Golguppa : ಇಂಡಿಯಾದ ಇಂಟರ್‌ನ್ಯಾಶನಲ್ ಸ್ಟ್ರೀಟ್ ಫುಡ್ ‘ಗೋಲ್ಗೊಪ್ಪಾ’ ನ ಮೊದಲು ತಯಾರಿಸಿದ್ದು ಮಹಾಭಾರತದ ದ್ರೌಪದಿಯಂತೆ! ಇಲ್ಲಿದೆ ನೋಡಿ ಇಟ್ರೆಸ್ಟಿಂಗ್ ಮಾಹಿತಿ!
Golguppa :ಟೊಳ್ಳಾದ ಪೂರಿ ಒಳಗೆ ಬೇಯಿಸಿದ, ಮಸಾಲೆ ಮಿಶ್ರಿತ ಆಲುಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು- ಹುಳಿ, ನಾಲಗೆಗೆ ರುಚಿ ನೀಡುವಂತಹ ಖಾರ ಖಾರವಾದ ಪಾನಿಗೆ ಅದ್ದಿ ಕೊಟ್ಟ ಗೋಲ್‌ಗಪ್ಪಾ(Golguppa) ನ ಬಾಯಿಗಿಟ್ಟು ಮುಖವನ್ನು ಹುಳ್ಳಗೆ ಮಾಡುತ್ತ ಚಪ್ಪರಿಸಿದರೆ, ಆಹಾ! ಏನು ಆನಂದ ಅಲ್ವಾ? ಇಂತಹ ರುಚಿ ರುಚಿಯಾದ ಗೋಲ್‌ಗಪ್ಪಾಗೆ ಮನಸೋಲದವರೇ ಇಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಹಳ್ಳಿ ಇರಲಿ, ಸಿಟಿ ಇರಲಿ, ಮಧ್ಯಾಹ್ನ ಇರಲಿ, ಸಂಜೆ ಇರಲಿ, ಗೊಲ್ಗೊಪ್ಪಗೆ ಸಖತ್ ಡಿಮ್ಯಾಂಡ್. ಅಂದಹಾಗೆ ಈ ಗೋಲ್ಗೊಪ್ಪಾದ ಹಿನ್ನೆಲೆ ಸಖತ್ ಇಂಟರೆಸ್ಟಿಂಗ್ ಆಗಿದೆ. ಈ ಸ್ಟ್ರೀಟ್ ಫುಡ್ ಅನ್ನು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೂ ಚಪ್ಪರಿಸಿಕೊಂಡು ತಿನ್ನುತ್ತಿದ್ದರಂತೆ!
ಹೌದು, ಗೊಲ್ಗೊಪ್ಪ ಅನ್ನೋ ಇಂಡಿಯಾದ ಇಂಟರ್‌ನ್ಯಾಶನಲ್ ಸ್ಟ್ರೀಟ್ ಫುಡ್ಡಿಗೆ ಸಖತ್ ಡಿಮ್ಯಾಂಡ್. ಇದಕ್ಕೆ ಇಂಟರ್‌ನ್ಯಾಶನಲ್ ಫೇಮ್ ಇದೆ ಅನ್ನೋದಕ್ಕೆ ಸಾಕ್ಷಿ ಆದದ್ದು ಮೊನ್ನೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಗೋಲ್ಗೊಪ್ಪವನ್ನು ಚಪ್ಪರಿಸಿಕೊಂಡು ತಿಂದಾಗ. ಸವಿಯುತ್ತಿರುವ ವೀಡಿಯೊ ಆಮೇಲೆ ಸಾಮಾಜಿಕ ತಾಣದಲ್ಲಿ ವೈರಲ್ ಆಯಿತು. ನಮ್ಮ ಗೊಲ್ಗೊಪ್ಪಗೆ ಜಪಾನ್ ಪ್ರಧಾನಿಯೂ ಮನಸೋತಿದ್ದಾರೆಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಅಂದಹಾಗೆ ಎಲ್ಲೇ ಹೋದರೂ ಪಾನಿಪುರಿ ತನ್ನದೇ ಆದ ಸುವಾಸನೆ ಹಾಗೂ ರುಚಿಯಿಂದ ಪ್ರಸಿದ್ಧಿ ಪಡೆದಿದೆ. ಅಂದ ಹಾಗೆ ಈ ಪಾನಿಪುರಿ ಹಿನ್ನೆಲೆ(History) ಏನು? ಇದು ಯಾವಾಗಿಂದ ಸ್ಟ್ರೀಟ್ ಫುಡ್ ಆಗಿ ಫೇಮಸ್(Famous) ಆಯ್ತು ಅಂದರೆ ಕರೆಕ್ಟಾಗಿ ಉತ್ತರ ಹೇಳೋದು ಕಷ್ಟ. ಆದರೆ ಮೊಘಲ್ ಯುಗದಲ್ಲಿ ಈ ಫುಡ್(Food) ಸಖತ್ ಫೇಮಸ್ ಆಯ್ತು ಅನ್ನೋದನ್ನು ಇತಿಹಾಸಕಾರರೂ ಒಪ್ಪುತ್ತಾರೆ. ಇದನ್ನು ಉತ್ತರ ಭಾರತದ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದರು ಅನ್ನುವ ಮಾತುಗಳೂ ಇವೆ.
ಆದರೆ ಮಹಾಭಾರತ ಕಾಲದಲ್ಲೂ ಪಾನಿಪುರಿ(Panipuri) ಚಾಲ್ತಿಯಲ್ಲಿತ್ತು ಅನ್ನೋ ಮಾತಿದೆ. ದ್ರೌಪದಿ ಇದನ್ನು ಪಾಂಡವರಿಗೆ ಮಾಡಿಕೊಡುತ್ತಿದ್ದಳಂತೆ. ತರಕಾರಿಗಳನ್ನು ಬೇಯಿಸಿ, ಗೋಧಿಯ ಗಟ್ಟಿ ಚೂರಿನೊಳಗೆ ಸಿಹಿ ಹುಳಿ ಬೆರೆಸಿದ ನೀರಲ್ಲದ್ದಿ ಕೊಡುತ್ತಿದ್ದಳಂತೆ. ಇದು ಪಾಂಡವರಿಗೆಲ್ಲ ಬಹಳ ಇಷ್ಟವಾದ ತಿನಿಸಾಗಿತ್ತು ಅನ್ನೋ ಮಾತೂ ಇದೆ. ಇದು ಪುರಾಣ(Myth) ಆಗಿರೋ ಕಾರಣ ಇದೇ ಸತ್ಯ ಅಂತಲೋ, ಇದು ಸುಳ್ಳು ಅಂತಲೋ ಹೇಳೋದು ಕಷ್ಟ. ಆದರೆ ಪಾನಿಪುರಿ ಘನತೆ ಮಾತ್ರ ದೊಡ್ಡದು.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದರೆ ಈ ಗೋಲ್ಗೊಪ್ಪ ಯಾವ ಸಿನಿಮಾದಲ್ಲೇ ಬರಲಿ ಆ ಸಿನಿಮಾ ಸಖತ್ ರೆಸ್ಪಾನ್ಸ್ ಹುಟ್ಟಿಸುತ್ತೆ. ಸಿನಿಮಾ ಹಿಟ್ ಆಗುತ್ತೋ ಬಿಡುತ್ತೋ, ಪಾನಿಪುರಿ ಸೀನ್‌ಗಳು ಪ್ಲಾಪ್ ಆದ ಉದಾಹರಣೆ ಇಲ್ಲ. ಇದಕ್ಕೆ ಕಾರಣ ಮತ್ತೇನಿಲ್ಲ, ಪಾನಿಪುರಿ ಜೊತೆಗೆ ಜನ ಕನೆಕ್ಟ್ ಆಗೋ ರೀತಿ. ಲವ್ ಮಾಕ್‌ಟೇಲ್ ಸಿನಿಮಾದಲ್ಲಿ ಹೀರೋಯಿನ್‌ಗೆ ಪಾನಿಪುರಿ ಅಂದರೆ ಜೀವ. ರಬ್ ನೆ ಬನಾ ದೆ ಜೋಡಿ ಸಿನಿಮಾದಲ್ಲಿ ಶಾರೂಖ್ ಖಾನ್, ಅನುಷ್ಕಾ ಬೀದಿ ಬದಿ ಪಾನಿಪುರಿ ತಿನ್ನೋ ಸೀನ್‌ಗೆ ಮನ ಸೋಲದವರಿಲ್ಲ. ಹೀಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ಗೋಲ್ಗೊಪ್ಪ ಸೀನ್ ಬಂದಿದೆ, ಫೇಮಸ್ ಆಗಿದೆ.