Community War: ಜೈನರು, ಬ್ರಾಹ್ಮಣರೊಂದಿಗೆ ಪೈಪೋಟಿ ನಡೆಸಲು ಮುಸ್ಲಿಮರಿಗೆ ಸಾಧ್ಯವಿಲ್ಲ: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸಾಅದಿ ಆಕ್ರೋಶ
Community War : ವಿಧಾನಸಭೆ ಚುನಾವಣೆ(Assembly Election) ನಿಮಿತ್ತ ರಾಜ್ಯ ಸರ್ಕಾರವು ಸಮುದಾಯಗಳ ಓಲೈಕೆಗಾಗಿ ಮೀಸಲಾತಿಯ ಅಸ್ತ್ರ ಬಳಸಿದೆ. ಇದರಲ್ಲಿ ಎಸ್ಸಿ, ಎಸ್ಟಿ, ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಬಂಪರ್ ಗಿಫ್ಟ್ ನೀಡಿದರೆ ಮುಸ್ಲಿಂ(Muslim) ಸಮುದಾಯಕ್ಕೆ ಕೋಕ್ ನೀಡಲಾಗಿದೆ. 2ಬಿ ಮೀಸಲಾತಿ ಕಿತ್ತುಕೊಂಡು ಆರ್ಥಿಕ ಹಿಂದುಳಿದ ವರ್ಗದ (EWS) ಮೀಸಲಾತಿ ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತುಕೊಂಡಿರುವ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಭಾರೀ ಆಕ್ರೋಶ (Community War) ಕೇಳಿಬರುತ್ತಿದೆ.
ಹೌದು, ರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಹಿಂದುಳಿದ ವರ್ಗದ ‘2ಬಿ’ ಯಲ್ಲಿರುವ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ಕಿತ್ತುಕೊಂಡು ಆರ್ಥಿಕ ಹಿಂದುಳಿದ ವರ್ಗದ (EWS) ಮೀಸಲಾತಿ ನೀಡಲಾಗುತ್ತಿದೆ. ಈಗಾಗಲೇ ಈ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿ ಸಾಲಿನಲ್ಲಿ ಬ್ರಾಹ್ಮಣ ಮತ್ತು ಜೈನ ಸಮುದಾಯದವರಿದ್ದಾರೆ. ಸದ್ಯ ಅವರೊಂದಿಗೆ ಪೈಪೋಟಿ ಮಾಡಲು ನಮಗೆ ಸಾಧ್ಯವಿಲ್ಲ. ಇದರಿಂದ ಮುಸ್ಲಿಮರಿಗೆ ಅನ್ಯಾಯವಾಗುತ್ತದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸಾಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕವಾಗಿ ಹಿಂದುಳಿದ ಮೀಸಲಾತಿ ಸಿಗುತ್ತಿತ್ತು. ಆದರೆ ಈಗ ಮುಸ್ಲಿಂರಿಗೆ ಅನ್ಯಾಯವಾಗುತ್ತೆದೆ. ನಮ್ಮಲ್ಲಿ ಜಾತಿ ಪದ್ಧತಿಯಿಲ್ಲ. ಮುಸ್ಲಿಂರು ಸಾಮಾಜಿಕವಾಗಿ ಹಿಂದುಳಿದವರು ಆಗಿದ್ದಾರೆ. ವೀರಪ್ಪ ಮೊಯ್ಲಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅವಧಿಯಲ್ಲಿ ನಮಗೆ ಮೀಸಲಾತಿ ಕಾಯ್ದೆ ಜಾರಿಗೆ ತರಲಾಗಿದೆ. ಆದ್ದರಿಂದ ಈಗ ನಮಗೆ EWSನಲ್ಲಿ ಹೋಗೋಕೆ ಆಗಲ್ಲ. ನಾಳೆ ಯಾವ ಸಮುದಾಯದವರನ್ನು ಬೇಕಾದರೂ ಆರ್ಥಿಕ ಹಿಂದುಳಿದ ವಿಭಾಗ ವರ್ಗದಡಿ ತರಬಹುದು. ಹೀಗಾಗಿ ನಾವು ಇದನ್ನು ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ನಿನ್ನೆ ನಾನು ಕಾನೂನು ಸಚಿವ ಮಾಧುಸ್ವಾಮಿ ಜೊತೆ ಮಾತಾನಾಡಿದ್ದೇನೆ. ಆಗ ಅವರು ಇದರಿಂದ ನಿಮಗೆ ಸಮಸ್ಯೆಯಾಗಲ್ಲ, ಆರ್ಥಿಕ ಹಿಂದುಳಿದ ಪ್ರವರ್ಗದಡಿ ಮೀಸಲಾತಿ ಸಿಗಲಿದೆ ಎಂದು ಹೇಳಿದ್ದರು. ಆದರೆ, ಕಾನೂನಿನ ಪ್ರಕಾರ ಆರ್ಥಿಕ ಹಿಂದುಳಿದ ವರ್ಗದಡಿ (Economically Weaker Sections-EWS) ನಮಗೆ ಅವಕಾಶ ಸಿಗಲ್ಲ. ಯಾಕೆಂದರೆ ಅಲ್ಲಿ ಬಲಾಢ್ಯ ಕಮ್ಯುನಿಟಿ ಇದೆ. ಹೀಗಾಗಿ ಅಲ್ಲಿ ಶೇ. 10 ಮೀಸಲು ಸಿಗುವುದಿಲ್ಲ ಎಂದು ಹೇಳಿದರು.
ಮುಸ್ಲಿಂರಿಗೆ ಶೇ.4 ಪ್ರತ್ಯೇಕ ಮೀಸಲಾತಿ ಇತ್ತು, ಅದೇ ನಮಗೆ ಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಕೆ ಮಾಡಲಾಗಿದೆ. ನಮ್ಮನ್ನು ಈಗ ಇಡಬ್ಲ್ಯೂಎಸ್‌ಗೆ ಸೇರ್ಪಡೆ ಮಾಡಿದರೂ ಶೇ.10 ಮೀಸಲಾತಿ ಸಿಗುವುದಿಲ್ಲ. ಈ ಮೀಸಲಾತಿಯಲ್ಲಿ ಬ್ರಾಹ್ಮಣರಿಗೆ ಜೈನರಿಗೆ ಹಂಚಿಕೆಯಾಗಬೇಕು. ಹೀಗಾಗಿ, ಮುಸ್ಲಿಂ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಮೀಸಲಿಗೆ ನೋಟಿಫಿಕೇಶನ್ ಮಾಡದಂತೆ ಮನವಿ ಮಾಡಿದ್ದೇವೆ. ಸರ್ಕಾರದ ಮೀಸಲಾತಿ ಆದೇಶ ನಮ್ಮ ಸಮುದಾಯಕ್ಕೆ ಶಾಕ್ ಉಂಟು ಮಾಡಿದೆ. ಈಗ ರಾಜ್ಯದಲ್ಲಿ ಮೊದಲೇ ನಮ್ಮ ಸಮುದಾಯ ಹಿಂದುಳಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಾತಾಳಕ್ಕೆ ಹೋಗುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದಿಂದ ಮುಸ್ಲಿಂರಿಗೆ ಇದ್ದ ಮೀಸಲಾತಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಸ್ಫೋಟಗೊಂಡಿದೆ. ಇದು ಬೇರೆ ಸಮುದಾಯದವರ ಒಲೈಕೆಗಾಗಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈಗಿರುವ ರೀತಿಯಲ್ಲಿಯೇ ಯಥಾಸ್ಥಿತಿ ಕಾಯ್ದುಕೊಳ್ಳಲು ಮನವಿ ಸಲ್ಲಿಕೆ ಮಾಡುತ್ತೇವೆ. ಸರ್ಕಾರ ಕ್ಕೆ ಡೆಡ್ ಲೈನ್ ಕೊಡ್ತೀವಿ. ಸಾಯಂಕಾಲ ಕಾನೂನು ಹೋರಾಟದ ಬಗ್ಗೆ ತಜ್ಞರ ಜೊತೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಅಂದಹಾಗೆ ಸಂಪುಟ ಸಭೆಯಲ್ಲಿ ಮೀಲಾಸಾತಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೆ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿತ್ತು. ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ, 2 ಡಿ ಪ್ರವರ್ಗದ ಮೂಲಕ 7% ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಒಕ್ಕಲಿಗರಿಗೆ 6% ಮೀಸಲಾತಿ ನೀಡಲಾಗಿದೆ.
ಮುಸ್ಲಿಂ ಮೀಸಲಾತಿಗೆ ಕೊಕ್ ಕೊಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ (EWS) ಮಾಡಲಾಗಿದೆ.
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಎರಡು ಬೃಹತ್ ಸಮುದಾಯಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಸರ್ಕಾರ ಮಾಡಿದೆ.
ಇದನ್ನೂ ಓದಿ: Kantara: ಕಾಂತಾರ 2 ಸಿನಿಮಾ ನಿರ್ಮಾಣಕ್ಕೆ ಆಕ್ರೋಶ ವ್ಯಕ್ತ ; ತುಳುನಾಡ ಜನತೆ ರಿಷಬ್ ಶೆಟ್ಟಿ ಮೇಲೆ ಗರಂ!!