ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೇ ಕಷ್ಟ ಪಟ್ಟ ಮಹಿಳೆ! ಇದೆಂಥಾ ಖಾಯಿಲೆ?

Urine: ಮಾನವ ಮೂತ್ರ (Human Urine)ಎಂದಾಗ ಎಲ್ಲರಿಗೂ ಅಸಹ್ಯ ಆಗೋದು ಸಹಜ. ಆದರೆ, ಮೂತ್ರ ವಿಸರ್ಜನೆ ದೇಹದ ನೈಸರ್ಗಿಕ ಕ್ರಿಯೆಯಾಗಿದ್ದು, ಕಿಡ್ನಿಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ ಎಂಬ ವಿಚಾರ ಸಹಜವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ!!. ಮೂತ್ರ ವಿಸರ್ಜನೆ ಬಂದ ಸಂದರ್ಭದಲ್ಲಿ ಕೂಡಲೇ ಅದನ್ನು ಖಾಲಿ ಮಾಡಿಬಿಡಬೇಕು ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಇದನ್ನು ಮಾಡದೇ ಇದ್ದರೆ ಆಗ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿರುತ್ತದೆ. ಅಷ್ಟೇ ಅಲ್ಲದೇ, ಮೂತ್ರದ ಮೂಲಕವೇ ಅನೇಕ ರೋಗದ ಲಕ್ಷಣಗಳನ್ನೂ ಪತ್ತೆ ಮಾಡಬಹುದು. ಆದರೆ, ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರಾನೇ ಮಾಡಿಲ್ಲವಂತೆ. ನಿಮಗೆ ಕೇಳುವಾಗ ಅಚ್ಚರಿಯಾದರೂ ಸತ್ಯ.

ಇಂಗ್ಲೆಂಡಿನ (England)30 ವರ್ಷ ವಯಸ್ಸಿನ ಎಲ್ಲೆ ಆಡಮ್ಸ್ ಎಂಬ ಮಹಿಳೆಯೊಬ್ಬರು (Women) ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರ ಮಾಡಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಇದು ಹೇಗೆ ಸಾಧ್ಯ? ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಈ ಮಹಿಳೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಮೂತ್ರ ಮಾಡಲು ಆಗಲಿಲ್ಲವಂತೆ. ಆ ಬಳಿಕದ ದಿನಗಳಲ್ಲಿ ಮೂತ್ರ ಬರುವ ಅನುಭವವೇ ಆಗದೇ ಹೋಯಿತು ಎಂದು ಆಡಮ್ಸ್ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ, ಆಡಮ್ಸ್ ಎಷ್ಟೇ ನೀರು ಇಲ್ಲವೇ ಇತರ ದ್ರವವನ್ನು ಕುಡಿದರೂ ಕೂಡ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲವಂತೆ. ಆದರೆ, ಈ ಸಮಸ್ಯೆ ಮುಂದುವರಿದು ಮಹಿಳೆಗೆ ವರ್ಷಕ್ಕೂ ಹೆಚ್ಚು ಕಾಲ ಮೂತ್ರ (Urine) ವಿಸರ್ಜನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯ ಈ ಆರೋಗ್ಯ ಸ್ಥಿತಿಗೆ (Health condition) ಕಾರಣವನ್ನ ಕಂಡುಹಿಡಿಯಲು ಯುನೈಟೆಡ್ ಕಿಂಗ್ಡಮ್ನಲ್ಲಿ ವೈದ್ಯರು (Doctors) ಮುಂದಾಗಿದ್ದಾರೆ.

ಎಲ್ಲೆ ಆಡಮ್ಸ್ ಅವರಿಗೆ ಕಂಡು ಬಂದ ಈ ಸಮಸ್ಯೆ ಫೌಲರ್ಸ್ ಸಿಂಡ್ರೋಮ್ ಎಂದು ವೈದ್ಯರು ಮಾಹಿತಿ ನೀಡಿದ್ದು, ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಸಮಸ್ಯೆ ಎನ್ನಲಾಗಿದೆ. ಈ ಸ್ಥಿತಿಯು ಹೆಚ್ಚಾಗಿ ಯುವತಿಯರಲ್ಲಿ ಕಂಡು ಬರುತ್ತದಂತೆ. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಳಗೊಂಡಿರುತ್ತದೆ. ಆದರೆ, ಆಡಮ್ಸ್ ಅವರನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಲಂಡನ್ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳ ಬಗ್ಗೆ ವಿವರಣೆ ನೀಡಿದ ಬಳಿಕ ಆಡಮ್ಸ್ ಚಿಕಿತ್ಸೆ (Treatment) ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿದಾಗ ಉಳಿದವರ ಹಾಗೆ 500 ಮಿಲಿ ಇರುವ ಬದಲಿಗೆ ಆಕೆಯ ಮೂತ್ರಕೋಶದಲ್ಲಿ ಬರೋಬ್ಬರಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿದುಬಂದಿತ್ತು. ಹೀಗಾಗಿ ವೈದ್ಯರ ತಂಡ ಕೂಡಲೇ ಟ್ಯೂಬ್ ಮೂಲಕ ಮೂತ್ರವನ್ನು ಹೊರತೆಗೆದಿದ್ದಾರೆ. ಒಂದು ವಾರದ ಬಳಿಕ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವ ಬಗ್ಗೆ ಮಾಹಿತಿ ನೀಡಿ ಮನೆಗೆ ಕಳುಹಿಸಲಾಗಿದ್ದು, ಆಡಮ್ಸ್ ಸದ್ಯ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.