡಿದ ವೀಕ್ಷಕರು ಈ ಅಪರೂಪದ ದೃಶ್ಯ ನೋಡಿ ಹಲವಾರು ಕಾಮೆಂಟ್ ಮಾಡಿದ್ದಾರೆ.

https://ainlivenews.com/wp-content/uploads/2023/03/videoplayback.mp4?_=1

 

Leave A Reply

Your email address will not be published.